ಕೊರೊನಾ ಎರಡನೇ ಅಲೆಯಲ್ಲೂ ಕ್ಷೇತ್ರದ ಜನತೆಗೆ ಕರುನಾಜನಕರಾ ಕೆ.ಎಫ್.ಸಿ.ಎಸ್.ಸಿ. ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ…!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಪ್ರಪ್ರಥಮಬಾರಿಗೆ ರಾಜ್ಯಕ್ಕೆ ಕೊರೊನಾ ಸಂಕಷ್ಟ ಎದುರಾದಾಗ ಮತಕ್ಷೇತ್ರದ ಜನರಿಗಾಗಿ ಹಗಲಿರುಲು ಶ್ರಮಿಸಿ ಹೊರರಾಜ್ಯದ ಕೂಲಿ ಕಾರ್ಮಿಕರನ್ನು ಮರಳಿ ತರುವುದರಿಂದ ಹಿಡಿದು ಸುಮಾರು ೩ ಕೋಟಿ ಹಣದಲ್ಲಿ ಕಾರ್ಮಿಕರ ಕುಟುಂಬಕ್ಕೆ ೧ ತಿಂಗಳಿಗಾವು ಆಹಾರ ಕಿಟ್ ವಿತರಿಸಿ ಮಾದರಿ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ ಅವರು ಸದ್ಯದ ಕೊರೊನಾ ಎರಡನೇ ಅಲೆಯಲ್ಲಿಯೂ ತಮ್ಮ ಶ್ರಮವನ್ನು ಮುಂದುವರೆಸಿದ್ದಾರೆ.
ಹೌದು, ಕೊರೊನಾ ಎರಡನೇ ಅಲೆಯು ರಾಜ್ಯವೇ ಸಂಕಷ್ಟದೊಳಗಾಗಿದೆ. ಆದರೆ ಕ್ಷೇತ್ರದ ಜನರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಮುದ್ದೇಬಿಹಾಳ ತಾಲೂಕಿನಲ್ಲಿ ಕೊರೊನಾ ರೋಗಿಗಳಿಗೆ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಪೌಷ್ಠಿಕ ಕೊರತೆಯಾಗದಂತೆ ಪ್ರತಿದಿನವೂ ಪೌಷ್ಠಿಕ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದೆ. ಇದಲ್ಲದೇ ರಾಜ್ಯ ಸರಕಾರದ ಲಾಕ್‌ಡೌನ್ ನಿಯಮಾವಳಿಗಳನ್ನು ಪಾಲನೆ ಮಾಡುವಲ್ಲಿ ಪೂರ್ಣದಿನವನ್ನು ಸೇವೆಗೆ ಮುಡಿಪಾಗಿಡುತ್ತಿರುವ ಪೊಲೀಸ ಸಿಬ್ಬಂದಿಗಳಿಗೂ ಪೌಷ್ಠಿಕ ಆಹಾರ ಕಿಟ್‌ಗಳನ್ನು ಎ.ಎಸ್.ಪಾಟೀಲ ನಡಹಳ್ಳಿ ಅವರು ಕುಟುಂಬ ವಿತರಿಸುವ ಮೂಲಕಿ ದಾಹೋಸ ನಿಲಯಕ್ಕೆ ಅರ್ಥ ಸಿಗುವಂತೆ ಮಾಡಿದ್ದಾರೆ.


