ಜಿಲ್ಲಾ ಸುದ್ದಿಗಳು
ವಿಜಯನಗರ:
ಜಿಲ್ಲೆಯ ಕೂಡ್ಲಿಗಿ ತಾಲೂಕು ಕೇಂದ್ರ ಸ್ಥಾನವಾಗಿದ್ದು, ಸಾರ್ವಜನಿಕ ಆಸ್ಪತ್ರೆಗೆ ಕೋವಿಡ್ ಲಸಿಕೆಗಾಗಿ ಅಗತ್ಯ ಚುಚುಮದ್ದುಗಳ ದಾಸ್ತಾನು ಅಭಾವ ಎದ್ದುಕಾಣತ್ತಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪವಿದೆ,ಲಸಿಕೆ ಒದಗಿಸುವಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಣೆಯಾಗುತ್ತಿಲ್ಲ.
ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮನೆಗೆ ಮನೆಗೆ ಲಸಿಕೆ ನೀಡಲಾಗಿದೆ, ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕಾರಣಾಂತರಗಳಿಂದ ಲಭ್ಯವಾಗಿಲ್ಲ. ಗ್ರಾಮೀಣ ಜನರು ಹೆಂಗಸರು ವೃದ್ಧರು ಕೂಲಿ ನಾಲಿ ಬಿಟ್ಟು ಸಾರಿಗೆ ಸಂಪರ್ಕದ ಕೊರೆತೆಯ ನಡುವೆ ಗ್ರಾಮೀಣ ಜನ ಅನಿವಾರ್ಯವಾಗಿ ಕೆಲಸ ಕಾರ್ಯಗಳನ್ನ ಬಿಟ್ಟು ವಾರಗಟ್ಟಲೆ ಆಸ್ಪತ್ರಗೆ ಆಲೆಯುಂತಹ ದುಸ್ಥಿತಿ ಎದುರಾಗಿದೆ ಎನ್ನುತ್ತಾರೆ ರೈತ ಮುಖಂಡರು. ಆಸ್ಪತ್ರೆಯ ಆವರಣದಲ್ಲಿ ಲಸಿಕೆ ಹಾಕಿಸಿಕೊಳ್ಳಲಿಕ್ಕೆ ದಿನಗಟ್ಟಲೆ ವ್ರತಾಃ ಕಾಯಬೇಕಿದೆ ಲಸಿಕೆ ದಾಸ್ತಾನಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕರು ಗ್ರಾಮೀಣ ಜನತೆ ತೀವ್ರ ಪರದಾಡುವಂತಾಗಿದೆ ಎಂದು ರೈತ ಸಂಘದ ಮುಖಂಡ ದೇವರ ಮನಿ ಮಹೇಶ ಆರೋಪಿಸಿದ್ದಾರೆ.
ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಖುದ್ಧು ಪರಿಶೀಲಿಸಿ ಸೂಕ್ತ ಕ್ರಮಗಳನ್ನ ಕೈಗೊಳ್ಳಬೇಕೆಂದು ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು ಜಿಲ್ಲಾಧಿಕಾರಿಗಳಲ್ಲಿ ಈ ಮೂಲಕ ಒತ್ತಾಯಿಸಿದ್ದಾರೆ.
ಕೋವಿಡ್ ಚುಚುಮದ್ದು ಹಾಕಿಸಿಕೊಳ್ಳಿ ಎಂಬ ಸಂದೇಶ ರವಾನೆ ಮಾಡಲಾಗಿದೆಯಾದರೂ ಚುಚುಮದ್ದಿಗಾಗಿ ಆಸ್ಪತ್ರೆಗೆ ವೃತಾಃ ಅಲೆದಾಡಬೇಕಿದೆ ದಿನಗಟ್ಟಲೆ ಕಾಯುವಂತೆ ಮಾಡಿ ಹಾಗೆ ಹಿಂದಿರುಗುವ ದುಸ್ಥಿತಿ ಇದೆ.
