ಜಾಲಿಪಂಚಾಯತಿ ಚುನಾವಣೆ: ಶೇ 64.58ರಷ್ಟು ಮತದಾನ 

ವರದಿ ಜೀವೋತ್ತಮ್ ಪೈ , ಭಟ್ಕಳ್

ಜಿಲ್ಲಾ ಸುದ್ದಿಗಳು 

ಭಟ್ಕಳ

ಇಲ್ಲಿನ ಜಾಲಿ ಪಟ್ಟಣ ಪಂಚಾಯತ್‌ ನ ಚುನಾವಣೆಯು ಸೋಮವಾರದಂದು ಬಿಗಿ ಭದ್ರತೆಯಲ್ಲಿ20 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ನಡೆದಿದ್ದೂ ಶೇ. 68.58 ರಷ್ಟು ಮತದಾನ ವಾಗಿದೆ.    ಜಾಲಿ ಪಟ್ಟಣ ಪಂಚಾಯತ್ ಗೆ ಒಟ್ಟೂ 20 ಸ್ಥಾನಗಳಿದ್ದು, ಇವುಗಳಲ್ಲಿ ಈಗಾಗಲೇ7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಬಾಕಿ ಇರುವ 13 ಸ್ಥಾನಗಳಿಗೆ ಸೋಮವಾರದಂದು ಮತದಾನ ನಡೆದಿದೆ, 13 ಸ್ಥಾನಗಳಿಗೆ ಒಟ್ಟ 35, ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ ಬಿಜೆಪಿ 7ರಲ್ಲಿ, ಕಾಂಗ್ರೆಸ್ 8ರಲ್ಲಿ ಸ್ಪರ್ಧೆ ಮಾಡಿದ್ದರೆ,ಉಳಿದವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಜಾಲಿ ಪಟ್ಟಣ ಪಂಚಾಯತ್ ನ 13 ವಾರ್ಡಗಳಲ್ಲಿ ಒಟ್ಟೂ 10,189 (5110ಪುರುಷರು, 5079 ಮಹಿಳೆಯರು) ಮತದಾರರಿದ್ದಾರೆ, ಸೋಮವಾರದಂದು ಮುಂಜಾನೆ 7ರಿಂದ ಸಂಜೆ 5 ಗಂಟೆಯ ವರೆಗೆ ನಡೆದ ಚುನಾವಣೆಯಲ್ಲಿ ಒಟ್ಟು 6580 ಜನರು ಮತ ಚಲಾಯಿಸಿದ್ದು, ಈ ಪೈಕಿ 3235 ಪುರುಷರು ಹಾಗೂ 3345 ಮಹಿಳೆಯರು ಮತ ಚಲಾಯಿಸಿ ಮಹಿಳೆಯರೇ ಅತ್ಯಧಿಕವಾಗಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಬಂದ ಪ್ರತಿಯೊಬ್ಬರನ್ನು ಸ್ಕಾನಿಂಗ್‌ ಮಾಡಿ ಸಾನಿಟೈಸರ್ ನೀಡಲಾಯಿತು,

CHETAN KENDULI

ಸಂದರ್ಧದಲ್ಲಿ ತಹಸೀಲ್ದಾರ ರವಿಚಂದ್ರ, ಚುನಾವಣಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ನಾಗರಾಜ ನಾಯ್ಕ, ಮತಗಟ್ಟೆಗೆ ತೆರಳಿಮತದಾನವನ್ನು ವೀಕ್ಷಿಸಿದರು. ಇನ್ನು, 13 ಮತಗಟ್ಟೆಗಳಲ್ಲಿ ಪೊಲೀಸ್ ಸಿಬ್ಬಂದಿ ಸೆಕ್ಟರ್‌ ಹಾಗೂ ನೊಡಲ್‌ ನೇಮಕ ಮಾಡಲಾಗಿತ್ತು. ಸಿಪಿ ಆಯ್‌ ದಿವಾಕರ್‌, ಮಹಾಬಲೇಶ್ವರ ನಾಯ್ಕ ನಗರ ಠಾಣೆ ಪಿಎಸ್‌ ಆಯ್‌ ಸುಮಾ ಆಚಾರ್ಯ , ಪಿ.ಹೆಚ್‌. ಕುಡಗುಂಟಿ, ನ ಗ್ರಾಮಿಣ ಠಾಣಾ ಪಿಎಸ್‌ ಆಯ್‌ ಭರತ್‌ ಕುಮಾರ ಸೇರಿದಂತೆ 100 ಅಧಿಕ ಪೋಲಿಸ್ ಸಿಬ್ಬದಿ ಬಂದೋಬಸ್ತನಲ್ಲಿ ಮತದಾನ ಶಾಂತಿಯುತವಾಗಿ ನಡೆಯಲು ಕರ್ತವ್ಯ ನಿರ್ವಹಿಸಿದರು.ಅಧಿಕಾರಿಗಳನ್ನೂ ಕರ್ತವ್ಯ ನಿರ್ವಹಿಸಿದರು.

Be the first to comment

Leave a Reply

Your email address will not be published.


*