ಜಿಲ್ಲಾ ಸುದ್ದಿಗಳು
ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗಾಗಿ ಲೋಕಾಯುಕ್ತಕ್ಕೆ ವಹಿಸುವಂತೆ ಹೋರಾಟ ಮಾಡಲಾಗುವುದು- ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರ ಸಂಘದ ರಾಜ್ಯ ಅಧ್ಯಕ್ಷ ಕುಣಿಗಲ್ ರಮೇಶ್ಭಟ್ಕಳ-ಸಾಮಾಜಿಕ ಹೋರಾಟಗಾರರನ್ನು ಬೆದರಿಸಲು ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕರ್ತವ್ಯಕ್ಕೆ ಅಡ್ಡಿ 353 ಹಾಗೂ ಜಾತಿನಿಂದನೆ ಕೇಸುಗಳನ್ನು ದಾಖಲಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸದಂತೆ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಇಂಥ ಸಂದರ್ಭಗಳಲ್ಲಿ ಭ್ರಷ್ಟರೆಂಬ ದೇಶದ್ರೋಹಿಗಳಿಗೆ ತಾತ್ಕಾಲಿಕವಾಗಿ ನೆಮ್ಮದಿ ಸಿಗಬಹುದೇ ಹೊರತು ಸತ್ಯ ಎಂದೆಂದಿಗೂ ಬೂದಿ ಮುಚ್ಚಿದ ಕೆಂಡದಂತಿದ್ದು ಅದು ಸುಡಲು ಆರಂಭಿಸಿದಾಗ ಭ್ರಷ್ಟರು ಸುಟ್ಟು ಬೂದಿಯಾಗುತ್ತಾರೆ ಸತ್ಯ ಮತ್ತು ಸಾಮಾಜಿಕ ಹೋರಾಟವನ್ನು ಹತ್ತಿಕ್ಕಲು ಎಂದಿಗೂ ಸಾಧ್ಯವಾಗುವುದಿಲ್ಲ ಅದು ನಿರಂತರವಾಗಿರುತ್ತದೆ
ಭ್ರಷ್ಟರೆಂಬ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಿ.ಕರ್ನಾಟಕ ರಾಜ್ಯದಾದ್ಯಂತ ಸಂಘಟಿತವಾಗುತ್ತಿದೆ ಮುಂದಿನ ದಿನಗಳಲ್ಲಿ ಭ್ರಷ್ಟರ ಸಂಖ್ಯೆ ಕಡಿಮೆಯಾಗಿ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಟ ಮಾಡುವ ಸಾಮಾಜಿಕ ಹೋರಾಟಗಾರರ ಸಂಖ್ಯೆ ಹೆಚ್ಚಾಗಲಿದೆ ಆದ್ದರಿಂದ ಇಂದು ಭಟ್ಕಳದಲ್ಲಿ ನಡೆದಿರುವ ನಾಗೇಶ ನಾಯ್ಕ ಅವರ ಮೇಲಿನ ಸುಳ್ಳು ಕೇಸು ದಾಖಲು ಮಾಡಿರುವುದು ಸದರಿ ಪಂಚಾಯಿತಿಯಲ್ಲಿ ಹೆಚ್ಚು ಭ್ರಷ್ಟಾಚಾರ ನಡೆದಿರುವುದು ಸಾಬೀತಾದಂತಾಗಿದೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗಾಗಿ ಲೋಕಾಯುಕ್ತಕ್ಕೆ ವಹಿಸುವಂತೆ ಒತ್ತಾಯಿಸಿ ನಾಳೆ ನಡೆಯಬೇಕಿದ್ದ ಮತ್ತು ಸಾಮಾಜಿಕ ಕಾರ್ಯಕರ್ತರ ಜಿಲ್ಲಾ ಪಂಚಾಯಿತಿ ಮುಂದೆ ಭ್ರಷ್ಟಾಚಾರ ಸಂಪೂರ್ಣ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದೆ ಎಂದು ಹೆಚ್ ಜಿ ರಮೇಶ್ ರಾಜ್ಯಾಧ್ಯಕ್ಷರು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರು ವೇದಿಕೆ ರಿ. ಕರ್ನಾಟಕ ಇವ್ರು ತಿಳಿಸಿದ್ದಾರೆ.
Be the first to comment