ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎನ್ನುವ ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಹಾಗೂ ಎನ್.ಎಸ್.ಯು.ಐ ವತಿಯಿಂದ ಮೇಣದಬತ್ತಿ ಹಚ್ಚುವುದರ ಮೂಲಕ ಗುರುವಾರ ಶಾಂತಿಯುತ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ದೂರದ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಗ್ಯಾಂಗ್ ರೇಪ್ ಪ್ರಕರಣಗಳ ಬಗ್ಗೆ ಕೇಳುತ್ತಿದ್ದೆವು ಆದರೆ ಇಂದು ನಮ್ಮ ರಾಜ್ಯದಲ್ಲಿ ಗ್ಯಾಂಗ್ ರೇಪ್ ಪ್ರಕರಣವಾಗುತ್ತಿದ್ದು ರಾಜ್ಯ ಸರಕಾರ ಇದರ ಬಗ್ಗೆ ಕಠಿಣ ಕಾನೂನು ಜಾರಿ ಮಾಡಬೇಕಿದೆ. ಅಲ್ಲದೇ ತಪ್ಪಿತಸ್ಥರನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಡಿ.ಎಸ್.ಎಸ್. ಮುಖಂಡ ಡಿ. ಬಿ. ಮೂದೂರ ಮಾತನಾಡಿ, ದೇಶದಲ್ಲಿ ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ಇದೆ ಮೊದಲಲ್ಲ. ಆದರೆ ಇಂತಹ ದುಸ್ಥಿತಿ ಕರ್ನಾಟಕ ರಾಜ್ಯಕ್ಕೂ ಒಕ್ಕರಿಸಿದ್ದು ದುರದೃಷ್ಟಕರ ಸಂಗತಿಯಾಗಿದೆ. ಕೂಡಲೇ ರಾಜ್ಯ ಸರಕಾರ ಇಂತಹ ಪ್ರಕರಣಗಳನ್ನು ಮರುಕಲಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾಂಸ್ಕೃತಿಕ ಬೀಡಿನಲ್ಲಿ ವಿದ್ಯಾರ್ಥಿಯ ಮೇಲೆ ಅತ್ಯಾಚಾರದ ಪ್ರಕರಣ ರಾಜ್ಯವೇ ತಲೆ ತಗ್ಗಿಸುವ ಸಂಗತಿಯಾಗಿದೆ. ಇದರಿಂದ ಬಾಲಕಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕೂಡಲೇ ರಾಜ್ಯ ಸರಕಾರ ಈ ಪ್ರಕರಣದ ಬಗ್ಗೆ ಗಮನ ಹರಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಒಳಪಡಿಸುವ ಮೂಲಕ ಅತ್ಯಾಚಾರಕ್ಕೆ ಒಳಗಾದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.
-ಸದ್ದಾಂ ಕುಂಟೋಜಿ, ರಾಜ್ಯ ಪ್ರ. ಕಾರ್ಯದರ್ಶಿಗಳು, ಎನ್.ಎಸ್.ಯು.ಐ.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೂಸುಫ್ ನಾಯ್ಕೋಡಿ, ಮುದ್ದೇಬಿಹಾಳ ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ ಶಿರೋಳ, ಗ್ರಾಮ ಪಂಚಾಯತಿ ಸದಸ್ಯ ಪ್ರಶಾಂತ ತಾರನಾಳ, ಶೃಂಗಾರಿಗೌಡರು ಫೌಂಡೇಷನ್ ಸಂಚಾಲಕ ಸಿದ್ದನಗೌಡ ಪಾಟೀಲ, ಎನ್.ಎಸ್.ಯು.ಐ ನಗರದ ಘಟಕದ ಅಧ್ಯಕ್ಷ ಅಬೂಬ್ಕರ ಹಡಗಲಿ, ಯುವ ಕಾಂಗ್ರೆಸ್ ಮುಖಂಡ ದಿಲೀಪ್ ಜಾನ್ವೇಕರ, ಬಾಬಾ ಪಟೇಲ, ಸಮೀರ ದ್ರಾಕ್ಷಿ, ಶರಣು ಚಲವಾದಿ, ಸಚೀನ ಪಾಟೀಲ, ಲಕ್ಷಣ ಚವ್ಹಾಣ, ಟೀಪು ಮ್ಯಾಗೇರಿ, ರಾಖೇಶ ಹೋಲಗೇರಿ, ಸಂಗು ಚಲವಾದಿ, ಸಂಗಮೇಶ ಇದ್ದರು.
Be the first to comment