ಕೊಯಿರಾ ಗ್ರಾಮದಲ್ಲಿ ೬೫ ಲಕ್ಷ ರೂವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ : ಶಾಸಕ ಎಲ್.ಎನ್.ನಾರಾಯಣಸ್ವಾಮಿ

ವರದಿ: ಹೈದರ್‌ಸಾಬ್ ಕುಂದಾಣ

ರಾಜ್ಯ ಸುದ್ದಿ 

CHETAN KENDULI

ದೇವನಹಳ್ಳಿ: ತಾಲೂಕಿನಾದ್ಯಂತ ಕಾಂಕ್ರಿಟ್ ರಸ್ತೆ, ಬಸ್‌ನಿಲ್ದಾಣ, ಸಮುದಾಯ ಭವನ ನಿರ್ಮಾಣ,ರಸತೆ ಅಗಲೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಖುಸ್ಥಾಪನೆ ನೆರವೇರಿದ್ದು ೬ ತಿಂಗಳ ಅವಧಿಯಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದೇ ನನ್ನ ಅಜೆಂಡ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದಲ್ಲಿ ೬೫ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ದ್ವಿಪಥದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನ ಸಾದಹಳ್ಳಿ, ಕೊಯಿರಾ, ಬೂದಿಗೆರೆ ರಸ್ತೆ ಅಗಲೀಕರಣ ಸೇರಿದಂತೆ ೨೧ ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಖುಸ್ಥಾಪನೆ ನೆರವೇರಿಸಲಾಗಿದೆ. ಡಾಬಾ ಗೇಟ್‌ನಿಂದ ಕೆರೆಕೋಡಿ ವರೆಗೆ ೫ಕೋಟಿ ೧೦ಲಕ್ಷ ವೆಚ್ಚದ ರಸ್ತೆ ಅಗಲೀಕರಣ, ಸಾದಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ, ಹೈಮಾಸ್ಟ್ ವಿದ್ಯುತ್ ದೀಪ, ಹೈಟೆಕ್ ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ೭ ರ ಮೂಲಕ ಉಗನವಾಡಿ ವರೆಗೆ ೫ ಕೋಟಿ ೭೯ ಲಕ್ಷ ರೂ.ಗಳ ರಸ್ತೆ, ಕೊಯಿರಾ ಗ್ರಾಮದಲ್ಲಿ ೬೫ ಲಕ್ಷ ರೂವೆಚ್ಚದ ರಸ್ತೆ ಕಾಮಗಾರಿ, ೫೦ಲಕ್ಷ ವೆಚ್ಚದ ಸಮುದಾಯಭವನ, ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ತಾಲೂಕಿನ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಜೆಡಿಎಸ್ ಯುವ ಮುಖಂಡ ರಬ್ಬನಹಳ್ಳಿ ಪ್ರಭಾಕರ್ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಜತೆಗೆ ಅತೀ ಜರೂರಾಗಿದ್ದ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಅಭಿವೃದ್ಧಿಯೇ ನನ್ನ ಗುರಿಯನ್ನು ಹೊಂದಿ, ಎಲ್ಲರೊಂದಿಗೆ ಒಟ್ಟುಗೂಡಿ ಕೆಲಸ ಮಾಡುತ್ತಿದ್ದಾರೆ. ಸರಕಾರದ ಅನುದಾನ ವಿಳಂಬವಾದ ಕಾರಣದಿಂದ ಕಾಮಗಾರಿಗಳು ನೆನೆಗುದ್ದಿಗೆ ಬಿದ್ದಿದ್ದವು. ಇದೀಗ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳು ನಡೆಯುತ್ತಿವೆ. ನಮ್ಮ ಕ್ಷೇತ್ರದ ಶಾಸಕರ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿರುವುದು ಸ್ವಾರ್ಥಕ್ಕಾಗಿ ಅದಕ್ಕೆ ಯಾರು ಸಹ ಕಿವಿಗೊಡುವುದಿಲ್ಲ ಎಂದರು.

ಈ ವೇಳೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ತಾಪಂ ಮಾಜಿ ಸದಸ್ಯ ಎಸ್.ಮಹೇಶ್, ಮಾಜಿ ಉಪಾಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಲೂಕು ಸೊಸೈಟಿ ಅಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಆರ್.ಭರತ್‌ಕುಮಾರ್, ಪ್ರಧಾನ ಕಾಯದರ್ಶಿ ಹೊಸಹಳ್ಳಿ ಟಿ.ರವಿ, ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ನೆರಗನಹಳ್ಳಿ ಶ್ರೀನಿವಾಸ್, ಮುಖಂಡರಾದ ಹುರುಳುಗುರ್ಕಿ ಶ್ರೀನಿವಾಸ್, ಜಯರಾಮಯ್ಯ, ಸೊಣ್ಣೇಗೌಡ, ಸೋಮಶೇಖರ್, ವೆಂಕಟೇಶ್, ಶ್ರೀನಿವಾಸಮೂರ್ತಿ, ಶಿವಾನಂದ್, ಎ.ಇ.ಇ. ಕೃಷ್ಣಪ್ಪ, ಎಂಜಿನಿಯರ್ ನಾರಾಯಣಸ್ವಾಮಿ ಇದ್ದರು.

Be the first to comment

Leave a Reply

Your email address will not be published.


*