ಜಿಲ್ಲಾ ಸುದ್ದಿಗಳು
ಶಿರಸಿ
ದಕ್ಷಿಣ ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದಂತಹ ಶಿರಸಿಯ ಶ್ರೀಮಾರಿಕಾಂಬಾ ದೇವಾಲಯ ರಾಜ್ಯ ಹೊರ ರಾಜ್ಯಗಳಿಂದಲೂ ಭಕ್ತರನ್ನು ಹೊಂದಿರುವ ಪ್ರಮುಖ ಶ್ರದ್ಧಾ ಕೇಂದ್ರ ಪುಣ್ಯ ಕ್ಷೇತ್ರ.ಶ್ರೀ ಮಾರಿಕಾಂಬಾ ದೇವಾಲಯದ ದೈನಂದಿನ ಆಡಳಿತ ವ್ಯವಸ್ಥೆ ನೋಡಿಕೊಳ್ಳುವ ದೃಷ್ಟಿಯಿಂದ ಮಾನ್ಯ ಜಿಲ್ಲಾ ನ್ಯಾಯಾಧೀಶರೇ ನೇಮಕಗೊಳಿಸಿದ ಐವರು ಸದಸ್ಯರನ್ನು ಒಳಗೊಂಡ ಧರ್ಮದರ್ಶಿ ಮಂಡಳಿ ಇರುತ್ತದೆ.ಈ ಧರ್ಮದರ್ಶಿ ಮಂಡಳಿಯು ದೇವಾಲಯದ ಆಡಳಿತ ವ್ಯವಸ್ಥೆಯಾಗಿ ದೇವಾಲಯದ ಅಭಿವೃದ್ಧಿಗೆ ಹಾಗೂ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಬೇಕಿದೆ.ಆದರೆ ನೂತನವಾಗಿ ಆಯ್ಕೆಯಾಗಿರುವ ನೇಮಕವಾಗಿರುವ ಧರ್ಮದರ್ಶಿ ಮಂಡಳಿಯು ತಮ್ಮ ಪ್ರಮುಖ ಹೊಣೆಗಾರಿಕೆಯನ್ನೇ ಮರೆತಂತೆ ಸ್ವ ಪ್ರತಿಷ್ಠೆ ಮೆರೆಯಲು ಮುಂದಾಗಿರುವಂತೆ ಕಂಡು ಬರುತ್ತಿದೆ.
ಭಕ್ತರು ತಾಯಿಗೆ ಶ್ರದ್ಧಾ ಭಕ್ತಿಯಿಂದ ನೀಡುವ ಕಾಣಿಕೆ ಹಣದಲ್ಲಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಬೇಕಾದ ಧರ್ಮದರ್ಶಿ ಮಂಡಳಿ ತಮ್ಮ ಒಡಾಟಕ್ಕಾಗಿ ಅಂದಾಜು 28 ಲಕ್ಷ ರೂ ಬೆಲೆಯ ಐಷಾರಾಮಿ ಇನ್ನೋವಾ ಕಾರು ಖರೀದಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದು ಸಾಕಷ್ಟು ವಿವಾದ ಸೃಷ್ಟಿಸಿದ್ದು ಇಂತಹ ಕಾರು ಖರಿಧಿಸುವ ಅಗತ್ಯ ಇತ್ತೇ ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.
ಆಡಳಿತಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ವಿವಾದದ ಮೂಲಕ ಸುದ್ದಿ ಆಗುತ್ತಿರುವ ಆಡಳಿತ ಮಂಡಳಿ ಈಗ ಐಶಾರಾಮಿ ಕಾರು ಖರೀದಿಸುವ ಮೂಲಕ ವಿವಾದಕ್ಕೆ ಕಾರಣವಾಗಿದೆ.
ದೇವಾಲಯಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿನಿತ್ಯ ಸಹಸ್ರಾರು ಭಕ್ತರು ಭೇಟಿ ನೀಡುತ್ತಿದ್ದು, ಬಂದಂತಹ ಭಕ್ತರಿಗೆ ಸೂಕ್ತ ವಸತಿ ಹಾಗೂ ಸ್ನಾನ ಶೌಚಾಲಯ ವ್ಯವಸ್ಥೆ ಸಹ ಇಲ್ಲದೆ ರಸ್ತೆಯ ಮೇಲೆ ಮಲಗುವ ದುಸ್ಥಿತಿ ಇದೆ.
