ಜಿಲ್ಲಾ ಸುದ್ದಿಗಳು
ಮಸ್ಕಿ
ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಇಂದು ಬೆಳಗ್ಗೆ 7:30 ನಿಮಿಷ ಕ್ಕೆ ತಾಲೂಕ ದಂಡಾಧಿಕಾರಿಗಳಾದ ಕವಿತಾ. ಆರ್ ಇವರ ನೇತೃತ್ವದಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪು ದಂಡಾಧಿಕಾರಿ ನಿರ್ವಹಿಸಿದರೆ ಮತ್ತೊಂದು ಗುಂಪನ್ನು ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಥೋಡ್ ರವರು ಪ್ರಾಥಮಿಕ ಆರೋಗ್ಯ ಕೇಂದ್ರ ಮೆದಿಕಿನಾಳದ ಡಾಕ್ಟರ್ ಮತ್ತು ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತುಸಿಬ್ಬಂದಿವರ್ಗ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ವೃಂದ, ಸರಕಾರಿ ಕಿರಿಯ ಪ್ರಾಥಮಿಕ ಕರೆಗುಡ್ಡ ಶಾಲೆಯಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ವೃಂದ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರೆಲ್ಲರನ್ನು ಒಳಗೊಂಡಂತೆ ಗ್ರಾಮದ ಮನೆ ಮನೆಗೆ, ಅಂಗಡಿ ಮುಗಟ್ಟುಗಳಿಗೆ, ಕುಂಟುನೆಪ ಹೂಡಿಕೊಂದು ಲಸಿಕೆ ಹಾಕಿಸಿಕೊಳ್ಳದೆ ಹೊಲ-ಗದ್ದೆಗಳಿಗೆ ತೆರಳಿದವರಿಗೆ ಹಾಗೂ ಬ್ಯಾಂಕ್ ಗಳಿಗೆ ತೆರಳಿ ಮೊದಲನೇ ಮತ್ತು ಎರಡನೆಯ ಕೊರೋನಾ ಲಸಿಕೆಯನ್ನು ಹಾಕಲಾಯಿತು.ಒಂದು ವೇಳೆ ಯಾರು ಕೋವಿಡ್-19 ಲಸಿಕೆಯನ್ನುಹಾಕಿಸಿಕೊಳ್ಳುವುದಿಲ್ಲವೋ ಅಂತವರ ರೇಷನ್ ಕಾರ್ಡ್ ಬಂದ್ ಮಾಡಲಾಗುವುದು. ಗ್ರಾಮದಲ್ಲಿನ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟ ಎಲ್ಲರು ಕೋರೋನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಮೆದಿಕಿನಾಳ ಗ್ರಾಮದ ಜನತೆಗೆ ಲಸಿಕೆ ಹಾಕಿಸುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.
ಈ ಸಂದರ್ಭದಲ್ಲಿ ಕವಿತಾ. ಆರ್ ತಹಶೀಲ್ದಾರ್ ಮಸ್ಕಿ, ಶರಣೇಗೌಡ ಅಂಗವಿಕಲರ ಕಲ್ಯಾಣಅಧಿಕಾರಿ ರಾಯಚೂರು,ಬಾಬು ರಾಥೋಡ್ ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ, ತಿಮ್ಮಣ್ಣ ಭೋವಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಡಾ. ಮಲ್ಲಿಕಾರ್ಜುನ ಇತ್ಲಿ ಪ್ರಾ.ಆ.ಕೇಂದ್ರ ಮೆದಿಕಿನಾಳ, ಪ್ರಕಾಶ ಗ್ರಾಮಲೆಕ್ಕಧಿಕಾರಿ ಮೆದಿಕಿನಾಳ, ಮಲ್ಲಮ್ಮ ಮುಖ್ಯೋಪಾಧ್ಯಾಯರು ರವಿಕುಮಾರ್ ಮುಖ್ಯೋಪಾಧ್ಯಾಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಸೇರಿದಂತೆ ಗ್ರಾಮದ ಹಿರಿಯ ಮುಖಂಡರಿದ್ದರು.
Be the first to comment