ಕೇಸರಿ ಶಾಲಿನ ( kesari shawl ) ಮೂಲಕವೇ ಅಧಿಕಾರ ಪಡೆದುಕೊಂಡ ಮಂದಿ ವಿಧಾನಸೌಧದಲ್ಲಿ ನಡೆದುಕೊಂಡ ರೀತಿ ಟೀಕೆ ಗುರಿಯಾಗಿದೆ

ಬೆಂಗಳೂರು : ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ನಿಂತು ಹಲವು ವರ್ಷಗಳಾಯ್ತು. ಇದೀಗ ಜಾತಿ, ಬಣ್ಣದ ವಿಚಾರದಲ್ಲಿ ರಾಜಕೀಯ ಮಾಡುತ್ತೇವೆ.ಅದರಲ್ಲೂ ಕೇಸರಿಯನ್ನು ಭಾವನಾತ್ಮಕವಾಗಿ ಬಳಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗೇ ನೋಡಿದರೆ ಹಿಂದೂ ಸಮಾಜದ ಪ್ರತಿಯೊಂದು ಹಬ್ಬ ಹರಿದಿನಗಳಂದು ( kesari shawl ) ಕೇಸರಿ ಧ್ವಜ, ಕೇಸರಿ ಬಾವುಟ, ಕೇಸರಿ ಬಟ್ಟೆ ಬಳಸುವುದು ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದು ರಾಜಕೀಯವಾಗಿ ಬಳಕೆಯಾಗಿತ್ತು ಇತ್ತೀಚಿನ ವರ್ಷಗಳಿಂದ. ಕರಾವಳಿಯ ಜಾತ್ರೆ, ನೇಮ ಕೋಲಗಳ ಸಂದರ್ಭದಲ್ಲಿ ಕೇಸರಿ ಬಣ್ಣದ ವಸ್ತುಗಳಿಂದಲೇ ಅಲಂಕರಿಸಲಾಗುತ್ತಿತ್ತು. ಅದಕ್ಕೆ ಪಕ್ಷ ಬೇಧವಿರಲಿಲ್ಲ.

ಆದರೆ ಇಂದು ವಿಧಾನಸೌಧದಲ್ಲಿ ಬಿಜೆಪಿಯ ಶಾಸಕರು ಕೇಸರಿ ಶಾಲನ್ನು ಮೋಜಿಗೆ ಬಳಸಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ರಾಷ್ಟ್ರಪತಿ ಚುನಾವಣೆ ಸಲುವಾಗಿ ಶಾಸಕರು ವಿಧಾನಸೌಧಕ್ಕೆ ಬಂದಿದ್ದರು. ಬಹುತೇಕ ಬಿಜೆಪಿಯ ಶಾಸಕರು ಕೇಸರಿ ಶಾಲಿನೊಂದಿಗೆ ಪ್ರವೇಶ ಕೊಟ್ಟಿದ್ದರು.

ಇದೇ ಸಂದರ್ಭದಲ್ಲಿ ಮತದಾನ ಮುಗಿಸಿ ಬಂದ ಹೆಬ್ಬಾಳ ವಿಧಾನಸಬಾ ಕ್ಷೇತ್ರ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಹಾಗೂ ಬಿಜೆಪಿ ಶಾಸಕರು ಮುಖಾಮುಖಿಯಾಗಿದ್ದಾರೆ. ಹಾಗೇ ಮಾತುಕತೆ ಮುಗಿಸಿ ಹೋಗಿದ್ರೆ ಪರವಾಗಿರಲಿಲ್ಲ. ಬದಲಾಗಿ ಸುರೇಶ್ ಅವರ ಹೆಗಲಿಗೆ ಕೇಸರಿ ಶಾಲು ಹಾಕಿ ಎಳೆದಾಡಲಾರಂಭಿಸಿದ್ದಾರೆ. ರಾಜು ಗೌಡ ಮೊದಲು ಕೇಸರಿ ಶಾಲು ಹಾಕಿದ್ರೆ ಬಳಿಕ ಗೂಳಿಹಟ್ಟಿ ಶೇಖರ್ ಸರದಿ, ಇದಕ್ಕೆ ರೇಣುಕಾಚಾರ್ಯ ಸಾಥ್ ಕೊಟ್ಟಿದ್ದಾರೆ. ಬೈರತಿ ಸುರೇಶ್ ಕೇಸರಿ ಶಾಲು ಬೇಡ ಬೇಡ ಅಂದ್ರು ಒತ್ತಾಯ ಪೂರ್ವಕವಾಗಿ ಹಾಕಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಶಾಸಕರ ಆಟದಲ್ಲಿ ಕೇಸರಿ ಶಾಲು ನಲುಗಿದ್ದು ಮಾತ್ರ ಸತ್ಯ. ಕೇಸರಿ ಶಾಲು ಆಟಿದ ವಸ್ತುವಾಗಿದ್ದು ಮಾತ್ರ ವಿಪರ್ಯಾಸ

Be the first to comment

Leave a Reply

Your email address will not be published.


*