ವೈಧ್ಯಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ಲಸಿಕೆಗೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ನೀಡುವುದಿಲ್ಲ. ಎರೆಡೂ ಸುತ್ತಿನ ಲಸಿಕೆ ಹಾಕಿಸಿಕೊಳ್ಳಲು,ಆಸ್ಪತ್ರೆಗೆ ಹತ್ತಾರು ಭಾರಿ ಅಲೆದಾಡುವುದು ಅನಿವಾರ್ಯವಾಗಿ ಬಿಟ್ಟಿದೆ.ಲಸಿಕೆ ನೀಡುವಲ್ಲಿ ದಾಸ್ಥನು ಕೊರತೆ ತೋರಿಸಿ ದಿನಗಟ್ಟಲೆ ಕಾಯಿಸುತಿದ್ದಾರೆಂದು ರೈತ ಸಂಘದ ಮುಖಂಡರು ಹಾಗೂ ಕಾರ್ಮಿಕರು ಗಂಭೀರವಾಗಿ ಆರೋಪಿಸಿದ್ದಾರೆ.
ಆರೋಗ್ಯಾಧಕಾರಿಗಳು ತುಂಬಾ ಪ್ರಾಮಾಣಿಕರು ಧಕ್ಷರಿದ್ದು, ಕೆಲ ಭ್ರಷ್ಟ ಸಿಬ್ಬಂದಿಗಳಿಂದಾಗಿ ಈ ದುಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಕೆಲ ಸಂಘಟನೆಗಳ ಪದಾಧಿಕಾರಿಗಳು.
ಕೃತಕ ಅಭವ.!? ವೃತಾಃ ಅಲೆದಾಟ.!
ಕೋವಿಡ್ ಲಸಿಕೆ ಒದಗಿಸುವಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದೆ ಎಂದು ಮುಖಂಡರು ಆರೋಪಿಸಿದ್ದಾರೆ.
ಲಸಿಕೆ ಹಾಕಿಸಿಕೊಳ್ಳಲು ಗ್ರಾಮೀಣ ಜನತೆ ಬಂದು ದಿನಗಟ್ಟಲೆ ಅಲೆದಾಡಿಸುತಿದ್ದಾರೆ.ಇದು ನಿಜವಾದ ಅಭಾವನೋ ಅಥವಾ ಕೃತಕ ಅಭಾವನೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ,ಕಾರಣ ದಿನಗಟ್ಟಲೆ ಆಸ್ಪತ್ರೆಯ ಆವರಣದಲ್ಲಿ ಕಾದು ಕಾದು ಸುಸ್ತಾಗಿ ಗ್ರಾಮಗಳಿಗೆ ಹಿಂದಿರುಗುವಂತಾಗಿದೆ.
ಚುಚ್ಚು ಮದ್ದು ನೀಡುವಾಗ ಆರ್ಥಿಕ ಉತ್ತಮ ಸ್ಥಿತಿವಂತರು ಹಾಗೂ ಅಧಿಕಾರಿ ವರ್ಗ ಮತ್ತು ಪ್ರಭಾವಿಗಳಿಗೆ ಹೆಚ್ಚು ಮಣೆ ಹಾಕಿ ಆಧ್ಯತೆ ನೀಡುತಿದ್ದು. ರೈತಾಪಿವರ್ಗ ಕಾರ್ಮಿಕ ವರ್ಗದವರು ಹಾಗೂ ಗ್ರಾಮೀಣ ಜನ ಸಾಮಾನ್ಯರು ಪರದಾಡುವಂತಾಗಿದೆ,ಸತತ ಮೂರು ದಿನಗಳು ರೈತರು ಕಾರ್ಮಿಕರು ಮಹಿಳೆಯರು ಅಲೆದಾಡಿದ್ದಾರೆ. ಪ್ರಾರಂಭದ ದಿನಗಳಿಂದಲೂ ಇದೇ ಸಮಸ್ಯೆ ಸೃಷ್ಠಿಯಾಗಿದೆ.
