ಜಿಲ್ಲಾ ಸುದ್ದಿಗಳು
ಭಟ್ಕಳ
ಉತ್ತರ ಕನ್ನಡಜಿಲ್ಲೆಯ ಮೊಗೇರ ಸಮಾಜದವರಿಗೆ ನೀಡುತ್ತಿರುವ ಪ್ರವರ್ಗ 1ರ ಪ್ರಮಾಣ ಪತ್ರ ಸ್ಥಗಿತಗೊಳಿಸಿ ಈ ಹಿಂದಿನಂತೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಮೊಗೇರ ಸಮಾಜದ ವತಿಯಿಂದ ಭಟ್ಕಳದಲ್ಲಿ ನಡೆತಿರುವ 9 ದಿನದ ಧರಣಿ ಸಂಧರ್ಭದಲ್ಲಿ ಮಮಾಧ್ಯಮದವರೊಂದಿಗೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಎಫ್.ಕೆ.ಮೊಗೇರ್ ಭಟ್ಕಳ್ ಶಾಸಕ ಸುನಿಲ್ ನಾಯ್ಕ ವಿಧಾನಸಭೆಯಲ್ಲಿ ಕೇಳಿದ ಅಸ್ಪಷ್ಟ ಪ್ರಶ್ನೆಯಿಂದ ನಮ್ಮ ಮೊಗೇರ್ ಸಮಾಜಕ್ಕೆ ತುಂಬಾ ನಷ್ಟವಾಗಿದೆ, ಶಾಸಕ ಸುನಿಲ್ ನಾಯ್ಕ ಕೇಳಿದ ಪ್ರಶ್ನೆಯಿಂದ ನಮ್ಮ ಮೊಗೇರ್ ಸಮಾಜಕ್ಕೆ ಯಾವುದೇ ರೀತಿಯ ಲಾಭ ಆಗಲಿಲ್ಲ ಎಂದು ತಿಳಿಸಿದರು.
ಮೊಗೇರ ಸಮಾಜದವರಿಗೆ ಈ ಹಿಂದೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ ಸರಕಾರ ಮೊಗೇರರಿಗೆ ಪ್ರಸಕ್ತ ಮನೆಮನೆ ದಾಖಲಾತಿ ಒದಗಿಸುವ ಸಂದರ್ಭದಲ್ಲಿ ಪ್ರವರ್ಗ 1ರ ಪ್ರಮಾಣ ಪತ್ರ ನೀಡಲು ಸರಕಾರ ಮುಂದಾಗಿದೆ. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದ ಮೊಗೇರರಿಗೆ ಪ್ರವರ್ಗ 1ರಲ್ಲಿ ಪ್ರಮಾಣ ಪತ್ರ ನೀಡುವುದಕ್ಕೆ ಸಮಾಜದಿಂದ ತೀವ್ರ ವಿರೋಧವಿದೆ. ನಾವು ಈಗಾಗಲೇ ಪ್ರವರ್ಗ 1ರ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆಗೆ ವಾಪಸ್ ನೀಡಿದ್ದೇವೆ. ನಮಗೆ ಸರಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನೇ ನೀಡಬೇಕು. ನಮಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ತಿಳಿಸಿದರು.
Be the first to comment