ರಾಜ್ಯ ಸುದ್ದಿಗಳು
ದೇವನಹಳ್ಳಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನ ಪರಿಷತ್ ನೂತನ ಸದಸ್ಯ ಎಸ್.ರವಿಗೆ ಅಭಿನಂದನೆ ಮತ್ತು ಕೃತಜ್ಞತಾ ಕಾರ್ಯಕ್ರಮದ ಹಿನ್ನಲೆ ಸದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ನೂತನ ಸದಸ್ಯ ಎಸ್.ರವಿ ಮಾತನಾಡಿದರು.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನೆ ದೇವರೇ ಸುಳ್ಳು ಅವರು ಬೆಳಿಗ್ಗೆ ಒಂದು ಹೇಳಿಕೆ, ಮಧ್ಯಾಹ್ನ ಒಂದು ಹೇಳಿಕೆ ನೀಡುತ್ತಾ ಅವರು ದಾರಿ ತಪ್ಪುವುದಲ್ಲದೆ, ಜನರನ್ನು ಸಹ ದಾರಿ ತಪ್ಪಿಸುತ್ತಿದ್ದಾರೆ. ಒಂದು ಕಡೆ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ಮಾತನಾಡುತ್ತಾರೆ. ಮತ್ತೊಂದು ಕಡೆ ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿ ಆತಿಥ್ಯ ಸ್ವೀಕರಿಸುತ್ತಾರೆ. ಇದು ಇವರ ಸಂಸ್ಕೃತಿಯಾಗಿದೆ. ಎಚ್.ಡಿ.ಕುಮಾರಸ್ವಾಮಿ ಸತ್ಯ ಹರಿಚಂದ್ರನ ಕಡೇಯ ತುಂಡಿನಂತೆ ಮಾತನಾಡುತ್ತಾರೆ. ಈಗಾಗಲೇ ಜನಗಳಿಗೆ ಯಾರೇನೆಂಬುದು ತಿಳಿದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಹೊಸಕೋಟೆ, ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಹೆಚ್ಚು ಇದ್ದರೂ ಸಹ ಕಾಂಗ್ರೆಸ್‌ಗೆ ಬೆಂಬಲಿಸಿರುವುದು ಬಿಜೆಪಿ-ಜೆಡಿಎಸ್ ಸಹವಾಸ ಸಾಕಪ್ಪ ಎಂದು ಕಾಂಗ್ರೆಸ್ ಕಡೆಗೆ ಸಾಗಿ ಬರುತ್ತಿದ್ದಾರೆ. ಯಾವುದೇ ಪಕ್ಷದಿಂದ ಬಂದರೂ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ಹೇಳಿದರು.
೨೦೨೩ಕ್ಕೆ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿಕೊಳ್ಳುವ ಎಲ್ಲಾ ಮುನ್ಸೂಚನೆಯ ದಿಕ್ಸೂಚಿ ಈ ಚುನಾವಣೆ ಸಾಕ್ಷಿಯಾಗಿದೆ. ರೂಲಿಂಗ್ ಪಾರ್ಟಿಯಲ್ಲಿ ಇಬ್ಬರು ಸಚಿವರ ನಡುವೆ ಚುನಾವಣೆಯನ್ನು ಎದುರಿಸಲಾಗಿದೆ. ರಾಮನಗರದಲ್ಲಿ ಅಶ್ವತ್‌ನಾರಾಯಣ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜು ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಚುನಾವಣೆ ನಡೆಯುವಂತಹ ಸಂದರ್ಭದಲ್ಲಿ ಬಿಜೆಪಿ ಮತಗಳು ಅತ್ಯಂತ ಗಣನೀಯವಾಗಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಸರಿಸುಮಾರಾಗಿ ಆಂತರಿಕ ಸಮೀಕ್ಷೆ ಮಾಡಿದಾಗ ೬೬೦ಕ್ಕೂ ಹೆಚ್ಚು ಬಿಜೆಪಿ ಮತಗಳು ಬೆಂಬಲಿತ ಸದಸ್ಯರು ಇದ್ದದ್ದು ಸತ್ಯ. ಹೊಸಕೋಟೆಯಲ್ಲಿ ಜೆಡಿಎಸ್ ಬೆಂಬಲಿತ ಮತಗಳು ಒಂದೂ ಸಹ ಇರಲಿಲ್ಲ. ಅಲ್ಲಿದ್ದಂತಹದ್ದು, ಬಿಜೆಪಿ ಅದು ಬಿಟ್ಟರೆ ದೊಡ್ಡಬಳ್ಳಾಪುರದಲ್ಲಿ ೧೫೦ಕ್ಕೂ ಅಧಿಕ ಬಿಜೆಪಿ ಬೆಂಬಲಿತ ಮತದಾರರು ಇದ್ದರು. ಸುಮಾರು ೭೦ ಜನ ನೆಲಮಂಗಲದಲ್ಲಿ, ೧೪೦-೧೫೦ ಹೊಸಕೋಟೆಯಲ್ಲಿ ಮತ್ತು ಚನ್ನಪಟ್ಟಣದಲ್ಲಿ ಇದ್ರು. ಮಿಕ್ಕ ಅಲ್ಪಸ್ವಲ್ಪ ಅಲ್ಲಿಇಲ್ಲಿ ಇದ್ದರು. ಆದರೂ ಸಹ ಬಿಜೆಪಿ ಮತಗಳು ಇದ್ದರೂ ಸಹ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಬಿಜೆಪಿಗೆ ಕೇವಲ ೫೪ ಮತಗಳು ಪಡೆದುಕೊಂಡಿದ್ದಾರೆ. ಉಳಿದ ಮತಗಳು ಏನಾದವೂ ಎಂದು ಸಚಿವರುಗಳೇ ಲೆಕ್ಕಾಚಾರ ಮಾಡಬೇಕು ಎಂದು ಮಾಹಿತಿ ನೀಡಿದರು.
