ನೂತನ ಪುರಸಭೆ ಕಟ್ಟಡ ಹಾಗೂ ಇ-ಗ್ರಂಥಾಲಯ ತಡರಾತ್ರಿ ಉದ್ಘಾಟನೆ (ಪುರ ಸಭೆ ಸಿಬ್ಬಂದಿ ನಾಡಗೀತೆಗೆ ಅಪಮಾನ:ಗಣ್ಯರು ಪುಲ್ ಗರಂ)

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ CHETAN KENDULI

ಜಿಲ್ಲಾ ಸುದ್ದಿಗಳು

ಮಸ್ಕಿ

ಪಟ್ಟಣದ ನೂತನ ಪುರಸಭೆ ಕಟ್ಟಡ ಹಾಗೂ ಇ- ಗ್ರಂಥಾಲಯವನ್ನು ಸೋಮವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ.ಪಾಟೀಲ್ ಮುನೇನಕೊಪ್ಪ ರವರು ಉದ್ಘಾಟಿಸಿದರು.ಸೋಮವಾರ ರಾತ್ರಿ 8 ಗಂಟೆಗೆ ಸರಿಯಾಗಿಪಟ್ಟಣಕ್ಕೆ ಸಚಿವರು ಆಗಮಿಸುತ್ತಿದ್ದಂತೆಯೇ ಹೂವಿನ ಹಾರ ಮತ್ತು ಶಾಲು ಹಾಕುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಪುರಸಭೆಯ ದ್ವಾರ ಬಾಗಿಲಲ್ಲಿ 22 ನೇ ವಾರ್ಡ್ ಮತ್ತು ಸೋಮನಾಥ ನಗರ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಹಟ್ಟಿ ಪಟ್ಟಣ ಪಂಚಾಯತ್ ಪೌರಕಾರ್ಮಿಕರಿಗೆ ವೇತನ ನೀಡುವಂತೆ, ಮಸ್ಕಿ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಬಗ್ಗೆ, ತಾಲೂಕಾ ಕಚೇರಿಗಳ ಮಂಜೂರು ಮಾಡುವ ಕುರಿತು, ಬುದ್ದಿನ್ನಿ ಪ್ರೌಡ ಶಾಲೆ ಮಂಜೂರು ಮಾಡುವ ಕುರಿತು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ನೀಡುವ ಮೂಲಕ ವಿವಿಧ ಸಂಘಟನೆಗಳು ಒತ್ತಾಯಿಸಿದವು.