ದಿನಗಟ್ಟಲೆ ಕಾದು ಕಾದು ಸುಸ್ಥಾಗಿ ಹಿಂದಿರುಗಬೇಕಾಗಿದೆ. ಎರೆಡು ಸುತ್ತು ಹಾಕಿಸಿಕೊಳ್ಳಬೇಕಿದೆ ಕಾರಣ ಪ್ರತಿಭಾರಿಯೂ ಇದೇ ರೀತಿ ಹಲವು ಭಾರಿ ಲಸಿಕೆಗಾಗಿ ಅಲೆದಾಡುವಂತ ದುಸ್ಥತಿ ನಿರ್ಮಾಣವಾಗಿದೆ.
ಪ್ರಮುಖ ಲಸಿಕೆಗಳೇ ಇಲ್ಲ:
ತಾಲೂಕು ಸಾರ್ವಜನಿಕ ಆಸ್ಪತ್ರೆ ಇದೆಯಾದರೂ ಲಸಿಕೆಗಳೇ ಇಲ್ಲ,ನಾಯಿ ಕಚ್ಚಿದರೆ ಹಾವು ಕಚ್ಚಿದರೆ ಅಥವಾ ವನ್ಯ ಮೃಗಗಳು ಕಚ್ಚಿದರೆ ಅಗತ್ಯ ಲಸಿಕೆಗಳು ಸಾದಾ ಅಲಭ್ಯ.ಇನ್ನು ಸಣ್ಣ ಪುಟ್ಟ ಗಾಯಗಳಿಗೂ ಪ್ರಥಮ ಚಿಕಿತ್ಸೆ ಸೀಮಿತವಾಗಿದೆ.ಪ್ರತಿಯೊಂದಕ್ಕೂ ಬಳ್ಳಾರಿಗೆ ತೆರಳಿ ಎನ್ನುತ್ತಾರೆ ಹಾಗಾದರೆ ಆಸ್ಪತ್ರೆ ಅಧಿಕಾರಿಗಳು ಸಿಬ್ಬಂದಿ ಏಕೆ.!? ಪ್ರೆಶ್ನಿಸುವರೇ ಇಲ್ಲದಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯನಾಗರೀಕರು ಬೇಸರ ವ್ಯಕ್ತಪಡಿಸಿದ್ದಾರೆ.
ಜನಪರ ಕಾಳಜಿಯುಳ್ಳ ಸಂಘಟನೆಗಳು,ಜನಪ್ರತಿನಿಧಿಗಳು, ಪಕ್ಷಗಳ ಮುಖಂಡರು ಹೋರಾಟಗಾರರು ಕೇವಲ ಪ್ರಚಾರಕ್ಕೆ ಸೀಮಿತನಾ ಎಂಬ ಪ್ರೆಶ್ನೆ ಇಲ್ಲಿ ನಾಗರೀಕ ವಲಯದಲ್ಲಿ ಮೂಡಿದೆ. ಇದು ಆರೋಗ್ಯ ಇಲಾಖಾಧಿಕಾರಿಗಳ ಹಾಗೂ ಪ್ರಮುಖ ಸಿಬ್ಬಂದಿಯವರ ಲೋಪವೆಂದು ಮೇಲ್ನೋಟಕ್ಕೆ ಸಾಬೀತಾಗಿದ್ದು,
ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗಳು ಪರಿಶೀಲಿಸಿ ಶೀಘ್ರವೇ ಕೋವಿಡ್ ಲಸಿಕೆ ಸೇರಿದಂತೆ ಪ್ರಮುಖ ಲಸಿಕೆಗಳನ್ನು ಸಮರ್ಪಕವಾಗಿ ಒದಗಿಸಬೇಕಿದೆ ಎಂದು ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ದೇವರ ಮನಿ ಮಹೇಶ ನೇತೃತ್ವದಲ್ಲಿ, ಹಾಗೂ ಕಾರ್ಮಿಕ ಮುಖಂಡ ಬಿ.ಸಿದ್ದಲಿಂಗಪ್ಪ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಲ್ಲಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.
Be the first to comment