ಎಷ್ಟು ಬಾರಿ ಮನವಿ ಮಾಡಿದರೂ ಎಚ್ಚೆತ್ತುಕೊಳ್ಳದ ಪುರಸಭೆ ಆಡಳಿತ: ಕಟ್ಟಿಮನಿ

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ:

CHETAN KENDULI

ಪಟ್ಟಣದ ಸಂತೆ ಬಜಾರಿನಲ್ಲಿ ಇರುವಂತಹ ದೊಡ್ಡಗಾತ್ರದ ಬೀದಿ ದೀಪವು ಸೇರಿದಂತೆ ಪಟ್ಟಣದ ಕೆಲವು ವಿದ್ಯುತ್ ಕಂಬಗಳಲ್ಲಿ ಹಗಲೆನ್ನದೇ ರಾತ್ರಿಯೆನ್ನದೇ ಹೊತ್ತಿ ಉರಿಯುತ್ತಿರುವ ಬೀದಿದೀಪಗಳು. ರಾತ್ರಿ ಉರಿಯದ ವಿದ್ಯುತ್ ದೀಪಗಳು, ಹಗಲತ್ತಿನಲ್ಲಿ ಉರಿಯುವ ದೀಪದ ಕಂಬಗಳನ್ನು ಸಂತೆ ಬಜಾರಿನಲ್ಲಿಯೇ ನೋಡಬಹುದು. ಈ ಹಿಂದೆ ಹಲವು ಬಾರಿ ಸುದ್ದಿ ಮಾಡುವ ಮೂಲಕ ಪುರಸಭೆಯ ಗಮನಕ್ಕೆ ತಂದರೂ ಯಾವುದೇ ರೀತಿಯ

ಪ್ರಯೋಜನವಿಲ್ಲದಂತಾಗಿದೆ. ಸಂಬಂಧಪಟ್ಟ ಪುರಸಭೆಯ ಮುಖ್ಯಾಧಿಕಾರಿಗಳಾದ ಹನುಮಂತಮ್ಮ ನಾಯಕ ಇವರು ಎಲ್ಲೆಲ್ಲಿ ಹಗಲಲ್ಲಿಯೇ ದೀಪ ಉರಿಯುವುದು ಎಂಬುದರ ಮಾಹಿತಿ ಪಡೆದು ಸರಿಪಡಿಸುವ ಕಾರ್ಯ ಮಾಡುತ್ತಾರಾ ಎಂದು ಕಾದುನೋಡಬೇಕಾಗಿದೆ.

 

ಸಂಬಂಧಪಟ್ಟ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದು ಮತ್ತು ಎಷ್ಟು ಬಾರಿ ಮನವಿ ಮಾಡಿದರು ಪ್ರಯೋಜನವಿಲ್ಲ ದಂತಾಗಿದೆ. ವಿದ್ಯುತ್ ದೀಪವು ಹತ್ತಿದೆಯೋ ಇಲ್ಲವೋ ಎಂದು ಕಾಳಜಿವಹಿಸಿದ ಪುರಸಭೆಯ ಆಡಳಿತ ದಿವ್ಯಾ ನಿರ್ಲಕ್ಷ್ಯವೇ ಇದಕ್ಕೆ ಮೂಲ ಕಾರಣವಾಗಿದೆ.

-ಮುರಳಿಧರ ಕಟ್ಟಿಮನಿ, ಸ್ಥಳೀಯ ನಿವಾಸಿ, ಮಸ್ಕಿ,

Be the first to comment

Leave a Reply

Your email address will not be published.


*