ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯಗಳ ಪ್ರಗತಿ ಪರಿಶಿಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ    

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

  ಭಟ್ಕಳ                                                                                                                                                 ರೆಡ್‌ಅಲರ್ಟ್‌ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಹಲವಾರ ಜನ ಮನೆ ಮಠಗಳನ್ನು ಕಳೆದು ಕೊಂಡು ನಿರಾಶ್ರೀತರಾಗಿದ್ದಾರೆ. ಈ ಸಂಭದ ಕಳೆದ 5-6 ದಿನಗಳ ಹಿಂದೆ ಖುದ್ದಾಗಿ ಮುಖ್ಯ ಮಂತ್ರಿಗಳೇ ಜಿಲ್ಲೆಗೆ ಆಗಮಿಸಿ ವೀಕ್ಷಣೆ ನಡೆಸಿಬೇಕಿದ್ದ ಕಾರ್ಯಕ್ರಮ ಕೊನೆಯಕ್ಷಣದಲ್ಲಿ ರದ್ದುಗೊಂಡಿತ್ತು . ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೆರೆಗೆ ಭಟ್ಕಳ -ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಆದ ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯಗಳ ಕೈಗೊಂಡ ಬಗೆಗಿನ ಪ್ರಗತಿ ಪರಿಶಿಲನಾ ಸಭೆ ಇಂದು ಭಟ್ಕಳ ತಾಲುಕಾ ಆಡಳಿತ ಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೊಟಾ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಹವಾಮಾನ ಇಲಾಖೆ ನೀಡಿದ ರೆಡ್‌ ಅಲರ್ಟ್‌ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಸುರಿತ್ತಿರುವ ಮಳೆಗೆ ಜಿಲ್ಲೆಯಲ್ಲಿ ಸಾವಿರಾರು ಮಂದಿ ಮನೆ ಮಠ ಜಾನುವಾರುಗಳನ್ನು ಕಳೆದು ಕೊಂಡು ನಿರಾಶ್ರಿ ತರಾಗಿದ್ದಾರೆ ಈ ಸಂಭಂದ ಭಟ್ಕಳ ಹಾಗೂ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಶಾಸಕ ಸುನಿಲ್‌ ನಾಯ್ಕ ಸೇರಿದಂತೆ 2 ಪಟ್ಟಣ ಪಂಚಾಯತ್‌ 2 ಪುರಸಭೆ ಹಾಗೂ 38 ಗ್ರಾಮ ಪಂಚಾಯತ್‌ನ ಅಧಿಕಾರಿಗಳು ಅರಣ್ಯ ಇಲಾಖೆ ಪೋಲಿಸ್‌ ಇಲಾಖೆ ಸೇರಿದಂತೆ ಪ್ರಕೃತಿ ವಿಕೊಪದ ಪರಿಹಾರ ಕಾರ್ಯಕ್ಕೆ ಸಂಭಂದಿಸಿದ ನೋಡೆಲ್‌ ಆಫಿಸರ್ಗಳು, ತಾಲೂಕಿನ ಭಟ್ಕಳ ಮತ್ತು ಹೊನ್ನಾವರ ಹಿರಿಯ ,ಅಧಿಕಾರಗಳ ಜೊತೆ ಪರಿಹಾರ ಕಾರ್ಯಗಳ ಕುರಿತು ಚರ್ಚಿಸಿದರು.

            ಈ ಸಂಧರ್ಭದಲ್ಲಿ ಅಧಿಕಾರಿಗಳೋದಿಗೆ ಮಾತನಾಡಿ ಮುಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳಿಂದ ಅಧಿಕಾರಿಗಳ ಅಜಾಗೂರಕತೆಯಿಂದ ಎನಾದರೂ ಸಾವು ನೋವು ಅಥವಾ ಎನಾದರು ಸಮಸ್ಯೆಗಳು ಸಂಭವಿಸಿದಲ್ಲಿ ಆ ಪ್ರದೇಶಗಳ ನೋಡೆಲ್‌ ಆಫಿಸರ್‌ ಗಳನ್ನು ಹಾಗೂ ಪಿಡಿಒಗಳನ್ನೆ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ರೆಡ್‌ ಅಲರ್ಟ್‌ ಹಿನ್ನೆಲೆ ಯಲ್ಲಿ ಉಂಟಾದ ಸಮಸ್ಯೆಗಳಿಂದ ಜನರಿಗೆ ಪರಿಹಾರ ಕಾರ್ಯ ಶಿಘ್ರ ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸಮಾಡಿ ಭಾಗಶಃ ಪರಿಹಾರ ಧನ ನೀಡಿ ಬಾಕಿ ಇದ್ದ ಪರಿಹಾರ ಧನವನ್ನು ಇಂದು ಸಂಜೆಯ ಒಳಗಾಗಿ ಸಂತ್ರಸ್ತರಿಗೆ ಕೊಡುವಂತೆ ಆದೇಶಿಸಿದರು.