2016-17 ನೇ ಸಾಲಿನ ಎಸ್ ಎಫ್ ಸಿ ವಿಶೇಷ ಅನುದಾನದ ಕೆ ಆರ್ ಐ ಡಿ ಎಲ್ ರಾಯಚೂರು ಯೋಜನೆ ಅಡಿಯಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಪುರಸಭೆ ಕಟ್ಟಡ ಹಾಗೂ ಉದ್ಘಾಟನೆ ಭಾಗ್ಯ ಕಾಣದೇ ನೆನೆಗುದಿಗೆ ಬಿದ್ದಿದ್ದ ಇ- ಗ್ರಂಥಾಲಯವನ್ನು ಜನಪ್ರತಿನಿಧಿಗಳ ನೇತೃತ್ವದಲ್ಲಿ ತಡರಾತ್ರಿ 8 ಗಂಟೆ ಸುಮಾರಿಗೆ ಶಂಕರ್ ಬಿ ಪಾಟೀಲ್ ಮುನೇಕೊಪ್ಪ ಉದ್ಘಾಟನೆ ಮಾಡಿದರು.ಇಂದು ಸಂಜೆ 5 ಗಂಟೆಗೆ ಜರುಗಬೇಕಿದ್ದ ಉದ್ಘಾಟನೆ ಕಾರ್ಯಕ್ರಮವು 3 ಗಂಟೆಗಳ ಕಾಲ ತಡವಾಗಿ ಜರುಗಿತು. ಜನಪ್ರತಿನಿಧಿಗಳು ಸಮಯಪ್ರಜ್ಞೆ ಮೆರೆಯುವುದು ವಾಡಿಕೆಯಾಗಿಬಿಟ್ಟಿದೆ ಎಂದು ಸಾರ್ವಜನಿಕರು ಗುಸು ಗುಸುಮಾತಾಡುತ್ತಿದರು.ನಂತರ ಕಾರ್ಯಕ್ರಮದ ಸಭೆಗೆ ಗಣ್ಯರನ್ನು ಸ್ವಾಗತಿಸಿ ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ನಾಡಗೀತೆ ಹಾಡುವ ಮಧ್ಯದಲ್ಲಿ ಪುರಸಭೆ ಸಿಬ್ಬಂದಿ ಒಬ್ಬರು ವೇದಿಕೆಯ ಧ್ವನಿವರ್ಧಕದಲ್ಲಿ ತಾಲೂಕ ದಂಡಾಧಿಕಾರಿ ಕವಿತಾ. ಆರ್ ಮೇಡಂ ವೇದಿಕೆಗೆ ಬರಬೇಕು ಎಂದು ಹೇಳುವ ಮೂಲಕ ನಾಡಗೀತೆಗೆ ಅಪಮಾನ ಮಾಡಿದ ಘಟನೆ ಪುರಸಭೆ ಅವರಣದ ಕಾರ್ಯಕ್ರಮದಲ್ಲಿ ನಡೆದಿವೆ.

ಮೊದಲಿಗೆ ಪುರಸಭೆ ಮುಖ್ಯಾಧಿಕಾರಿ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದರು.ನಂತರ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣನವರು ಮಾತನಾಡಿ
ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ
ಪುರಸಭೆಯೂ ಈಗ ಸುಸಜ್ಜಿತ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಇನ್ನೂ ಜನರಿಗೆ ಸಮರ್ಪಕ ಕೆಲಸಗಳು ದೊರಕಲಿವೆ.
ಸರ್ಕಾರವು ಅಭಿವೃದ್ಧಿ ಕಡೆಗೆ ಒತ್ತು ನೀಡುತ್ತಿದ್ದು, ನಿರ್ಮಿಸಲಾಗಿರುವ ನೂತನ ಮಸ್ಕಿಯ ಪುರಸಭೆ ಕಟ್ಟಡವು ಸುಸಜ್ಜಿತವಾಗಿ ನಿರ್ಮಾಣವಾಗಿದೆ. ದೇವಸ್ಥಾನ ಮಾಡಿ ಕಳಸವನ್ನು ಇಟ್ಟಹಾಗೆ ಕಳೆ ಬಂದಿದೆ ಮತ್ತು ಮಸ್ಕಿ ಪಟ್ಟಣದಲ್ಲಿ ನೂತನವಾಗಿ ಇ-ಗ್ರಂಥಾಲಯವನ್ನು ಆರಂಭಿಸಿದ್ದರಿಂದ ಒಂದು ಗ್ರಂಥಾಲಯವನ್ನು ಕಟ್ಟಿದರೆ ದೇಶ ನಿರ್ಮಾಣ ಮಾಡಿದ ಹಾಗೆ ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಕೆ ಎ ಎಸ್, ಐಎಎಸ್, ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ ಎಂದು ಹೇಳಿದರು. ಶ್ರೀದೇವಿ ಶ್ರೀನಿವಾಸ ಶ್ರೀ ಶಕ್ತಿ ಮಹಿಳಾ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ರವರು ಮಸ್ಕಿ ವಿಧಾನ ಸಭಾ ಕ್ಷೇತ್ರದ ಶ್ರೀ ಶಕ್ತಿ ಮಹಿಳಾ ಒಕ್ಕೂಟ ಒಂದು ಗುಂಪಿಗೆ 1 ಲಕ್ಷ ಮೊತ್ತದ ಚೆಕ್ ಅನ್ನು ವೇದಿಕೆಯಲ್ಲಿ ವಿತರಿಸಿ ಮಾತನಾಡುತ್ತಾ ಕರ್ನಾಟಕ ರಾಜ್ಯ ಸರಕಾರವು 7500 ಕೋಟಿ ರೂಪಾಯಿಯನ್ನು ಶ್ರೀ ಶಕ್ತಿ ಮಹಿಳಾ ಒಕ್ಕೂಟಕ್ಕೆ ಮೀಸಲಿಟ್ಟಿದೆ ಹಾಗೂ ಒಂದು ವಿಧಾನಸಭಾ ಕ್ಷೇತ್ರಕ್ಕೆ 40 ಲಕ್ಷ ರೂಪಾಯಿಯಂತೆ 224 ಕ್ಷೇತ್ರಕ್ಕೂ ಮೀಸಲಿಡಲಾಗಿದೆ.ಮುಂದಿನ ದಿನಮಾನಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಗುಂಪಿಗೆ ಒಂದು ಲಕ್ಷದಂತೆ 39 ಗುಂಪಿಗೂ 1 ಲಕ್ಷ ಮೊತ್ತದ ಚೆಕ್ ಅನ್ನು ವಿತರಿಸಲಾಗುವುದು ಎಂದರು.

