ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಭೂಷಣ ‘ರಾಜನ್ ಮಿಶ್ರಾ’ ನಿಧನ

ಅಂಬಿಗ್ ನ್ಯೂಸ್

ರಾಷ್ಟ್ರ ಸುದ್ದಿಗಳು

ನವ ದೆಹಲಿ:

CHETAN KENDULI

ಕೊರೋನಾ ಸೋಂಕಿಗೆ ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಭೂಷಣ ‘ರಾಜನ್ ಮಿಶ್ರಾ’ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಹೃದೋಗ ಸಮಸ್ಯೆಯಿಂದ ಬಳಲುತ್ತಿದ್ದ ರಾಜನ್ ಮಿಶ್ರಾಗೆ ಇತ್ತೀಚೆಗೆ ಕೊರೋನಾ ಸೋಂಕು ಧೃಡವಾದ ಹಿನ್ನೆಲೆ ದೆಹಲಿಯ ಸ್ಟೀಫನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜನ್ ಮಿಶ್ರಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಾರಣಾಸಿಯಲ್ಲಿ 1951 ರಲ್ಲಿ ಜನಿಸಿದ್ದ ಅವರು ತಮ್ಮ ಬಾಲ್ಯದಿಂದಲೇ ಸಂಗೀತವನ್ನು ಮೈಗೂಡಿಸಿಕೊಂಡಿದ್ದರು. 1978 ರಲ್ಲಿ ಶ್ರೀಲಂಕಾದಲ್ಲಿ ತಮ್ಮ ಮೊದಲ ಸಂಗೀತ ಕಚೇರಿಗಳನ್ನು ನೀಡಿದ ಅವರು ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ಯುಎಸ್ಎ, ಯುಕೆ, ನೆದರ್ಲ್ಯಾಂಡ್ಸ್, ಯುಎಸ್ಎಸ್ಆರ್, ಸಿಂಗಪೂರ್, ಕತಾರ್, ಬಾಂಗ್ಲಾದೇಶ, ಮಸ್ಕತ್ ಸೇರಿದಂತೆ ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಹಿಂದೂಸ್ತಾನಿ ಸಂಗೀತ ಖ್ಯಾಲ್ ಹಾಡುಗಾರಿಕೆಯಲ್ಲಿ ಪ್ರಸಿದ್ದರಾಗಿದ್ದ ಅವರಿಗೆ ಪದ್ಮಭೂಷಣ, ಸಂಗೀತ ನಾಟಕ ಪ್ರಶಸ್ತಿ ಹಾಗೂ ಗಂಧರ್ವ ರಾಷ್ಟ್ರೀಯ ಪ್ರಶಸ್ತಿಗಳಿಗೆ ಲಭಿಸಿವೆ.

 

 

Be the first to comment

Leave a Reply

Your email address will not be published.


*