ಈ ಸಂಧರ್ಭದಲ್ಲಿ ನೌಕರರಿಗೆ ಯಾವುದೇ ಸರ್ಕಾರಿ ನೌಕರರಿಗೆ ರಜೆ ನೀಡದಂತೆ ಹಿರಿಯ ಅಧಿಕಾರಿಗಳಿಗೆ ನಿರ್ಧೆಶನ ನೀಡಿದರು. ಹಾಗೂ ಸ್ಥಳಿಯಾಡಳಿತದ ಜನ ಪ್ರತಿನಿಧಿಗಳೊಂದಿಗೆ ನೋಡೆಲ್‌ ಅದಿಕಾರಿಗಳು ಅಥವಾ ಪಿಡಿಒಗಳು ತಮ್ಮ ಮೊಬೈಲ್‌ ನಂಬರ್‌ ನೀಡಿ ಜನರೊಂದಿಗೆ ಸಂಪರ್ಕದಲ್ಲಿದ್ದು ಸಹಕರಿಸಲು ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು. ಹಾಗೆಯೇ ಅವಶ್ಯಕತೆ ಇರುವ ಪ್ರದೇಶಗಳಲ್ಲಿ ಕಾಳಜಿ ಕೇಂದ್ರ ತೆರೆದು ಅಲ್ಲಿರುವ ಆಶ್ರಿತರಿಗೆ ಉಟೋಪಚಾರ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲು ಸೂಚನೆ ನೀಡಿದರು.  

ಸಭೆಯನ್ನು ಮುಗಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಜಿಲ್ಲೆಯಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿ ಸೇರಿದಂತೆ ಪ್ರಾಕ್ರತಿಕ ವಿಕೋಪಗಳಿಗೆ ಸಂಭಂದಿಸಿದಂತೆ ಪರಿಹಾರ ಕಾರ್ಯ ಕೈಗೊಳ್ಳಲು ಎಲ್ಲ ರೀತಿಯ ಸಹಕಾರವನ್ನು ನೀಡಲು ಜಿಲ್ಲಾಡಳಿತ ದಿನದ 24 ಗಂಟೆ ಸಿದ್ದವಿದೆ ಹಾಗೂ ಪ್ರತಿ ಗ್ರಾಮ ಪಂಚಾಯತಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಿ ಕಾರ್ಯಪಡೆ ರಚಿಸಲಾಗಿದೆ. ತಾಲೂಕಾ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್‌ ರೂಮಗಳಿದ್ದು ಈ ಮೂಲಕವೂ ಸಹ ಸಾರ್ವಜನಿಕರು ಸಂಪರ್ಕಿಸಿ ಸಹಾಯ ಪಡೆಯಬಹುದಾಗಿದೆ. ಪೋಲಿಸ್‌ ಇಲಾಖೆ ಸೇರಿದಂತೆ ಸರಕಾರದ ಎಲ್ಲ ಇಲಾಖೆಗಳು ಸಹಕರಿಸಿ ಕೆಲಸ ಮಾಡುವುದರೊಂದಿಗೆ ಅತಿ ಕಡುಬಡವನ ತನಕ ನೆರೆ ಪರಿಹಾರದ ಸಹಾಯ ಸಿಗುವಂತೆ ಕ್ರಮ ಕೈಗೊಡಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರು ಅರಣ್ಯ ಅತಿಕ್ರಮಣದಾರ ಮನೆಗಳಿಗೆ ಹಾನಿಯಾದರೆ ಪರಿಹಾರ ಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಯಾವುದೇ ಗುಡಿಸಲು ಸಹ ಅರಣ್ಯದಲ್ಲಿ ಹಾನಿಯಾದರು ಪರಿಹಾರ ಕೊಡಲು ಜಿಲ್ಲಾಧಿಕಾರಿಗೆ ಸೂಚಿಸಿದಾಗಿ ತಿಳುಸಿದರು.

ಈ ಸಂಧರ್ಭದಲ್ಲಿ ಶಾಸಕ ಸುನಿಲ್ ನಾಯ್ಕ ಸಹಾಯಕ ಆಯುಕ್ತೆ ಮಮತಾದೇವಿ ತಹಶಿಲ್ದಾರ ಸುಮಂತ ಬಿಇ,ಡಿವೈಎಸ್ಪಿ ಬೆಳ್ಳಿಯಪ್ಪ , ಹೊನ್ನಾವರ ತಹಶೀಲ್ದಾರ ನಾಗರಾಜ , ಭಟ್ಕಳ ತಾಲೂಕ ಪಂಚಾಯತ್ ಇ.ಓ ಪ್ರಭಾಕರ ಸಿ, ಹೊನ್ನಾವರ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜೆನಿಯರ ಮಂಜುನಾಥ್ ನಾಯ್ಕ, ಹೆಸ್ಕಾಂ ಭಟ್ಕಳ ಭಟ್ಕಳ್ ಎಂಜಿನಿಯರ ಮಂಜುನಾಥ್ ನಾಯ್ಕ ಸೇರಿದಂತೆ ಭಟ್ಕಳ ಹೊನ್ನಾವರ ತಾಲೂಕ ಮಟ್ಟದ ಅಧಿಕಾರಿಗಳು, ಪಿ.ಡಿ.ಓ ಗಳು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*