ನಂತರ ಅಧ್ಯಕ್ಷೀಯ ಭಾಷಣ ಮಾಡಿದ ಶಾಸಕ ಆರ್ ಬಸನಗೌಡ ತುರ್ವಿಹಾಳ 2016-17 ನೇ ಸಾಲಿನಲ್ಲಿ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಪುರಸಭೆ ಕಟ್ಟಡಕ್ಕೆ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಹಾಗೇಯೇ 25-30 ವರ್ಷಗಳ ಕಾಲ ನಿವೇಶನದ ಗೊಂದಲದಲ್ಲಿ ಜೀವನ ನಡೆಸುತ್ತಿರುವ ಸೋಮನಾಥ ನಗರ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಅಡೆತಡೆಯಾಗುತ್ತಿದೆ. ಭೂಮಿಯೂ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಇರುವುದರಿಂದ ಹಕ್ಕುಪತ್ರ ವಿತರಣೆ ಗೊಂದಕ್ಕೀಡಾಗಿದೆ ಎಂದು ತಮ್ಮ ಭಾಷಣಕ್ಕೆ ವಿರಾಮವಿಟ್ಟರು.ಕಾರ್ಯಕ್ರಮದಲ್ಲಿ ಆರ್. ಬಸನಗೌಡ ತುರ್ವಿಹಾಳ ಶಾಸಕರು, ಅಮರೇಶ್ವರ ನಾಯಕ ಸಂಸದರು ರಾಯಚೂರು,ಕರಡಿ ಸಂಗಣ್ಣ ಸಂಸದರು ಕೊಪ್ಪಳ,ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು, ಚಂದ್ರಶೇಖರ ನಾಯಕ ಜಿಲ್ಲಾಧಿಕಾರಿ, ನಿಖಿಲ್. ಬಿ ಪೊಲೀಸ್ ವರಿಷ್ಠಾಧಿಕಾರಿ, ಹಾಗೂ ಪುರಸಭೆಯ ಎಲ್ಲಾ ವಾರ್ಡಿನ ಸದಸ್ಯರು ಮತ್ತು ಮಸ್ಕಿ ತಾಲೂಕು ತಹಸೀಲ್ದಾರರು ಕವಿತಾ.ಆರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ, ಹನುಮಂತಮ್ಮ ನಾಯಕ ಪುರಸಭೆ ಮುಖ್ಯಾಧಿಕಾರಿ,ಪುರಸಭೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*