ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಬ್ಬ ದಲಿತ ವಿರೋಧಿ, ಸುಮಾರು ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ದಲಿತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ತಾಲೂಕ ಅಧ್ಯಕ್ಷ ಮಂಜುನಾಥ್ ಛಲವಾದಿ ಹೇಳಿದರು.
ಕಳೆದ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರು ಹೊಟ್ಟೆ ಪಾಡಿಗೆ ಬಿಜೆಪಿ ಸೇರಿದ್ದಾರೆ ಎಂದು ಹೇಳಿದ ಹೇಳಿಕೆ ವಿರುದ್ದ ಇಂದು ಬಿಜೆಪಿ ಎಸ್ ಸಿ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಾಲೂಕ ಅಧ್ಯಕ್ಷ ಛಲವಾದಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡಿಸಿದ್ದರು.
ತಾವು ಮೊದಲು ಜೆಡಿಎಸ್ ನಲ್ಲಿ ಇದ್ದವರು ಕಾಂಗ್ರೆಸ್ ಪಕ್ಷಕ್ಕೆ ಹೊಟ್ಟೆಪಾಡಿಗೆ ನೀವು ಹೋಗಿದ್ದಿರಿ, ನಾವು ದಲಿತರು ಸ್ವಾಭಿಮಾನಿಗಳು, ನಮಗೆ ಗೌರವ ಸಿಗುವ ಪಕ್ಷದಲ್ಲಿ ನಾವಿರಲು ಡಾ.ಬಾಬಾಸಾಹೇಬರು ನಮಗೆ ಕಾನೂನು ಬದ್ದ ಹಕ್ಕು ನೀಡಿದ್ದಾರೆ. ನಿಮ್ಮ ಹೇಳಿಕೆ ಇಡಿ ದಲಿತ ಸಮುದಾಯವನ್ನು ಅಪಮಾನಗೊಳಿಸಿದೆ. ಶೀಘ್ರವೇ ನಿಮ್ಮ ಹೇಳಿಕೆ ಹಿಂಪಡೆದು, ದಲಿತ ಸಮುದಾಯಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಪಕ್ಷ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಎರಡು ಬಾರಿ ಬಾಂಬೆ ಉತ್ತರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಆಶೆಗೆ ಖರ್ಗೆ, ಪರಮೇಶ್ವರ್, ಆಂಜೆನೇಯ ಅವರನ್ನು ಸೋಲಿಸಿ ಮೂಲೆ ಗುಂಪು ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಇದೆ ಸಮಯದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಸಾಸನೂರ್, ಯುವ ಮೋರ್ಚಾ ಅಧ್ಯಕ್ಷ ಪುನೀತ ಹಿಪ್ಪರಗಿ, ಮಂಡಲ ಕಾರ್ಯದರ್ಶಿ ಮಂಜುನಾಥ್ ರತ್ನಾಕರ್ ಮಾತನಾಡಿದರು.
ಬಿಜೆಪಿ ಎಸ್ ಮೋರ್ಚಾ ಪದಿಕಾರಿಗಳಾದ, ಜಿಲ್ಲಾ ಉಪಾಧ್ಯಕ್ಷರಾದ ಕಾಶಿನಾಥ ಬಬ್ರುಕರ್, ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ಶಿವರಾಜ್ ರಾಠೋಡ್, ಮಂಜುನಾಥ್ ಅರಸನಾಳ, ಉಪಾಧ್ಯಕ್ಷರಾದ, ಶಶಿ ಹಂಗರಗಿ, ವಿರೇಶ್ ಭಜಂತ್ರಿ, ಶಾಂತಪ್ಪ ಕಣಕಾಲ, ಶೇಕು ಆಲೂರ್, ಕಾರ್ಯದರ್ಶಿಗಳಾದ ಪುನೀತ್ ಚವ್ಹಾಣ, ಅಪ್ಪಣ್ಣ ವಡ್ಡರ, ಮಾಯಪ್ಪ ಮಾದರ್, ಪ್ರವೀಣ್ ಮಾದರ್ ಹಾಗೂ ಕಾರ್ಯಕಾರಣಿ ಸದಸ್ಯರು ಹಾಜರಿದ್ದರು
Be the first to comment