ಹಲವು ಬಾರಿ ಮನವಿ ಮಾಡಿದರು ಸ್ಪಂದಿಸದ ತಾಲೂಕ ಆಡಳಿತ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಸ್ಕಿ

ಪಟ್ಟಣದಿಂದ ಮುದಗಲ್ ಮಾರ್ಗವಾಗಿ ಹೋಗುವ ರಸ್ತೆಯ ಮಧ್ಯ ಭಾಗದಲ್ಲಿ ಹಾಕಲಾಗಿರುವ ವಿಭಾಜಕ ಕಲ್ಲುಗಳಿಂದ ವಾಹನ ಸವಾರರಿಗೆ ತುಂಬಾ ಅಡೆತದೆಯಾಗುತ್ತಿದೆ. ಹಾಗೆಯೇ ರಾತ್ರಿಯ ವೇಳೆ ಹಲವು ವಾಹನಗಳು ಅಪಘಾತಕ್ಕೀಡಾದ ಪ್ರಸಂಗಗಳು ನಡೆಯುತ್ತಲೇ ಇವೆ ಕೆಲವೊಂದು ಅಪಘಾತಗಳು ಬೆಳಕಿಗೆ ಬಂದರೆ ಹಲವು ಅಪಘಾತಗಳು ಕಣ್ಮರೆಯ ಅಂಚಿನಲ್ಲಿಯೇ ಉಳಿದಿವೆ. ದಿನೇ ದಿನೇ ಹೆಚ್ಚುತ್ತಿರುವ ಅಫಘಾತಗಳ ವಿಚಾರವಾಗಿ ಪೊಲೀಸ್ ಇಲಾಖೆಗೂ ಮತ್ತು ಪುರಸಭೆಯ ಗಮನಕ್ಕೂ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರ ಮತ್ತು ವ್ಯಾಪಾರಸ್ಥರ ಅಳಲಾಗಿದೆ. ಸಾಮಾನ್ಯವಾಗಿ ರಸ್ತೆಯ ಮದ್ಯ ಭಾಗದಲ್ಲಿ ಹಾಕಲಾಗುವ ವಿಭಾಜಕ ಅನ್ನು ಪಟ್ಟಣದ ಮುಖ್ಯ ರಸ್ತೆಯ ಉದ್ದಗಲಕ್ಕೂ ಇದ್ದರೆ ಎಡಗಡೆಯ ಸವಾರರು ಎಡಕ್ಕೆ ಮತ್ತು ಬಲಗಡೆಯ ಸವಾರರು ಬಲಕ್ಕೆ ಸಂಚರಿಸಿ ಎಂದು ಸಾರ್ವಜನಿಕರಿಗೆ ಸಂಚಾರಿ ಸುರಕ್ಷತಾ ಜಾಗೃತಿ ಮೂಡಿಸಿದರೆ ಯಾವುದೇ ರೀತಿಯ ಅಪಘಾತಗಳು ಸಂಭವಿಸುವುದಿಲ್ಲ. ಕಾರಣ ಸಂಚಾರಿ ನಿಯಮದ ಬಗ್ಗೆಯೂ ಜನತೆಯಲ್ಲಿ ಅರಿವು ಮೂಡಿಸಿದರೆ ಈ ರೀತಿಯ ಅಪಘಾತಗಳು ತಕ್ಕಮಟ್ಟಿಗೆ ಕಡಿಮೆಯಾಗುವುದು. ಸಾರ್ವಜನಿಕರು ಎಗ್ಗಿಲ್ಲದೆ ಮುಖ್ಯ ರಸ್ತೆಯ ಮೇಲೆಯೇ ವಾಹನಗಳನ್ನು ನಿಲ್ಲಿಸಿದ್ದರಿಂದ ಸರಕಾರಿ ಬಸ್ ಗಳು ಮತ್ತು ಖಾಸಗಿ ವಾಹನಗಳು ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತವೆ ಎದುರುಗಡೆ ಬರುವ ವಾಹನ ಸವಾರರು ಅತೀ ವೇಗದಲ್ಲಿ ಬಂದು ತಮ್ಮ ವಾಹನದ ವೇಗವು ನಿಯಂತ್ರಣಕ್ಕೆ ಸಿಗದೆ ಹೋದರೆ ಅಫಘಾತ ಕಟ್ಟಿಟ್ಟ ಬುತ್ತಿ. ಹತ್ತು ಹಲವು ಸಮಸ್ಯೆಗಳಿಂದ ಅಫಘಾತಗಳು ಸಂಭವಿಸುತ್ತಿವೆ. ಆದ್ದರಿಂದ ತಾಲೂಕ ಆಡಳಿತ ಅಪಘಾತ ಮುಕ್ತ ರಸ್ತೆಯನ್ನಾಗಿ ಮಾರ್ಪಡಿಸಿ ಎಂಬುದು ಸಾರ್ವಜನಿಕರ ವಿನಂತಿಯಾಗಿದೆ.

CHETAN KENDULI

 

ಮಸ್ಕಿ ಯಿಂದ ಮುದಗಲ್ ಮಾರ್ಗವಾಗಿ ಹೋಗುವ ರಸ್ತೆಯ ಮಧ್ಯ ಭಾಗದಲ್ಲಿ ಹಾಕಲಾಗಿರುವ ಡಿವೈಡರ್ ಕಲ್ಲಿನಿಂದಲೇ ರಾತ್ರಿ ಮತ್ತು ಹಗಲತ್ತಿನಲ್ಲಿಯೇ ಅಫಘಾತಗಳು ಸಂಭವಿಸುತ್ತಿವೆ.ಆದ್ದರಿಂದ ಸಂಭಂದಿಸಿದ ಅಧಿಕಾರಿಗಳೂ ಆದಷ್ಟು ಬೇಗನೆ ರಸ್ತೆಯ ಮಧ್ಯ ಭಾಗದಲ್ಲಿನ ಕಲ್ಲನು ತೆರವು ಗೊಳಿಸಿ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಪ್ರಸಾದ್ ವ್ಯಾಪಾರಸ್ಥ

Be the first to comment

Leave a Reply

Your email address will not be published.


*