ರಾಜ್ಯ ಸುದ್ದಿ
ದೇವನಹಳ್ಳಿ: ಗ್ರಾಮೀಣ ಭಾಗದಲ್ಲಿ ಜನರು ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ದಾನಿಗಳ ಸಹಕಾರದಲ್ಲಿ ಆಹಾರದ ದಿನಸಿ ಕಿಟ್‌ಗಳನ್ನು ಪ್ರತಿ ಗ್ರಾಮಸ್ಥರಿಗೆ ನೀಡಲಾಗುತ್ತಿದೆ ಎಂದು ಕಾರಹಳ್ಳಿ ಗ್ರಾಪಂ ಸದಸ್ಯ ಕೆಂಪಣ್ಣ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಸೊಣ್ಣೇನಹಳ್ಳಿ ಗ್ರಾಮದಲ್ಲಿ ಉಚಿತ ದಿನಸಿ ಕಿಟ್‌ಗಳನ್ನು ಗ್ರಾಮಸ್ಥರಿಗೆ ವಿತರಿಸಿ ಅವರು ಮಾತನಾಡಿದರು. ಸಾಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಪ್ರತಿಯೊಬ್ಬರು ಬದುಕಬೇಕು. ಮೇಲು, ಕೀಳು ಭಾವನೆ ಬಿಡಬೇಕು. ನಿರಂತರವಾಗಿ ಕಷ್ಟದಲ್ಲಿರುವವರಿಗೆ ಸಹಕಾರ ನೀಡುವ ಕಾರ್ಯಕ್ಕೆ ಪ್ರತಿ ಜನರು ಮುಂದಾಗಬೇಕು. ಈಗಾಗಲೇ ಎನ್‌ಜಿಒ ಕಾರ್ಯಕರ್ತೆ ಹರ್ಷಿಣಿ ಅವರ ಸಹಕಾರದಲ್ಲಿ ಸುಮಾರು ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಎನ್‌ಜಿಒ ಕಾರ್ಯಕರ್ತೆ ಹರ್ಷಿಣಿ ಮಾತನಾಡಿ, ನಮ್ಮನ್ನು ಪ್ರೋತ್ಸಾಹಿಸಿರುವ ಎನ್‌ಜಿಒ ಮುಖ್ಯಸ್ಥರಾದ ಉಮಾ ಮಹದೇವನ್ ಮತ್ತು ರಾಜೇಂದ್ರ ಅವ ಮಾರ್ಗದರ್ಶನದಲ್ಲಿ ಸವಾದ ಬದುಕು ಸಂಸ್ಥೆಯ ಅಜಿತ್ ಭಾಸ್ಕರನ್ ಅವರ ನೇತೃತ್ವದಲ್ಲಿ ೪ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಭುವಿ ಇಂಡಿಯ ಸಂಸ್ಥೆಯ ನಿತಿನ್ ಅವರು ೩.೫ಲಕ್ಷ ರೂ.ಗಳನ್ನು ಟಾಪ್-೧೯ನೇ ಸ್ಥಾನದಲ್ಲಿರುವ ಸ್ವಾನ್ ಮತ್ತು ಕಿಟೋ ಸಂಸ್ಥೆಯ ಸಮಾಜ ಸೇವೆ ಗುರ್ತಿಸಿ ನೀಡಿದ್ದಾರೆ.
ಭಾರತೀಯ ಕಾರ್ಮಿಕ ಆಯುಕ್ತರಾದ ಉಮೇಶ್, ಪ್ರೇಮ್ ಅವರು ವೈಯಕ್ತಿಕವಾಗಿ ಸಹಕಾರ ನೀಡಿರುತ್ತಾರೆ. ಜತೆಗೆ ಯಲಹಂಕದ ರೋಟರಿ ಸಂಸ್ಥೆಯ ಬ್ರಿಜು ಅವರು ಸಹ ಸಹಕಾರ ನೀಡಿದ್ದು, ಸಮಾಜ ಸೇವಕ ಸತೀಶ್‌ಗೌಡ ಜೊತೆಗೂಡಿ ಸಮಾಜದಲ್ಲಿ ಬಡವರ್ಗಗಳಿಗೆ ಗುರ್ತಿಸಿ ಅವರಿಗೆ ಆಹಾರದ ದಿನಸಿ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಈ ವೇಳೆಯಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಪಟಾಲಪ್ಪ, ಗ್ರಾಮಸ್ಥರಾದ ಎನ್.ಮುನಿರಾಜು, ವೆಂಕಟೇಶ್, ಮೂರ್ತಿ, ಕಾರಹಳ್ಳಿ ಎಂ.ಅರುಣ, ಮತ್ತಿತರರು ಇದ್ದರು.
Be the first to comment