ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದ ಹುಂಡಿ ಎಣಿಕೆ ಸಂಗ್ರಹವಾದ ಮೊತ್ತ……??

ವರದಿ ಹರೀಶ್ ದೊಡ್ಡಬಳ್ಳಾಪುರ

ಜಿಲ್ಲಾ ಸುದ್ದಿಗಳು 

ಹೌದು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಭಕ್ತದಿಗಳು ಹಾಕಲಾಗಿದ್ದ ಕಾಣಿಕೆಯನ್ನು ದಿನಾಂಕ 20/09/2021 ರಂದು ಬೆಳ್ಳಿಗೆ 10:30 ರ ಸುಮಾರಿಗೆ ಪ್ರಾರಂಭವಾದ ದೇವಸ್ಥಾನದ ಹುಂಡಿ ಎಣಿಕೆ ಮಧ್ಯಾಹ್ನ ಸುಮಾರು 3:15 ಕ್ಕೆ ಮುಕ್ತಯ ವಾಗಿದ್ದು ಪ್ರಸ್ತುತ ಹುಂಡಿಯಲ್ಲಿ ಸಂಗ್ರಹವಾದ ಒಟ್ಟು ಮೊತ್ತ 60,08,007 ( ಅರವತ್ತು ಲಕ್ಷದ ಎಂಟು ಸಾವಿರದ ಏಳು ರೂಪಾಯಿಗಳು ಮಾತ್ರ ) ಚಿನ್ನ 5 ಗ್ರಾಂ 5ಮಿಲಿ( 18,500 ರೂ ) ಬೆಳ್ಳಿ 2,600( 95,150 ರೂ )ಗ್ರಾಂ ಸಂಗ್ರಹವಾಗಿದ್ದು ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಏನ್. ಕೃಷ್ಣಪ್ಪ ಹಾಗೂ ಮುಜರಾಯಿ ತಹಸೀಲ್ದಾರ್ ಚೆ. ಜೆ. ಹೇಮಾವತಿ, ಅಧಿಕ್ಷಕರಾದ ಹುಚ್ಚಪ್ಪ, ಪ್ರಧಾನ ಅರ್ಚಕರಾದ ಸುಬ್ರಮಣಿ ಸ್ವಾಮಿ, ಇಂಡಿಯನ್ ಓವರ್ಸಿಸ್ ಬ್ಯಾಂಕ್ ಸಿಬ್ಬಂದಿಗಳು ಪೊಲೀಸ್ ಸಿಬ್ಬಂದಿಗಳು ಮತ್ತು ದೇವಾಲಯದ ಸಿಬ್ಬಂದಿಗಳು ಹುಂಡಿ ಎಣಿಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

CHETAN KENDULI

Be the first to comment

Leave a Reply

Your email address will not be published.


*