ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದರ್ಗಜೋಗಿಹಳ್ಳಿ ಗ್ರಾಮ ಪಂಚಾಯಿತಿಯ ಚುನಾವಣೆ ಘೋಷಣೆಯಾಗಿದ್ದು ಸ್ಥಳೀಯ ಅಭ್ಯರ್ಥಿ ಸುರೇಶ್ ಕುಮಾರ್ ಎನ್ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ತಮ್ಮ ವಾರ್ಡಿನ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದರು ವೃತ್ತಿಯಲ್ಲಿ ವಕೀಲರಾಗಿರುವ ಸುರೇಶ್ ಅವರು ತಮ್ಮ ವಿಭಿನ್ನ ರೀತಿಯ ಪ್ರಣಾಳಿಕೆಯನ್ನು ವ್ಯಕ್ತಪಡಿಸುವ ಮೂಲಕ ಮತದಾರರ ಗಮನವನ್ನು ಸೆಳೆದರು
ನಾನು ಸಹ ಇದೆ ಗ್ರಾಮಕ್ಕೆ ಸೇರಿದ್ದು ಹಲವಾರು ವರ್ಷಗಳಿಂದ ಗ್ರಾಮದ ಅಭಿವೃದ್ಧಿಯನ್ನು ನೋಡುತ್ತಿದ್ದೇನೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಸಾಗುತ್ತಿಲ್ಲ ಚುನಾವಣೆ ಸಮೀಪಕ್ಕೆ ಬಂದ ತಕ್ಷಣ ರಾಜಕೀಯ ನಾಯಕರು ಎಚ್ಚೆತ್ತುಕೊಂಡು ಮತಯಾಚನೆಗೆ ಮುಂದಾಗುತ್ತಾರೆ ಆದರೆ ಅವರು ತಿಳಿದಿರುವ ಹಾಗೆ ಮತದಾರರು ದಡ್ಡರಲ್ಲ ಯಾವುದೇ ರೀತಿಯ ಕುತಂತ್ರಗಳು ನಡೆಯುವುದಿಲ್ಲ ಈಗ ಮತದಾರರು ಎಚ್ಚೆತ್ತುಕೊಂಡಿದ್ದಾರೆ ಹಾಗೂ ಬುದ್ಧಿವಂತರಾಗಿದ್ದಾರೆ ರಾಜಕೀಯ ನಾಯಕರ ಕುತಂತ್ರಕ್ಕೆ ಸರಿಯಾದ ಉತ್ತರವನ್ನು ಸದ್ಯದ ಚುನಾವಣೆಯಲ್ಲಿ ನೀಡಲಿದ್ದಾರೆ ಈ ಬಾರಿ ಸ್ಥಳೀಯ ಹಿರಿಯ ಮುಖಂಡರ ಮಾರ್ಗದರ್ಶನದೊಂದಿಗೆ ಹಾಗೂ ಯುವಕರ ಒತ್ತಾಯದ ಮೇರೆಗೆ ನಾನೇ ಅಭ್ಯರ್ಥಿಯಾಗಿದ್ದೇನೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಗ್ರಾಮಪಂಚಾಯತಿ ವತಿಯಿಂದ ಸಿಗಬಹುದಾದಂತಹ ಎಲ್ಲಾ ರೀತಿಯ ಸಹಾಯ ಮತ್ತು ಅನುದಾನಗಳು ಸಮರ್ಪಕ ರೀತಿಯಲ್ಲಿ ಸಿಗುವಂತೆ ಸಾರ್ವಜನಿಕರೊಂದಿಗೆ ಸದಾ ಸಂಪರ್ಕದಲ್ಲಿದ್ದು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಸ್ಥಳೀಯ ಸ್ವತಂತ್ರ ಅಭ್ಯರ್ಥಿ ಸುರೇಶ್ ಕುಮಾರ್ ತಿಳಿಸಿದರು ಮತ್ತು ಗ್ರಾಮಸ್ಥರಲ್ಲಿ ತಮಗೆ ಮತ ನೀಡುವಂತೆ ಸ್ವತಂತ್ರ ಅಭ್ಯರ್ಥಿ ಸುರೇಶ್ ಮನವಿ ಮಾಡಿದರು
ಈ ಸಂದರ್ಭದಲ್ಲಿ ಮಾತಾಡಿದ ಸ್ಥಳೀಯ ಯುವಕರು ಮಾತನಾಡಿ ನಮಗೆ ಉತ್ತಮ ನಾಯಕ ದೊರೆತಿದ್ದು ಈ ಬಾರಿ ಸುರೇಶ್ ಕುಮಾರ್ ರವರನ್ನು ಜಯಗಳಿಸುವಲ್ಲಿ ತಾವು ಸಹ ಪಾಲ್ಗೊಂಡು ತಮ್ಮ ಮತವನ್ನು ಸುರೇಶ್ ಕುಮಾರ್ ರವರಿಗೆ ನೀಡುವ ಮುಖಾಂತರ ಅವರನ್ನು ಜಯಶೀಲರನ್ನಾಗಿ ಮಾಡುತ್ತೇವೆ ತಿಳಿಸಿದರು
ಸ್ಥಳೀಯ ಬಿಜೆಪಿ ಮುಖಂಡರಾದ ಜೊ.ನಾ ಮಲ್ಲಿಕಾರ್ಜುನ ಮಾತನಾಡಿ ಬಿಜೆಪಿ ಪಕ್ಷದ ಆರಂಭಿಕ ದಿನಗಳಿಂದಲೂ ಪ್ರಸ್ತುತ ಅಭ್ಯರ್ಥಿ ಸುರೇಶ್ ಮತ್ತು ಅವರ ತಂದೆ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು. ಮೂಲ ಬಿಜೆಪಿಯ ಮುಖಂಡರು ಕಾರ್ಯಕರ್ತರು ಸುರೇಶ್ ಕುಮಾರ್ ರವರಿಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಹಾಗೂ ಈ ಬಾರಿ ದರ್ಗಾಜೋಗಹಳ್ಳಿಯ ಮೂರನೇ ವಾರ್ಡಿನಿಂದ ಸುರೇಶ್ ಅವರನ್ನು ಬಹುಮತಗಳ ಅಂತರದಿಂದ ಜಯ ಗೊಳಿಸುವಲ್ಲಿ ಶ್ರಮಿಸಲಾಗುವುದು ಎಂದು ತಿಳಿಸಿದರು.
Be the first to comment