ಇಂಡಿಯಾ ಬುಕ್ ,ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೆರ್ಪಡೆಯಾದ ಪ್ರದೀಪ ನಾಯ್ಕನ ಕಲೆ 29 June, 2021

ವರದಿ :- ಸ್ಪೂರ್ತಿ ಎನ್ ಶೇಟ್

ರಾಜ್ಯ ಸುದ್ದಿ

CHETAN KENDULI

ಹೊನ್ನಾವರ; ತಾಲೂಕಿನ ಗೇರುಸೊಪ್ಪಾ ಬಸಾಕುಳಿಯ ಪ್ರದೀಪ ಮಂಜುನಾಥ್ ನಾಯ್ಕ.ಪದವಿಯನ್ನು ಎಸ್ ಡಿ ಎಮ್ ಪದವಿ ಕಾಲೇಜಿನಲ್ಲಿ ಪೂರ್ಣಗೊಳಿಸಿ ಪ್ರಸ್ತುತ
ಬಿ. ಎಡ್ ಶಿಕ್ಷಣ ವನ್ನು ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ್ ಕಾರವಾರದಲ್ಲಿ ವ್ಯಾಸಂಗದಲ್ಲಿದ್ದಾರೆ.ಪ್ರದೀಪ್ ಗೆ ಚಾಕ್ ಆರ್ಟ್ ಎಂದರೆ ಏನೋ ಖುಷಿ ಹಾಗೆ ಅದನ್ನು ಮಾಡಬೇಕೆಂಬ ಹಂಬಲದಿಂದ ಕೇವಲ 2 ವರ್ಷಗಳಿಂದ ಈ ಹವ್ಯಾಸ ಶುರುವಾಗಿ ಮೊದ ಮೊದಲು ಇಂಗ್ಲಿಷ್ ನ ಅಕ್ಷರ ಕೆತ್ತುವ ಅಭ್ಯಾಸ ಮಾಡುತ್ತಾ ಹಾಗೆ ಕೆಲ ದಿನಗಳ ನಂತರ ತನ್ನ ಗೆಳೆಯರ ಹೆಸರು ಹಾಗೆ ಭಗತ್ ಸಿಂಗ್,ಬುದ್ಧ, ಐಪಿಎಲ್ ಟವರ್ , ಗಾಂಧೀಜಿ ಮುಂತಾದವುಗಳನ್ನು ಮಾಡುತ್ತಾ ಆ ಕಲೆಯಲ್ಲಿ ಖುಷಿಯನ್ನು ಕಂಡ. ಹದಿನೇಳು ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆ ಯನ್ನು ಮತ್ತು ಒಂದು ಚಾಕ್ ಪೀಸ್ ನಲ್ಲಿ ರವೀಂದ್ರನಾಥ್ ಠಾಗೋರ್ ಅವರ ರಚಿಸಿದ ರಾಷ್ಟ್ರಗೀತೆ ಹೆಸರನ್ನು ಕೇವಲ 18 ತಾಸುಗಳ ಕಾಲ ಕೆತ್ತಿ ಅದನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಕಳುಹಿಸಿದ. ಅವರು ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ ಪ್ರದೀಪ್ ಹೆಸರನ್ನು ದಾಖಲಿಸಿ ಕೊಂಡಿದ್ದಾರೆ.

ಈ ಕುರಿತು ಚಾಕ್ ಪೀಸ್ ಆರ್ಟಿಸ್ಟ್ ಪ್ರದೀಪ್ ಮಾತನಾಡಿ ಕಾಲೇಜಿನ ರಜಾ ಅವಧಿಯಲ್ಲಿ ಅದರಲ್ಲೂ ತೌಕ್ತೆ ಚಂಡಮಾರುತದ ಸಮಯದಲ್ಲಿ ಆನ್ಲೈನ್ ಕ್ಲಾಸ್ ಇರಲ್ಲಿಲ್ಲ. ಇನ್ನೇನಾದರೂ ಮಾಡಬೇಕು ಎನ್ನುವ ಕುತೂಹಲವಿತ್ತು. ಹಾಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನ ಸಾಧಕರನ್ನು ನೋಡಿ ನಾನು ಏನಾದರೂ ಮಾಡಬೇಕು ಎಂದು ಈ ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆ ಬರೆದು ಸಾಧನೆ ಮಾಡಿದೆ ಎಂದರು.ಪ್ರದೀಪ್ ಸಾಧನೆ ಇಷ್ಟು ಮಾತ್ರವಲ್ಲ ಸಂಗೀತ, ತಬಲಾ , ಚಿತ್ರಕಲೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಚಿತ್ರಕಲೆ ಮತ್ತು ಸಂಗೀತ ಬಾಲ್ಯದಿಂದ ಮಾಡುತ್ತಾ ಬಂದಿದ್ದು ಸಂಗೀತವನ್ನು ಹೊನ್ನಾವರದ ಎಸ್ ಡಿ ಎಮ್ ಕಾಲೇಜಿನಲ್ಲಿ ಸತತ ಮೂರುವರ್ಷದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾನೆ.ಹಾಗೆ ಚಿತ್ರಕಲೆಯಲ್ಲಿ ತನ್ನ ಗೆಳೆಯರ ಚಿತ್ರ ಮತ್ತು ಕಲಿಸಿದ ಗುರುಗಳ ಚಿತ್ರ ಮತ್ತು ಫಿಲ್ಮ್ ಆಕ್ಟರ್ ಚಿತ್ರ ಮತ್ತು ಅನೇಕ ಚಿತ್ರಗಳನ್ನು ಬಿಡಿಸುತ್ತಾ ಬಿಡುವಿನ ಸಮಯವನ್ನು ಎಲ್ಲಾ ಕಲೆಯಲ್ಲಿ ತೊಡಗಿಸಿ ಕೊಂಡಿದ್ದಾನೆ.

ಇತನ ಕಲೆಗೆ ಗೆಳೆಯರು ಕಲಾನಿಧಿ ಪ್ರದೀಪ ಎಂದು ಹೆಸರನ್ನು ನೀಡಿದ್ದು ಪ್ರದೀಪ್ ಅವರಿಗೆ ತುಂಬಾ ಖುಷಿಯನ್ನು ತಂದಿದೆ.ಹಾಗೆ ಮುಂದಿನ ದಿನಗಳಲ್ಲಿ ಸಂಗೀತದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬೇಕೆನ್ನುವ ಆಸೆ ಇದೆ..ಹಾಗೆ ನನ್ನ ಈ ಸಾಧನೆಗೆ ತಂದೆ ಮಂಜುನಾಥ ನಾಯ್ಕ್ ತಾಯಿ ಚಂದ್ರಕಲಾ ಮತ್ತು ಕುಟುಂಬದವರು, ನನ್ನ ಗುರುಗಳು ಮತ್ತು ನನ್ನ ಕಾಲೇಜಿನ ಪ್ರಾಚಾರ್ಯರು ಮತ್ತು ಗೆಳೆಯರು ಶುಭಾಶಯವನ್ನು ಕೋರಿ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಪ್ರದೀಪ್ ಅನಿಸಿಕೆ ಹಂಚಿಕೊಂಡರು.

Be the first to comment

Leave a Reply

Your email address will not be published.


*