ರಮೇಶ್ ಜಾರಿಕಿಹೊಳಿಅವರು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಯೋಗ್ಯತೆ ಮೀರಿ ಮಾತನಾಡಿದ್ದಾರೆ. ಅವರ ಯೋಗ್ಯತೆ ಏನು ಎಂದು ಇಡೀ ರಾಜ್ಯ ನೋಡಿದೆ. ಅವರ ಯೋಗ್ಯತೆಯ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಈಗಾಗಲೇ ಮಂತ್ರಿ ಸ್ಥಾನವನ್ನು ಕಳೆದುಕೊಂಡು ಮೂಲೆ ಗಂಪುಗಾಗಿದ್ದಾರೆ. ಇದು ಅವರ ತಿಕ್ಕಲ ತನಕ್ಕೆ ಸಾಕ್ಷಿಯಾಗಿದ್ದಾರೆ. ಅವರ ಯೋಗ್ಯತೆ ಅವರ ಲೆವೆಲ್ ಅಷ್ಟೇ… ಎಂದು ಟೀಕಿಸಿದರು. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡುತ್ತಿರುವ ಜಾರಿಕಿಹೊಳಿಯಂತಹ ನೂರು ನಾಯಿಗಳು ಬೊಗಳಿದರೂ ಅವರಿಗೆ ಅವರಿಗೆ ಏನಾಗುತ್ತೇ. ಅವರಿಗೆ ಮಾದ್ಯಮದವರೇ ಬಂಡೆ ಎಂದೇ ಬಿರುದು ನೀಡಿದ್ದಾರೆ ಎಂದು ಗುಡುಗಿದರು.
ಸುದ್ದಿಗೋಷ್ಠಿಯಿಂದ ಹೊರಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಂದ ಅಭಿನಂದನೆ ಸ್ವೀಕರಿಸಿದರು. ಈ ವೇಳೆ ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮುನಿರಾಜು, ಮಾಜಿ ಶಾಸಕರುಗಳಾದ ವೆಂಕಟಸ್ವಾಮಿ, ಮುನಿನರಸಿಂಹಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಪ್ಪ, ಪುರಸಭಾಧ್ಯಕ್ಷೆ ರೇಖಾ, ಜಿಪಂ ಮಾಜಿ ಸದಸ್ಯರಾದ ಕೆ.ಸಿ.ಮಂಜುನಾಥ್, ಅನಂತಕುಮಾರಿ ಚಿನ್ನಪ್ಪ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾಗೇಶ್, ಮುಖಂಡರಾದ ಚನ್ನಹಳ್ಳಿ ರಾಜಣ್ಣ, ಆರ್.ಜಯರಾಮು, ಸೋಮಶೇಖರ್, ಶ್ರೀಧರ್, ಎಸ್.ಆರ್.ರವಿಕುಮಾರ್, ಕೆ.ವಿ.ಸ್ವಾಮಿ, ವಿ.ನಾರಾಯಣಸ್ವಾಮಿ, ಮಾರುತಿ, ವೇಣುಗೋಪಾಲ್, ಕೋದಂಡರಾಮು, ತೂಬಗೆರೆ ಟಿ.ರಂಗಪ್ಪ, ಹರ್ಷಿಗೌಡ, ಮುನಿಕೃಷ್ಣ, ಪಟೇಲಪ್ಪ, ಬ್ಲಾಕ್ ಕಾಂಗ್ರೆಸ್ ಘಟಕದ ಮಹಿಳಾ ಪದಾಧಿಕಾರಿಗಳು ಇದ್ದರು.
Be the first to comment