ರಾಜ್ಯ ಸುದ್ದಿಗಳು
ಭಟ್ಕಳ
ಶ್ರೀ ದಿನೇಶ ಬಾಬು ಪಾವಸ್ಕರ (35 ವರ್ಷ) ಹಿಂದೂಕಾಲನಿ ಭಟ್ಕಳ ಇವರು ಇಂದು 1 ಗಂಟೆಗೆ ಭಟ್ಕಳ ನಗರ ಪೋಲಿಷ್ ಠಾಣೆಯಲ್ಲಿ ದೂರು ನೀಡಿ ತಾನೂ ಚಮಗಾರ (ಪರಿಶಿಷ್ಟ ಜಾತಿ)ಗೆ ಸೇರಿದವನಾಗಿದ್ದು, ದಿನಾಂಕ 18-10-2021ರಂದು ಪರಿಶಿಷ್ಟರಿಗೆ ಮೀಸಲಿರುವ ಭಟ್ಕಳ ಪುರಸಭೆ ಹರಾಜು ಪ್ರಕ್ರೀಯೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಬೆಳಿಗ್ಗೆ 11-30 ಗಂಟೆ ಸುಮಾರಿಗೆ ತಾನೂ ಹಾಜರಿದ್ದು ಅಧಿಕಾರಿಗಳನ್ನು ಉದ್ದೇಶಿಸಿ ಸೌಜನ್ಯದಿಂದ ನೈಜ್ಯ ಪರಿಶಿಷ್ಟರಿಗೆ ಸಿಗಬೇಕಾದ ಮಳಿಗೆ ಹರಾಜು ಪ್ರಕ್ರೀಯೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಹೊಂದಿರುವ ನಕಲಿ ಪರಿಶಿಷ್ಟ ಜಾತಿಯವರಿಗೆ ಅವಕಾಶ ನೀಡಿದ್ದು ಕಾನೂನು ಬಾಹಿರವಾಗಿರುತ್ತದೆ.
ಎಂದು ಹೇಳಿದಾಗ ಪುರಸಭಾ ಅಧ್ಯಕ್ಷ ಪರವೇಜ್ ಖಾಸಿಂಜಿ ತನನನ್ನು ಉದ್ದೇಶಿಸಿ ಕಾನೂನು ಬಾಹಿರವೆಂದು ಹೇಳಲು ನೀನು ಯಾರು, ಇನೇನು ಸುಪ್ರಿಂ ಕೋರ್ಟ ಜರ್ಜಾ ಎಂದು ಏರು ಧ್ವನಿಯಲ್ಲಿ ಬೈದು ನೀನು ಸಾರ್ವಜನಿಕವಾಗಿ ಕ್ಷಮೆ ಕೇಳು ಇಲ್ಲದಿದ್ದಲ್ಲಿ ಈ ಪ್ರಕ್ರಿಯೆ ನಡೆಯಲು ಬಿಡುವುದಿಲ್ಲ ಎಂದು ತನಗೆ ಬೆದರಿಕೆ ಹಾಕಿರುತ್ತಾರೆ, ತಾನೋಬ್ಬ ಪರಿಶಿಷ್ಟ ಜಾಲಿಯವನೆಂದು ತಿಳಿದಿದ್ದರೂ ಸಹ ಸಾರ್ವಜನಿಕವಾಗಿ ತನಗೆ ಅವಮಾನ ಆಗುವಂತೆ ವರ್ತಿಸಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಭಟ್ಕಳ ಉಪವಿಭಾಗಾಧಿಕಾರಿ, ಭಟ್ಕಳ ತಹಶೀಲ್ದಾರ, ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಇವರು ಒಬ್ಬ ಪರಿಶಿಷ್ಟ ಜಾತಿಯವನಿಗೆ ಅವಮಾನ ಆಗುತ್ತಿದ್ದರೂ ಸಹ ಮೂಖ ಪ್ರೇಕ್ಷಕರಂತೆ ಕುಳಿತಿದ್ದು ಕರ್ತವ್ಯ ಲೋಪವೆಸಗಿರುತ್ತಾರೆ. ಈ ರೀತಿ ಸುಳ್ಳು ಜಾತಿ ಪ್ರಮಾಣ ಪತ್ರ ಹೊಂದಿರುವವರಿಗೆ ಮಳಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಿ ಒಬ್ಬ ನೈಜ ಪರಿಶಿಷ್ಟ ಜಾತಿಯವನು ಮಾಡಬಹುದಾದ ವ್ಯಾಪಾರ ವ್ಯವಹಾರಕ್ಕೆ ಅಡ್ಡಿಪಡಿಸಿ ಇವರೆಲ್ಲರೂ ಸೇರಿ ತನ್ನ ಮೇಲೆ ದೌರ್ಜನ್ಯ ಎಸಗಿರುತ್ತಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿರುತ್ತಾರೆ.
ಈ ದೂರನ್ನು ಸ್ವೀಕರಿಸಿ ಭಟ್ಕಳ ನಗರ ಠಾಣೆ ಪಿ.ಎಸ್.ಐ. ಹನುಮಂತಪ್ಪ ಕುಡಗುಂಟಿಯವರು ಠಾಣಾ ಗುನ್ನಾ ನಂಬರ 138/2021 ಕಲಂ 3(1)(ಆರ್), 3(1)(ಝಡ್ ಎ) (ಇ) 4(೧) ಎಸ್ಸಿ, ಎಸ್ ಟಿ( ಪ್ರಿವೆನ್ಷನ್ ಆಫ್ ಅಟ್ರಾಸಿಟಿ ಅಮೆಂಡಮೆಂಟ್ ಎಕ್ಟ್ 2015 ರ ಕಾಯಿದೆಗೆ ಅನುಗುಣವಾಗಿ ಪರವೇಜ್ ಖಾಸಿಂಜಿ ಅಧ್ಯಕ್ಷರು ಪುರಸಭೆ ಭಟ್ಕಳ, ಮಮತಾ ದೇವಿ, ಸಹಾಯಕ ಕಮಿಸನರ್ ಭಟ್ಕಳ, ರವಿಚಂದ್ರನ ಎಸ್ ತಹಶೀಲ್ದಾರರು ಭಟ್ಕಳ, ರಾಧಿಕಾ ಎಸ್. ಎಸ್. ಮುಖ್ಯಾಧಿಕಾರಿ ಭಟ್ಕಳ ಇವರ ಮೇಲೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Be the first to comment