ರಸ್ತೆಯ ಬದಿಯಲ್ಲೇ ಮಲ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆ ಹೊರಗಿನಿಂದ ಬಂದ ಭಕ್ತರದಾಗಿದೆ. ಈ ಎಲ್ಲಾ ಸಂಗತಿಯ ಅರಿವಿದ್ದೂ ಪೂರಕ ಸೌಲಭ್ಯ ಒದಗಿಸುವ ಬದಲು, ಕೇವಲ ತಮ್ಮ ಮನೆಯಿಂದ ದೇವಸ್ಥಾನಕ್ಕೆ ಬಂದು ಹೋಗಲು ಲಕ್ಷಾಂತರ ರೂ. ಕಾರು ಅವಶ್ಯಕತೆ ಇತ್ತೇ ಎನ್ನುವ ಪ್ರಶ್ನೆ ಎದುರಾಗಿದೆ.ಈಗಾಗಲೇ ಕೆನರಾ ಬ್ಯಾಂಕ್ ದೇವಸ್ಥಾನದ ಆಡಳಿತ ಮಂಡಳಿಯವರ ಓಡಾಟಕ್ಕೆ ಅತ್ಯುತ್ತಮ ವಾಹನವನ್ನು ದೇಣಿಗೆಯಾಗಿ ನೀಡಿದ್ದು ಅದುಸಹಸುಸ್ಥಿತಿಯಲ್ಲಿಚಾಲನೆಯಲ್ಲಿದೆ.ಪ್ರವಾಸೋದ್ಯಮ ಇಲಾಖೆ ಕೋಟ್ಯಾಂತರ ರೂ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಿಕೊಟ್ಟಿದ್ದರೂ ಅದನ್ನು ಹಸ್ತಾಂತರಿಸಿಕೊಂಡು ನಿರ್ವಹಣೆ ಮಾಡಲು ಹಿಂಜರಿದ ಆಡಳಿತ ಮಂಡಳಿ ಸಿಬ್ಬಂದಿ ನೇಮಕ ಮಾಡಿ ವೇತನ ನೀಡಲು ಹಣಕಾಸಿನ ಕೊರತೆಯ ಸಬೂಬು ನೀಡಿತ್ತು. ಇದರಿಂದ ಸುಸಜ್ಜಿತ ಕಟ್ಟಡ ಹಾಳು ಬಿದ್ದು ಭಕ್ತರಿಗೆ ನಿಲುಕದಂತಾಗಿದೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಸಹ ಸಾಕಷ್ಟು ಚರ್ಚೆ ಆರಂಭವಾಗಿದ್ದು, ಅನಗತ್ಯವಾಗಿ ಖರಿಧಿಸಿದ ಐಷಾರಾಮಿ ಕಾರು ಖರೀದಿ ಪ್ರಕರಣ ದೇವಾಲಯದ ಧರ್ಮದರ್ಶಿ ಮಂಡಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.Box*ಬನವಾಸಿ ರಸ್ತೆಯಲ್ಲಿ ಕೋಟ್ಯಾಂತರ ರೂ ವೆಚ್ಚ ಮಾಡಿ ನಿರ್ಮಿಸಿದ ಯಾತ್ರಿ ನಿವಾಸ ಪಾಳು ಬಿದ್ದಿದೆ. ದೇವಾಲಯದ ಹಿಂದೆ ಭಕ್ತರಿಗೆ ಉಳಿಯಲು ಮಾಡಿದ ವಸತಿ ನಿಲಯದಲ್ಲಿ ಬಿಸಿ ನೀರಿನ ಸೌಲಭ್ಯ ಮಾಡಿಲ್ಲ.* *ಕಲ್ಯಾಣ ಮಂಟಪದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಅವ್ಯಸ್ಥೆಯ ಆಗರವಾಗಿದೆ. ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಬಹುದಿತ್ತು. ಆದರೆ ಇವರಿಗೆ ಐಷಾರಾಮಿ ಕಾರು ಖರೀಧಿಯೇ ಮುಖ್ಯವಾಗಿದೆ.**ಭಕ್ತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವ ಬದಲು ದುಂದು ವೆಚ್ಚ ಮಾಡುತ್ತಿದ್ದಾರೆ*.
Be the first to comment