ಯುವಕರನ್ನು ಸಾಮಾಜಿಕ ಸೇವೆಯತ್ತ ಸೆಳೆಯುತ್ತಿರುವ ಸಂಸ್ಥೆಯ ಸಂಡೆ ಫಾರ್ ಸೋಷಲ್ ವರ್ಕ್ – ಈಶ್ವರ್ ವಜ್ಜಲ್

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ರಾಜ್ಯ ಸುದ್ದಿಗಳು 

ಲಿಂಗಸ್ಗೂರು

ಅಭಿನಂದನ್ ಸಂಸ್ಥೆಯ ಸಂಡೆ ಫರ್ ಸೋಷಲ್ ವರ್ಕ್ ಅಭಿಯಾನದಡಿಯಲ್ಲಿ ಪ್ರತಿ ವಾರದಂತೆ ಈ ವಾರದ ಸೇವಾ ಕಾರ್ಯವನ್ನು ಲಿಂಗಸೂರಿನ ಈಶ್ವರ ವಜ್ಜಲ್ ಅಭಿಮಾನಿ ಬಳಗ ಹಾಗೂ ಹಸಿರು ಲಿಂಗಸಗೂರು ಸಮಿತಿಗಳು ಸಹಯೋಗದೊಂದಿಗೆ ಲಿಂಗಸಗೂರಿನ ಹೃದಯ ಭಾಗದಲ್ಲಿ ಇರುವ ಗಡಿಯಾರ್ ಚೌಕ್ ಸಾರ್ವಜನಿಕ ಉದ್ಯಾನವನ್ನು ಸ್ವಚ್ಛಗೊಳಿಸಿ ಉದ್ಯಾನದ ಕಾಂಪೌಂಡ್ ಗೋಡೆ ಮತ್ತು ಬೆಂಚುಗಳಿಗೆ ಬಣ್ಣವನ್ನು ಹಚ್ಚಲಾಯಿತು. ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ ನಮ್ಮ ಅಗಲಿದ ಕನ್ನಡದ ನಾಯಕ ನಟ ದಿ.ಪುನೀತ್ ರಾಜಕುಮಾರ್ ಹಾಗೂ ದಿ.ನ್ಯಾ.ವೆಂಕಟಾಚಲಯ್ಯ ಅವರ ಸವಿ ನೆನಪಿಗಾಗಿ ಸಸಿಗಳನ್ನು ನೆಟ್ಟು ಶ್ರದ್ಧಾಂಜಲಿ ಅರ್ಪಿಸಲಾಯಿತು.

CHETAN KENDULI

ಈ ಸಂದರ್ಭದಲ್ಲಿ ಮಾತನಾಡಿದ ಲಿಂಗಸಗೂರಿನ ಯುವ ನಾಯಕರಾದ ಶ್ರೀಯುತ ಈಶ್ವರ್ ಎಮ್ ವಜ್ಜಲ್ ಅವರು ಈಗಾಗಲೆ ಮಸ್ಕಿಯ ಅಭಿನಂದನ್ ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ರಾಜ್ಯಾದ್ಯಂತ ಹೆರಸನ್ನು ಮಾಡಿತ್ತಿರುವದು ಗಮನಾರ್ಹ ಸಂಗತಿ. ಈ ಕಾರ್ಯಗಳ ಜೊತೆಗೆ ಪ್ರತಿ ರವಿವಾರವನ್ನು ಸಮಾಜ ಸೇವೆಗೆ ಮೀಸಲಿಡುವ ಉದ್ದೇಶದಿಂದ ಆರಂಭಿಸಿದ ಸಂಡೆ ಫಾರ್ ಸೋಶಿಯಲ್ ವರ್ಕ್ ಎಂಬ ನೂತನ ಅಭಿಯಾನ ಯುವಕರನ್ನು ಸಾಮಾಜಿಕ ಸೇವೆಯತ್ತ ಸೆಳೆಯುವ ಕಾರ್ಯ ಮಾಡುತ್ತಿದೆ. ಈ ಸೇವಾ ಕಾರ್ಯವನ್ನು ನಮ್ಮ ನಗರದ ಉದ್ಯಾನದಲ್ಲಿ ಹಮ್ಮಿಕೊಂಡು ಈ ಉದ್ಯಾನಕ್ಕೆ ನವ ಚೈತನ್ಯ ನೀಡಲು ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲಾ ಸ್ವಯಂ ಸೇವಕರಿಗೆ ಹಾಗೂ ಅಭಿನಂದನ್ ಸಂಸ್ಥೆಗೂ ನಮ್ಮ ನಗರದ ನಾಗರಿಕ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹಾಗೆಯೇ ಇವರ ಈ ಅಭಿಯಾನ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹರಸಿದರು. 

ಈ ಸಂದರ್ಭದಲ್ಲಿ ಲಿಂಗಸಗೂರಿನ ಈಶ್ವರ್ ವಜ್ಜಲ್ ಅಭಿಮಾನಿ ಬಳಗ, ಹಸಿರು ಲಿಂಗಸಗೂರು ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪ್ರಭುಸ್ವಾಮಿ ಅತ್ತನೂರು, ಭೀಮಸೇನ ಜೋಶಿ, ರಾಜಶೇಖರ ಪಾಟೀಲ್ ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಕ್ಯಾತನಟ್ಟಿ, ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಸದಸ್ಯರಾದ ಬಸವರಾಜ ಬನ್ನಿಗಿಡ, ಮಲ್ಲಿಕಾರ್ಜುನ ಬಡಿಗೇರ, ಅಮೀತ್ ಕುಮಾರ್ ಪುಟ್ಟಿ, ಕಿಶೋರ್, ಶ್ರೀಶೈಲ ಮತ್ತು ಲಿಂಗಸಗೂರು ನಗರದ ನಾಗರೀಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*