ಜಿಲ್ಲಾ ಸುದ್ದಿಗಳು
ಹೊನ್ನಾವರ:
ತಾಲೂಕು ಒಕ್ಕಲಿಗರ ಸಂಘ ಹೊನ್ನಾವರ ಆಶ್ರಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ್ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಘಟಕದ ಸಹಭಾಗಿತ್ವದಲ್ಲಿ 31/10/2021 ರಂದು ಉಚಿತ ನೇತ್ರ ತಪಾಸಣಾ ಶಿಬಿರ ಒಕ್ಕಲಿಗರ ಸಮುದಾಯ ಭವನ ಕೆಳಗಿನೂರಿನಲ್ಲಿ ನಡೆಯಲಿದೆ.
ತಪಾಸಣೆ ಹಾಗೂ ಅಗತ್ಯ ಇದ್ದವರಿಗೆ ಚಿಕಿತ್ಸೆ ಸಂಪೂರ್ಣ ಉಚಿತವಾಗಿರಲಿದೆ. ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಶಿಬಿರ ನಡೆಯಲಿದೆ.
* ಶಿಬಿರದಲ್ಲಿ ತಜ್ಞ ವೈದ್ಯರಿಂದ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು.
* ಅಗತ್ಯವುಳ್ಳವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಹಾಗೂ ಕಣ್ಣಿನ ಇತರ ಚಿಕಿತ್ಸೆಗಳನ್ನು ನಡೆಸಲಾಗುವುದು.
* ಶಿಬಿರದಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಆಸ್ಪತ್ರೆಗೆ ತೆರಳಲು ಉಚಿತ ವಾಹನ ಸೌಲಭ್ಯವಿದೆ.
* ಶಿಬಿರದಲ್ಲಿ ಕನ್ನಡಕದ ಅಗತ್ಯ ಇರುವವರಿಗೆ ಮಾತ್ರ ಕನ್ನಡಕವನ್ನು ಅತೀ ರಿಯಾಯಿತಿ ದರದಲ್ಲಿ ನೀಡಲಾಗುವುದು.
* ಶಿಬಿರದಲ್ಲಿ ಭಾಗವಹಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7760957390 , 9164532424
Be the first to comment