ಜಿಲ್ಲಾ ಸುದ್ದಿಗಳು
ಸಿದ್ದಾಪುರ:
ಚಳಿಗಾಲದ ಅಧಿವೇಶನದ ಒಳಗಡೆ ಸರಕಾರ ನಮ್ಮ ಬೇಡಿಕೆ ಇಡೇರಿಸದ ಪಕ್ಷದಲ್ಲಿ ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಮದ್ಯ ನಿಷೇಧ ಕಾನೂನನ್ನು ಜಾರಿಗೆ ತರಬೇಕು, ಅತಿಕ್ರಮಣದಾರರ ಸಮಸ್ಯೆ, ಕುಮಟಾದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಆಗಬೇಕು, ಮಂಗೇಶ್ ಕೈಸರೆ ಅವರ ಅನುಮಾನಸ್ಪದ ಅಪಘಾತ ಸಾವು ಮತ್ತು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧ್ವನಿ ಎತ್ತಿದ ಸಾಮಾಜಿಕ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು, ರೈತರ ಹೋರಾಟ ಬೆಂಬಲಿಸಿ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಇನ್ನು ಅನೇಕ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಾವು ಈ ಚಳಿಗಾಲದ ಅಧಿವೇಶನದಲ್ಲಿ ಸಮಾಜವಾದಿ ಪಾರ್ಟಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯಿಂದ ಅಧಿವೇಶನ ನಡೆಯುವಂತಹ ಬೆಳಗಾವಿಯ ಸೂವರ್ಣಸೌಧದ ವರೆಗೆ ಸೈಕಲ್ ಯಾತ್ರೆ ಮಾಡಲಿದ್ದವೆ ಮತ್ತು ಸೂವರ್ಣ ಸೌಧದ ಎದುರು ಪ್ರತಿಭಟನೆ ನಡೆಸಲಿದ್ದೇವೆ. ಈ ಮೂಲಕ ಸರಕಾರದ ಕಣ್ಣು ತೆರೆಸುವ ಕಾರ್ಯವನ್ನು ನಾವು ಮಾಡಲಿದ್ದೇವೆ ಎಂದು ಸಮಾಜವಾದಿ ಪಾರ್ಟಿಯ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ನಾಗರಾಜ ನಾಯ್ಕ ತಿಳಿಸಿದ್ದಾರೆ.
ಅವರು ಇಂದು ಸಿದ್ದಾಪುರ ಪಟ್ಟಣದಲ್ಲಿ ಪತ್ರಿಕಾಘೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಇವತ್ತು ಮದ್ಯಪಾನದಿಂದ ಮಹಿಳೆಯರು ಅಮಾಯಕರು ಬಲಿಯಾಗುತ್ತಿದ್ದಾರೆ. ಮಧ್ಯಪಾನ ನಿಷೇಧ ಆಗಬೇಕೆಂದು ರಾಜ್ಯದಾದ್ಯಂತ ಮಹಿಳೆಯರು ಹೋರಾಟ ನಡೆಸಿದ್ದರು. ಆದರೂ ಸರ್ಕಾರಗಳು ಮಧ್ಯ ನಿಷೇದದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲಾ.
ನಿನ್ನೆ ಸಿದ್ದಾಪುರದ ಗ್ರಾಮದಲ್ಲಿ ಮದ್ಯವ್ಯಸನಿ ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ತಾಯಿಯನ್ನು, ತನ್ನ ತಂಗಿಯನ್ನು ಗುಂಡುಹಾರಿಸಿ ಕೊಂದಿರುವ ಹ್ರದಯ ವಿದ್ರಾಹಕ ಘಟನೆ ನಡೆದಿದೆ. ಈ ಘಟನೆಗೆ ಸರ್ಕಾರ ಮತ್ತು ಇವತ್ತಿನ ಆಡಳಿತ ವ್ಯವಸ್ಥೆ ಕಾರಣವಾಗಿದೆ. ಶಿರಸಿ-ಸಿದ್ದಾಪುರ ತಾಲೂಕುಗಳ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಯಾವುದೆ ಅಡೆ ತಡೆ ಇಲ್ಲದೆ ನಡೆಯುತ್ತಿದೆ. ಮದ್ಯ ಮಾರಾಟದಿಂದ ಸರ್ಕಾರವನ್ನು ನಡೆಸುವಂತ ದುಸ್ಥಿತಿ ಇವತ್ತು ಇದೆ. ಹೀಗಾಗಿ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗುತ್ತಿದೆ. ಟಾರ್ಗೆಟ್ ಗಳನ್ನು ರಿಚ್ ಆಗುವುದಕ್ಕಾಗಿ ಮದ್ಯದಂಗಡಿಗಳವರು ಮಧ್ಯವನ್ನು ಹಳ್ಳಿಹಳ್ಳಿಗಳಿಗೆ ಸಪ್ಲೈ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹಳ್ಳಿಗಳಲ್ಲಿ ಕೆಲವು ಕಡೆಗಳಲ್ಲಿ ಬೀಡ ಅಂಗಡಿಗಳಲ್ಲಿ, ಮನೆಗಳಲ್ಲಿ, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಆಗುತ್ತಿದೆ. ಇದರಲ್ಲಿ ಮದ್ಯ ಮಾರಾಟಗಾರರು ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ ಎಂದು ಆರೋಪಿಸಿದರ ಈ ಕಾರಣದಿಂದಾಗಿ ಶಿರಸಿ- ಸಿದ್ದಾಪುರ ಭಾಗದಲ್ಲಿ ಕಳ್ಳಬಟ್ಟಿ ಕೂಡ ವ್ಯಾಪಕವಾಗಿ ನಡಿತಾ ಇದೆ. ಅಕ್ರಮ ಮದ್ಯ ಮಾರಾಟ ದಿಂದಾಗಿ ಕಳ್ಳಬಟ್ಟಿ ಯಾವುದು ಅಧಿಕ್ರತ ಮಧ್ಯ ಯಾವುದು ಎನ್ನುವುದು ಅಧಿಕಾರಿಗಳು ಕಂಡುಹಿಡಿಯುವುದು ಕಷ್ಟ ಆಗುತ್ತಿದೆ. ಕೂಡಲೇ ಹಳ್ಳಿಗಳಲ್ಲಿ ಮಾಡುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು. ಮತ್ತು ಸರ್ಕಾರ ಕೂಡಲೇ ಕರ್ನಾಟಕ ರಾಜ್ಯದಲ್ಲಿ ಮದ್ಯ ನಿಷೇಧ ಕಾನೂನನ್ನು ಜಾರಿಗೆ ತರಬೇಕು ಎಂದು ಸಮಾಜವಾದಿ ಪಾರ್ಟಿ ಆಗ್ರಹಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಆಗಬೇಕು ಎಂದು ಹಲವು ವರ್ಷಗಳಿಂದ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸರಕಾರ ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲಾ. ಪ್ರತಿ ದಿನ ಈ ಕಾರಣದಿಂದ ಸಾವು ಸಂಭವಿಸುತ್ತಿದೆ. ಶೀಘ್ರವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸರಕಾರ ನಿರ್ಮಾಣ ಮಾಡಬೇಕೆಂದು ಸಮಾಜವಾದಿ ಪಾರ್ಟಿಯ ಆಗ್ರಹವಾಗಿದೆ ಎಂದರು.
ಇದಲ್ಲದೆ ಯಲ್ಲಾಪುರದ ಹಿಂದೂ ಸಂಘಟನೆಯ ಮುಖಂಡ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರಾದಂತಹ ಮಂಗೇಶ್ ಕೈಸರೆ ಅವರ ಅನುಮಾನಸ್ಪದ ಅಪಘಾತ ಸಾವು ಮತ್ತು ಈ ಪ್ರಕರಣಕ್ಕೆ ಸಂಬಂದ ಪಟ್ಟಂತೆ ದ್ವನಿ ಎತ್ತಿದ ಸಾಮಾಜಿಕ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ಧಾಖಲಿಸಿದ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಸಮಾಜವಾದಿ ಪಾರ್ಟಿ ಆಗ್ರಹಿಸಿತ್ತು. ಆದರೆ ಇಲ್ಲಿವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲಾ ಎಂದ ಅವರು
ಚಳಿಗಾಲದ ಅಧಿವೇಶನದ ಒಳಗಡೆ ಸರಕಾರ ತೀರ್ಮಾನ ಕೈಗೊಳ್ಳದ ಪಕ್ಷದಲ್ಲಿ ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಮದ್ಯ ನಿಷೇಧ ಕಾನೂನನ್ನು ಜಾರಿಗೆ ತರಬೇಕು, ಅತೀಕ್ರಮಣದಾರರ ಸಮಸ್ಯೆ, ಕುಮಟಾದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಆಗಬೇಕು, ಮಂಗೇಶ್ ಕೈಸರೆ ಅವರ ಅನುಮಾನಸ್ಪದ ಅಪಘಾತ ಸಾವು ಮತ್ತು ಈ ಪ್ರಕರಣಕ್ಕೆ ಸಂಬಂದ ಪಟ್ಟಂತೆ ದ್ವನಿ ಎತ್ತಿದ ಸಾಮಾಜಿಕ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ಧಾಖಲಿಸಿದ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು, ರೈತರ ಹೋರಾಟ ಬೆಂಬಲಿಸಿ ಇನ್ನು ಅನೇಕ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಾವು ಈ ಚಳಿಗಾಲದ ಅಧಿವೇಶನದಲ್ಲಿ ಸಮಾಜವಾದಿ ಪಾರ್ಟಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯಿಂದ ಅಧಿವೇಶನ ನಡೆಯುವಂತಹ ಬೆಳಗಾವಿಯ ಸುವರ್ಣಸೌಧದ ವರೆಗೆ ಸೈಕಲ್ ಯಾತ್ರೆ ಮಾಡಲಿದ್ದವೆ ಮತ್ತು ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಲಿದ್ದೇವೆ. ಈ ಮೂಲಕ ಸರಕಾರದ ಕಣ್ಣು ತೆರೆಸುವ ಕಾರ್ಯವನ್ನು ನಾವು ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಮಾಜವಾದಿ ಪಾರ್ಟಿಯ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಮತಾ ನಾಯ್ಕ, ಜಿಲ್ಲಾಧ್ಯಕ್ಷ ಕ್ರಷ್ಣ ಹೆಚ್ ಬಳೆಗಾರ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ವಾಸು ನಾಯ್ಕ, ಸಿದ್ದಾಪುರ ತಾಲೂಕಾ ಅಧ್ಯಕ್ಷರಾದ ಧರ್ಮಾ ನಾಯ್ಕ ಉಪಸ್ಥಿತರಿದ್ದರು.
Be the first to comment