ರೋಟರಿ ಕ್ಲಬ್‍ನಿಂದ ಕುಮಟಾ ಆಸ್ಪತ್ರೆಗೆ ರೂ.1 ಕೋಟಿಗೂ ಅಧಿಕ ವೈದ್ಯಕೀಯ ಪರಿಕರ ಪೂರೈಕೆ ಯಶಸ್ವಿ; ಶಶಿಕಾಂತ ಕೊಳೆಕರ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ

CHETAN KENDULI

ಕುಮಟಾ: ಅಂತರಾಷ್ಟ್ರೀಯ ರೋಟರಿ ಕ್ಲಬ್‍ನಿಂದ ಇಲ್ಲಿನ ಸರ್ಕಾರಿ ತಾಲೂಕಾಸ್ಪತ್ರೆಗೆ 1 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಅಗತ್ಯ ಪರಿಕರಗಳನ್ನು ಪೂರೈಸುವ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಮೂಲಕ ಈ ಭಾಗದ ತುರ್ತು ಆರೋಗ್ಯ ಸೇವೆಗೆ ಮಹತ್ವದ ಕೊಡುಗೆ ನೀಡಲಾಗುತ್ತಿದೆ ಎಂದು ರೋಟರಿ ಕ್ಲಬ್ ತಾಲೂಕಾಧ್ಯಕ್ಷ ಶಶಿಕಾಂತ ಕೊಳೆಕರ ತಿಳಿಸಿದರು.ಸೋಮವಾರ ಪಟ್ಟಣದ ರೋಟರಿ ಸಭಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ರೋಟರಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಮಟಾ ಮೂಲದವರೇ ಆದ ಶರದ್ ಪೈ ತಾಲೂಕಿನ ಆರೋಗ್ಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಹಲವು ನೂತನ ಯೋಜನೆಗೆ ಚಾಲನೆ ನೀಡಿದ್ದರು. ಅದರಂತೆ ಹಿರೇಗುತ್ತಿ ಮೂಲದ ಪ್ರಕಾಶ ನಾಯ್ಕ 30 ಲಕ್ಷರೂ.ಗಳಿಗೂ ಅಧಿಕ ಮೌಲ್ಯದ ಐಸಿಯು ಹೊಂದಿದ ಆಂಬ್ಯುಲೆನ್ಸ ನೀಡಿದ್ದಾರೆ. ಅಲ್ಲದೇ, ಸುಮಾರು 30 ಲಕ್ಷ ರೂ. ರೋಟರಿ ಗ್ಲೋಬಲ್ ಅನುದಾನವನ್ನು ಮೊದಲ ಬಾರಿಗೆ ಪಡೆದು ವಿವಿಧ ಮಹತ್ವದ ಕಾರ್ಯಕ್ಕೆ ತೊಡಗಿರುವುದು ಐತಿಹಾಸಿಕವಾಗಿದೆ.

ಅಧ್ಯಕ್ಷನಾಗಿ ಜೂ.30ಕ್ಕೆ ನಮ್ಮ ಅಧಿಕಾರಾವಧಿ ಮುಗಿಯಲಿದ್ದು, ಯೋಜನೆ ಮುಂದುವರಿಕೆಗೆ ಎಂ.ಬಿ.ಪೈ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಮಿತಿ ಸಂಘಟಿಸಲಾಗಿದೆ. ತಾಲೂಕಾಸ್ಪತ್ರೆಗೆ ಅಗತ್ಯವಿರುವ ಪರಿಕರಗಳನ್ನು ಗುರುತಿಸಿ, ಖರೀದಿಸುವ ಪ್ರಕ್ರಿಯೆ ಈಗಾಗಲೇ ನಡೆದಿದ್ದು, ರೋಟರಿ ಕ್ಲಬ್ ಸಾಮಾಜಿಕ ಜವಾಬ್ದಾರಿಯಿಂದ ಕೈಗೆತ್ತಿಕೊಂಡಿರುವ ಯೋಜನೆಗೆ ದಾನಿಗಳ ಸಹಯೋಗ ಇನ್ನಷ್ಟು ಬೇಕಾಗಿದೆ ಎಂದರು.ರೋಟರಿ ಜಿಲ್ಲಾ ಪ್ರಮುಖ ಜಿ.ಎಸ್.ಹೆಗಡೆ ಮಾತನಾಡಿ, ತಾಲೂಕಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬ ಸಾರ್ವಜನಿಕ ಬೇಡಿಕೆ ಈಡೇರಿಲ್ಲ. ಆಪತ್ಕಾಲದಲ್ಲಿ ರೋಗಿಗಳನ್ನು ದೂರದ ಮಣಿಪಾಲ, ಗೋವಾ, ಹುಬ್ಬಳ್ಳಿಗೆ ಒಯ್ಯುವಷ್ಟರಲ್ಲಿ ಪ್ರಾಣಾಪಾಯ ಹೆಚ್ಚುತ್ತಿರುವದರಿಂದ ನಮ್ಮ ತಾಲೂಕಾಸ್ಪತ್ರೆಯನ್ನು ಯಾವುದೇ ತುರ್ತು ಆರೋಗ್ಯ ಅಗತ್ಯಕ್ಕೆ ತಕ್ಕಂತೆ ಮೇಲ್ದರ್ಜೆಗೇರಿಸುವ ಹಾಗೂ ಎಲ್ಲ ಸೌಲಭ್ಯಗಳನ್ನು ಅಳವಡಿಸುವ ಪ್ರಯತ್ನ ನಮ್ಮದಾಗಿದೆ ಎಂದರು.ಹಿರಿಯ ವೈದ್ಯ ಡಾ.ಡಿ.ಡಿ.ನಾಯಕ ಮಾತನಾಡಿ, ಕುಮಟಾ ತಾಲೂಕಾಸ್ಪತ್ರೆಗೆ ಒಳ್ಳೆಯ ಹೆಸರಿದೆ. ಉತ್ತಮ ವೈದ್ಯರಿದ್ದಾರೆ. ಆದರೆ ಸೂಕ್ತ ಆಧುನಿಕ ಉಪಕರಣಗಳ ಕೊರತೆಯಿದೆ. ಅದಕ್ಕೆ ಪ್ರಾಮುಖ್ಯತೆ ಕೊಡುವ ಉದ್ದೇಶದಿಂದ ರೋಟರಿ ಕ್ಲಬ್ ದೊಡ್ಡ ಕೆಲಸಕ್ಕೆ ಕೈಹಾಕಿದೆ. ಜನ ಸಹಕರಿಸಿದರೆ ಶೀಘ್ರದಲ್ಲಿಯೇ ತಾಲೂಕಾಸ್ಪತ್ರೆಯು ಎಲ್ಲ ಜೀವರಕ್ಷಕ ಸೌಲಭ್ಯಗಳನ್ನು ಹೊಂದಲಿದೆ ಎಂದರು.ಸುದ್ದಿಗೋಷ್ಟಿಯಲ್ಲಿ ಕಾರ್ಯದರ್ಶಿ ಅತುಲ ಕಾಮತ, ರೋಟರಿ ಪ್ರಮುಖರಾದ ವಿನಾಯಕ ಹೆಗಡೆ, ವಸಂತ ರಾವ, ಸುರೇಶ ಭಟ್ಟ, ಎನ್ ಆರ್. ಗಜು, ಜೈವಿಠಲ ಕುಬಾಲ, ಡಾ. ನಮೃತಾ ಶಾನಭಾಗ ಸೇರಿದಂತೆ ಇನ್ನಿತರರು ಇದ್ದರು

Be the first to comment

Leave a Reply

Your email address will not be published.


*