ಗ್ರಾಮ ಪಂಚಾಯತ ಸಂಜೀವಿನಿ ಒಕ್ಕೂಟದ ಮಹಿಳೆಯರಿಗಾಗಿ ಘನ ತ್ಯಾಜ್ಯ ನಿರ್ವಹಣೆಯ ಕುರಿತು ೫ ದಿನದ ವಸತಿಯುತ ತರಬೇತಿ ಕಾರ್ಯಗಾರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು, ಗ್ರಾಮೀಣ ಪರಿಸರ ಸಮುದಾಯ ಜಾಗೃತಿ ಸಂಸ್ಥೆ (ರೀಚ್) ಬಾಗಲಕೋಟೆ ಹಾಗೂ ಜಿಲ್ಲಾ ಪಂಚಾಯತಿ, ಬಾಗಲಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತ ಸಂಜೀವಿನಿ ಒಕ್ಕೂಟದ ಮಹಿಳೆಯರಿಗಾಗಿ ಘನ ತ್ಯಾಜ್ಯ ನಿರ್ವಹಣೆಯ ಕುರಿತು ೫ ದಿನದ ವಸತಿಯುತ ತರಬೇತಿ ಕಾರ್ಯಗಾರವನ್ನು ದಿನಾಂಕ ೦೮.೧೧.೨೦೨೧ ರಿಂದ ೧೨.೧೧.೨೦೨೧ ರವರೆಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿಧ್ಯಾಲಯಯಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರಾಸ್ತಾವಿಕವಾಗಿ ಕಾರ್ಯಗಾರದ ಕುರಿತು ಜಿ.ಎನ್.ಸಿಂಹ, ನಿರ್ದೇಶಕರು, ರೀಚ್ ಸಂಸ್ಥೆ ಇವರು ಮಾತನಾಡುತ್ತಾ ರೀಚ್ ಸಂಸ್ಥೆಯ ಕಿರು ಪರಿಚಯದ ಜೊತೆಗೆ ಮಹಿಳೆಯರಿಗೆ ಘನ ತ್ಯಾಜ್ಯದ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ತಿಳಿಸುತ್ತಾ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಅದನ್ನು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ. ಇಂದು ಮಾನವ ಎಲ್ಲಾ ರಂಗದಲ್ಲಿ ಪರಿಸರವನ್ನು ಮಲೀನ ಮಾಡುತ್ತಾ ಬಂದಿದ್ದು. ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡುತ್ತಾ ಬರುತ್ತಿದ್ದು ಅದನ್ನು ತಡೆಗಟ್ಟುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಉಮಾಶಂಕರ್, ಸಹಾಯಕ ತರಬೇತಿದಾರರು, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇವರು ಮಾತನಾಡುತ್ತಾ ಎಮ್.ಜಿ.ಐ.ಆರ್.ಈ.ಡಿಯ ಪರಿಚಯದ ಜೊತೆಗೆ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ನೀಡಿ ಈ ೫ ದಿನಗಳ ತರಬೇತಿಯನ್ನು ಪಡೆದುಕೊಂಡು ಹೇಗೆ ಆದಾಯ ಪಡೆಯಬಹುದು ಮತ್ತು ಇದರಿಂದ ನಮ್ಮ ಪರಿಸರದಲ್ಲಿ ಯಾವ ರೀತಿ ಬದಲಾವಣೆಯನ್ನು ತರಬಹುದು ಎಂದು ಉದಾಹರಣೆಯ ಸಹಿತ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಸಂಜೀವಿನಿ ಒಕ್ಕೂಟದ ಮಹಿಳೆಯರಿಗಾಗಿ ಘನತ್ಯಾಜ್ಯ ನಿರ್ವಹಣೆ ಕುರಿತು ೫ ದಿನದ ವಸತಿಯುತ ತರಬೇತಿಯಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಕರಾಗಿ ಆಗಮಿಸಿದಂತಹ ಡಾ|| ಎಸ್.ಐ.ಅಥಣಿ, ವಿಸ್ತರಣಾ ನಿರ್ಧೇಶಕರು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿಧ್ಯಾಲಯ ನಮ್ಮ ಗ್ರಾಮ ಸ್ವಚ್ಛ ಗ್ರಾಮ ವಾಗಬೇಕಾದರೆ ಪ್ರತಿಯೊಂದು ಮನೆಗೂ ಶೌಚಾಲಯ ನಿರ್ಮಾಣ ಅಗತ್ಯವಾಗಿದೆ.