ಕೋವಿಡ್ ರೋಗಿಉ ಹಾಗೂ ಆರೋಗ್ಯ ಸಿಬ್ಬಂದಗಳ ಕಿಟ್:
ತಾಲೂಕಿನಲ್ಲಿ ಕೋವಿಡ್ ದೃಢಪಟ್ಟು ಸರಕಾರಿ ತಾಲೂಕಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಗಾಗಿರುವ ರೋಗಿಗಳಿಗೆ ಪೌಷ್ಠಿಕ ಆಹಾರದ ಕಡಿಮೆಯಾಗ ಬಾರದು ಎಂಬ ನಿಟ್ಟಿನಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಕುಟುಂಬವು ಪ್ರತಿದಿನವೂ ೪ ರಿಂದ ೫ ತರಹದ ಮೊಳಕೆಯೊಡೆದ ಕಾಳುಗಳು, ಮೊಟ್ಟೆ, ಕಿತ್ತಲೆ ಹಣ್ಣು, ಪೇಪರ್ ಪೇಟ್ ಮತ್ತು ಚಮಚೆ ಒಳಗೊಂಡ ಆಹಾರ ಕಿಟ್‌ನ್ನು ವಿತರಿಸಲಾಗುತ್ತಿದೆ.
ಪೊಲೀಸರಿಗೂ ಕಡಿಮೆಯಾಗದಿರಲಿ ಪೌಷ್ಠಿಕಾಂಶ:
ಈಗಾಗಲೇ ರಾಜ್ಯ ಸರಕಾರ ಕೊರೊನಾ ದುಸ್ಥಿತಿಯನ್ನು ಹೋಗಲಾಡಿಸಲು ಸಾಕಷ್ಟು ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಆದರೆ ಇಂತಹ ನಿಯಮಗಳು ಜಾರಿಯಾಗಬೇಕಾದರೆ ಪೊಲೀಸರ ಶ್ರಮ ಬಹಳಷ್ಟು ಇರುತ್ತದೆ. ಆದ್ದರಿಂದ ಲಾಕ್‌ಡೌನ್ ಸಮಯದಲ್ಲಿ ಹಗಲು ರಾತ್ರಿ ಎನ್ನದೇ ಜನರ ಸೇವೆಗಾಗಿ ದುಡಿಯುತ್ತಿರುವ ಪೊಲೀಸರಿಗೂ ಪೌಷ್ಠಿಕ ಕೊರತೆಯಾಗಬಾರದು ಎಂಬ ನಿಟ್ಟಿನಲ್ಲಿ ಪ್ರತಿದಿನವೂ ೪ ರಿಂದ ೫ ತರಹದ ಮೊಳಕೆಯೊಡೆದ ಕಾಳುಗಳು, ಮೊಟ್ಟೆ, ಕಿತ್ತಲೆ ಹಣ್ಣು, ಪೇಪರ್ ಪ್ಲೇಟ್ ಹಾಗೂ ಚಮಚ ಸೇರಿದಂತೆ ಬಾಳೆಹಣ್ಣು, ಶುದ್ಧ ನೀರಿನ ಬಾಟಲಿ ವಿತರಿಸುತ್ತಿದ್ದಾರೆ.
ಕಾರ್ಯಕರ್ತರಿಗೆ ಅಭಿನಂದಿಸಿದ ಶಾಸಕ ನಡಹಳ್ಳಿ:
ಕಳೆದ ಎರಡು ದಿನಗಳ ಹಿಂದೆ ಕೊರೊನಾದಿಂದ ಪಾರಾಗಿ ಹೋ ಕ್ವಾರೆಂಟೈನ್‌ನಲ್ಲಿರುವ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ತಮ್ಮ ಪತ್ನಿ ಅಕ್ಕಮಹಾದೇವಿ ಹಾಗೂ ಮಗ ಭರತ ಬಡವರಿಗೆ ಪೌಷ್ಠಿಕ ಆಹಾರ ಕಿಟ್ ವಿತರಿಸುವ ಯೋಜನೆ ಹಾಕಿದ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ಸೇವೆಗೆ ಬೆನ್ನೆಲಬಾಗಿ ನಿಂತುಕೊಂಡು ಕುಟುಂಬದ ನಿಲುವನ್ನು ಪೂರ್ಣವಾಗುವಂತೆ ನೋಡಿಕೊಂಡಿರುವ ತಮ್ಮ ಕಾರ್ಯಕರ್ತರಾದ ಚೇತನ ಶಿವಸಿಂಪಿ, ವಿಕ್ರಮ್ ಬಿರಾದಾರ ಹಾಗೂ ರಾಜಶೇಖರ ಹೊಳಿ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರಿಗೆ ದೂರವಾಣಿ ಮೂಲಕವೇ ಧನ್ಯವಾಗಳನ್ನು ತಿಳಿಸಿ ಶಾಸಕರು ಅಭಿನಂದಿಸಿದ್ದಾರೆ.

 

Be the first to comment

Leave a Reply

Your email address will not be published.


*