ಹಗರಿಬೊಮ್ಮನಹಳ್ಳಿ: ತಹಶೀಲ್ದಾರ್ ರಿಂದ ಚಮ್ಮಾರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜಿಲ್ಲಾ ಸುದ್ದಿಗಳು

CHETAN KENDULI

ವಿಜಯನಗರ:

ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ತಹಶಿಲ್ದಾರರಾದ ಶರಣಮ್ಮ ನವರು,ಚಮ್ಮಾರರಿಗೆ ಆಹಾರ ಕಿಟ್ ನೀಡಿ ನೀಡಿದರು. ಸರ್ಕಾರದಿಂದ ಬರಬೇಕಾಗಿರುವ ಸೌಲಭ್ಯಗಳನ್ನು ಶೀಘ್ರವೇ ಒದಗಿುವಲ್ಲಿ, ಪ್ರಾಮಾಣಿಕ ಪ್ರಯತ್ನ ಮಾಡಲಾಗುದು ಅವರ ಕುಟುಂಬಕ್ಕೆ ಅವಶ್ಯಕ ಯೋಜನೆಗಳನ್ನು ಸೇವಾ ಸಿಂಧು ಯೋಜನೆ ಅಡಿಯಲ್ಲಿ ಒದಗಿಸಿ ಕೊಡ ಲಾಗುವುದೆಂದು ತಹಶಿಲ್ದಾರರಾದ ಶರಣಮ್ಮ ಭರವಸೆ ನೀಡಿದ್ದಾರೆ.



ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘದ ಸರ್ಧಾರ ಹುಲಿಗೆಮ್ಮ ಮಾತನಾಡಿ,ಲಾಕ್ ಡೌನ್ ಹಿನ್ನಲೆಯಲ್ಲಿ ಚಮ್ಮಾರರ ಜೀವನ ಅಸ್ಥವ್ಯಸ್ಥವಾಗಿದೆ. ಕಾರಣ ಶೀಘ್ರವೇ ಅಗತ್ಯ ಪರಿಹಾರ ಮಂಜೂರು ಮಾಡಬೇಕಾಗಿದೆ ಎಂದರು. ತಹಶಿಲ್ದಾರರು ಆಹಾರ ಕಿಟ್ ನೀಡೋ ಮೂಲಕ ಜನಪರ ಕಾಳಜಿ ತೋರಿದ್ದಾರೆ. ಅವರ ಉದಾರತೆಗೆ ರೈತರು ನಾಗರೀಕರು ಕಾರ್ಮಿಕರು ತಹಶಿಲ್ದಾರರನ್ನು ‍ಈ ಸಂದರ್ಭದಲ್ಲಿ ಆಭಿನಂದಿಸಿದ್ದಾರೆಂದು ಸರ್ಧಾರ್ ಹುಲಿಗೆಮ್ಮ ತಿಳಿಸಿದ್ದಾರೆ.
ಸರ್ಕಾರದ ಸೌಕರ್ಯಗಳನ್ನು ಒದಗಿಸುವಂತೆ ತಾಲೂಕು ಚಮ್ಮಾರರ ಸಂಘದ ಪಾದಾಧಿಕಾರಿಗಳು ತಹಶಿಲ್ದಾರರಿಗೆ ಮನವಿ ಮಾಡಿದ್ದಾರೆ. ಸರ್ಧಾರ ಹುಲಿಗೆಮ್ಮ ನೇತೃತ್ವವಹಿಸಿದ್ದು
ತಹಶಿಲ್ದಾರರಾದ ಶರಣಮ್ಮ ರವರಿಗೆ ಮನವಿ ಪತ್ರ ನೀಡಲಾಯಿತು. ಚಮ್ಮಾರ ಸಂಘದ ನೀಲಪ್ಪ,ಸಿದ್ದಪ್ಪ,ಹೊನ್ನಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*