ಒಂದು ಸಣ್ಣ ಕಥೆಯ ಮೂಲಕ ಘನತ್ಯಾಜ್ಯ ನಿರ್ವಹಣೆಯನ್ನು ಯಾವ ತರಹ ಮಾಡಬೇಕು ಮತ್ತು ಘನತ್ಯಾಜ್ಯ ನಿರ್ವಹಣೆಯ ಮೂಲಕ ಏನೆಲ್ಲಾ ಉಪಯೋಗಗಳಿವೆ ಎಂದು ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡುತ್ತಾ ಸ್ವಚ್ಚತೆ ಜೊತೆಗೆ ಆರೋಗ್ಯವೂ ಆದಾಯವು ಬರುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾದ ಡಾ|| ಶಶಿಕುಮಾರ ಎಸ್ ಪ್ರಾಧ್ಯಾಪಕರು, ಕೃಷಿ ವಿಸ್ತರಣೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇವರು ಘನತ್ಯಾಜ್ಯ ನಿರ್ವಹಣೆ ೫ ದಿನದಲ್ಲಿ ಮುಗಿಯುವ ತರಬೇತಿಯಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಹಲವಾರು ರೀತಿಯ ಸಾವಯವ ಗೊಬ್ಬರಗಳ ತಯಾರಿಕೆ ಬಗ್ಗೆ ಮಾಹಿತಿ ಸಿಗುತ್ತದೆ ಮತ್ತು ಎರೆಹುಳು ಗೊಬ್ಬರ ಯಾವ ತರಹ ತಯಾರಿ ಮಾಡಬೇಕು ಅದರ ಲಾಭ ಮಹತ್ವದ ಬಗ್ಗೆ ಪೂರ್ಣವಾಗಿ ನಮ್ಮ ವಿಜ್ಞಾನಿಗಳು ಮಾಹಿತಿಯನ್ನು ಕೊಡುತ್ತಾರೆ. ಒಟ್ಟಾರೆ ೫ ದಿನ ಮಹಿಳೆಯರು ಸಂಪೂರ್ಣವಾದ ಮಾಹಿತಿಯನ್ನು ತೆಗೆದುಕೊಂಡು ತಮ್ಮ ಗ್ರಾಮಕ್ಕೆ ಹೋಗಿ ನಾಲ್ಕು ಜನರಿಗೆ ಮಾಹಿತಿಯನ್ನು ನೀಡಿ ಗ್ರಾಮದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕವನ್ನು ನಿರ್ಮಾಣ ಮಾಡಿ ಸಂಘದ ಮಹಿಳೆ ಘಟಕವನ್ನು ನಿರ್ವಹಿಸಿಕೊಂಡು ಹೋದರೆ ಆರ್ಥಿಕವಾಗಿ ಸಬಲರಾಗಲು ಕಂಡಿತ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಎಸ್.ಜೆ.ಎಸ್.ವೈ ಯೊಜನೆ
ಯಿಂದ ಹಿಡಿದು ಎನ್.,ಆರ್.ಎಲ್.ಎಮ್ ರವರೆಗೂ ಸ್ವ ಸಹಾಯ ಸಂಘಗಳ ಆದಾಯ ಉತ್ಪನ್ನಗಳ ಕುರಿತು ವಿವಿರಿಸುತ್ತಾ ಈ ಹೈನುಗಾರಿಕೆ ಅಭಿವೃದ್ದಿ ಯಿಂದ ಹಾಲಿನಿಂದ ಮಾತ್ರ ಆಲ್ಲ ಸಗಣಿ ಬಿಸಾಕುವ ಕಸ ಎಲ್ಲವೂ ಆದಾಯ ತರವಂತಹದ್ದು ಎಂದು ತಿಳಿಸಿದರು.
ವೇದಿಕೆಯಲ್ಲಿ ಡಾ|| ಶ್ರೀಪಾದ ವಿಶ್ವೇಶ್ವರಯ್ಯ, ನೀಲಮ್ಮ ಮೋತಿ ಇದ್ದರು.ರೇಖಾ ಬಡಿಗೇರ ನಿರೂಪಿಸಿದರು, ಬಸವರಾಜ ಚಳಗೇರಿ ವಂದಿಸಿದರು.

Be the first to comment

Leave a Reply

Your email address will not be published.


*