ಕರ್ತವ್ಯಲೋಪ ಎಸಗಿದ ಪುರಸಭೆ ಮುಖ್ಯಾಧಿಕಾರಿ ಜಗದೀಶ ಭಂಡಾರಿ ತಾಲೂಕ ವೈಧ್ಯಾಧಿಕಾರಿ ಚಂದ್ರಶೇಖರಯ್ಯರವರನ್ನು ಅಮಾನತ್ತಿಗೋಳಿಸಿ :ಸುರೇಶ ಬೈಲ್ ಮರ್ಚೇಡ್ 

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಾನ್ವಿ

ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡುವಲ್ಲಿ ನಿರ್ಲಕ್ಷ್ಯವಹಿಸಿದ ತಾಲೂಕ ವೈದ್ಯಾಧಿಕಾರಿ ಡಾ|| ಚಂದ್ರಶೇಖರಯ್ಯ ಹಾಗೂ ಪುರಸಭೆ ಮುಖ್ಯಾಧಿಕಾರಿ ಜಗದೀಶ ಭಂಡಾರಿಯವರನ್ನು ಕೂಡಲೇ ಅಮಾನತ್ತುಗೊಳಿಸಬೇಕೆಂದುಕರ್ನಾಟಕ ರಕ್ಷಣಾ ವೇದಿಕೆ ಜನಪರ ಬಣ ತಾಲೂಕಾಧ್ಯಕ್ಷ ಸುರೇಶ ಬೈಲ್ ಮರ್ಚೇಡ್ ಒತ್ತಾಯಿಸಿದರು.

CHETAN KENDULI

ತಹಶೀಲ್ದರಾರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು , ತಾಲೂಕಿನ ಜನರು ಕೊರೋನಾ, ಡೆಂಗ್ಯೂ, ಮಲೇರಿಯಾ, ಸೇರಿದಂತೆ ಅನೇಕ ರೀತಿಯ ರೋಗಗಳಿಗೆ ತುತ್ತಾಗಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹಾಗೂ ಇತ್ತಿಚಿಗೆ ಪಟ್ಟಣದಲ್ಲಿ ಡೆಂಗ್ಯೂ ಎನ್ನುವಂತಹ ಮಹಾಮಾರಿಗೆ ಅನೇಕ ಚಿಕ್ಕ ವಯಸ್ಸಿನ ಮಕ್ಕಳು ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ. ತಾಲೂಕಿನಲ್ಲಿ ಇಷ್ಟೆಲ್ಲಾ ಅನೇಕ ಸಾಂಕ್ರಮಿಕ ರೋಗಗಳು ಹರಡಿ ಜನ ಸಾಮಾನ್ಯರು ಸಾವು ಬದುಕಿನ ಮಧ್ಯೆ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ, ಆದರೆ ಇದಕ್ಕೆ ಸಂಬಂಧಪಟ್ಟ ಆರೋಗ್ಯ ಇಲಾಖೆ ಪುರಸಭೆ ಇಲಾಖೆ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದು ಕೂಡಲೇ ರೋಗಗಳನ್ನು ನಿಯಂತ್ರಣ ಮಾಡುವಲ್ಲಿ ನಿರ್ಲಕ್ಷ್ಯವಸಿದ ಹಾಗೂ ಖಾಸಗಿ ಆಸ್ಪತ್ರೆಗಳು ಹಾಗೂ ರಕ್ತ ಪರೀಕ್ಷಾ ಕೇಂದ್ರಗಳ ಜೊತೆ ಶಾಮಿಲಾದ ಡಾ|| ಚಂದ್ರಶೇಖರಯ್ಯ ಅವರನ್ನು ಅಮಾನತ್ತುಗೊಳಿಸಬೇಕು. ಪಟ್ಟಣದ ಸ್ವಚ್ಚತೆ ಕಾಪಾಡುವಲ್ಲಿ ಹಾಗೂ ಪ್ಲಾಸ್ಟಿಕ್ ನಿಷೇಧ ಮಾಡುವಲ್ಲಿ ನಿರ್ಲಕ್ಷ್ಯವಹಿಸಿದ ಮತ್ತು ವಿವಿಧ ಆರೋಪಗಳಿಗೆ ಗುರಿಯಾದ ಪುರಸಭೆ ಮುಖ್ಯಾಧಿಕಾರಿಯನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು.ತಾಲೂಕಿನಲ್ಲಿ ಕೂಡಲೇ ತಾಯಿ ಮಕ್ಕಳ ಆಸ್ಪತ್ರೆಯನ್ನು ಪ್ರಾರಂಭಿಸಬೇಕು.ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಯಂ ವೈದ್ಯಾಧಿಕಾರಿಗಳನ್ನು (ಎಂ.ಡಿ) ನೇಮಿಸಿ ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ತಾಲೂಕಿನ ಇರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಈ ಕೇಂದ್ರಗಳಲ್ಲಿ ಜನರಿಗೆ ಅಗತ್ಯ ಚಿಕಿತ್ಸೆ ಸಿಗುವಂತೆ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ರಕ್ತ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕ ಹಣ ವಸೂಲಿ

ಮಾಡುವ ದಂದೆಗೆ ಕಡಿವಾಣ ಹಾಕಿ ಖಾಸಗಿ ಆಸ್ಪತ್ರೆ ಹಾಗೂ ಪರೀಕ್ಷಾ ಕೇಂದ್ರಗಳ ಮೇಲೆ ಸೂಕ್ತಕ್ರಮ ಕೈಗೊಂಡು ಸರ್ಕಾರದ ದರವನ್ನು ನಿಗದಿಪಡಿಸಬೇಕು.ಎಂದು ಒತ್ತಾಯಿಸಿದರು..ಈ ಸಂದರ್ಭದಲ್ಲಿ ಮುಖಂಡರಾದ ಇರ್ಪಾನ್ ಧಣಿ,ಮಹಿಳಾ ಘಟಕದ ಅಧ್ಯಕ್ಷೆ ಬೇಬಿ ,ಹುಸೇನ್ ಖಾನ್ ಚೀಕಲಪರ್ವಿ,ದೀಪಾಕ್ ಪಾಟೀಲ್ ,ಪಿ.ಲೀಲಾವತಿ,ಲಕ್ಷ್ಮಣ್ ಮಾನ್ವಿ.ಸಬ್ಜಲಿ ಮಾನ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ರಾಯಚೂರು ಜಿಲ್ಲಾ ವರದಿ

Be the first to comment

Leave a Reply

Your email address will not be published.


*