ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಗ್ರಾಮದ ಅಪ್ರಾಪ್ತ ದಲಿತ ಸಮುದಾಯದ ಬಾಲಕಿಯನ್ನು ಅಪಹರಿಸಿ, ಅತ್ಯಚಾರ,ಬಾಲಕಿಯ ಮೇಲೆ ಹಲ್ಲೆಗೈಯ್ದು ಬಾಲಕಿಯ ಮೈ ಮೇಲಿದ್ದ ಚಿನ್ನಾಭರಣ ಕದ್ದ ಘಟನೆ ಮಂಗಳವಾರ ನಡೆದಿದ್ದು ,ಇದಕ್ಕೆ ಸಂಬಂಧಿಸಿದ ಆರೋಪಿಯನ್ನು ಬುಧುವಾರ ಪೂಲೀಸರು ಬಂಧಿಸಿ ಪೂಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತ ಆರೋಪಿ ಶಿವಯ್ಯ .ರುದ್ರಸ್ವಾಮಿಮಠ(೩೨) ಸಹ ತಂಗಡಗಿ ಗ್ರಾಮದವನು ,ಸಂತ್ರಸ್ತ ಯುವತಿ ಮಂಗಳವಾರ ಬೆಳಗಿನ ಜಾವ ಬಹಿರ್ದಸೆಗೆ ಹೋದಾಗ ಆರೋಪಿತ ವ್ಯಕ್ತಿ ಬಾಲಕಿಯು ಅರಚದಂತೆ ಬಾಯಿಗೆ ಬಟ್ಟೆ ಇಟ್ಟು ಅಪಹರಣ ಮಾಡಿದ್ದು ,ಬಾಲಕಿಯರು ಮನೆಗೆ ಬಾರದಿದ್ದಾಗ ಪಾಲಕರು ಊರೆಲ್ಲ ಹುಡುಕಿದ್ದಾರೆ ಮಗಳು ಪತ್ತೆಯಾಗಿಲ್ಲ, ಮಂಗಳವಾರ ಸಾಯಂಕಾಲ ಮಗಳು ಮನೆಗೆ ಬಂದ ನಂತರವಷ್ಟೇ ಬಾಲಕಿ ಹೇಳಿದ ಸತ್ಯವನ್ನು ಕೇಳಿ ಪಾಲಕು ಗಾಬರಿಯಾಗಿದ್ದಾರೆ, ಬೆಳಗ್ಗೆ ಯಿಂದ ಸಾಯಂಕಾಲ ವರಗೆ ಸಂತ್ರಸ್ತ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿದೆ ಬಾಲಕಿಯ ಮೈ ಮೇಲಿದ್ದ ಚಿನ್ನಾಭರಣ ಕದ್ದಿದ್ದಾನೆ ಆರೋಪಿತ ವ್ಯಕ್ತಿ, ಮತ್ತು ಬಾಲಕಿಯ ಮೇಲೆ ಹಲ್ಲೆ ಸಹ ನಡೆದಿದೆ ಈ ಕುರಿತು ಬಾಲಕಿ ಪಾಲಕರಿಗೆ ನಡೆದ ಎಲ್ಲಾ ವಿಷಯ ತಿಳಸಿದ್ಧಾಳೆ ಅಂದೆ ಪೂಲೀಸ್ ಠಾಣೆಗೆ ಪ್ರಕರಣ ದಾಖಲಿಸಲು ಬಾಲಕಿಯ ಪಾಲಕರು ಬಂದಿದ್ದಾರೆ ಪ್ರಕರಣ ಅಂದು ದಾಖಲಾಗಿರಲಿಲ್ಲ.
ಬುಧುವಾರ ಪ್ರಕರಣ ದಾಖಲಾಗಿದ್ದು,ಆರೋಪಿತ ವ್ಯಕ್ತಿಯನ್ನು ಪೂಲೀಸರು ಬಂಧಿಸಿದ್ದಾರೆ, ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆ ಮಾಡಲಾಗಿದೆ.
ಆರೋಪಿಗೆ ಗಲ್ಲು ಶಿಕ್ಷೆ ನೀಡಿ; ದಲಿತ ಮುಖಂಡರು! ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಯು ಆಕೆಯನ್ನು ಅಪಹರಸಿ ಹಲ್ಲೆ ಮಾಡಿ ಬಾಲಕಿಯ ಮೈ ಮೇಲಿದ್ದ ಆಭರಣಗಳನ್ನು ಕದ್ದಿದ್ದಾನೆ , ಆರೋಪಿಗೆ ಗಲ್ಲು ಶಿಕ್ಷೆ ಗೆ ಒಳಪಡಿಸಬೇಕು ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರವನ್ನು ನೀಡಬೇಕು ಎಂದು ದಲಿತಪರ ಮುಖಂಡರಾದ ಹರೀಶ್ ನಾಟಿಕಾರ್, ಡಿ.ಬಿ .ಮುದುರ ಆಗ್ರಹಸಿದ್ದಾರೆ,ಮತ್ತು ಬಂಧಿತ ಆರೋಪಿಯ ಜೊತೆ ಇನ್ನೂ ೪ ಜನ ಆರೋಪಿಗಳು ಇದ್ದಾರೆ,ಈ ಪ್ರಕರಣದಲ್ಲಿ ಯಾರೆಲ್ಲ ಶಾಮಿಲು ಇದ್ದಾರೆ ಅವರನ್ನು ಸಹ ಬಂಧಿಸಬೇಕು ಮತ್ತು ಸಂತ್ರಸ್ತ ಕುಟುಂಬದ ಜನರಿಗೆ ಜಾನುವಾರುಗಳಿಗೆ ಸಹ ರಕ್ಷಣೆ ನೀಡಬೇಕು ತನಿಖೆಯು ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಒತ್ತಾಯಿಸಿದರು ಈ ವೇಳೆಯಲ್ಲಿ ದಲಿತ ಮುಖಂಡರಾದ ಬಸವರಾಜ ಸಿದ್ಧಾಪೂರ,ಭಗವಂತ ಕಬಾಡೆ,ತಿಪ್ಪಣ್ಣ ಮಾದರ,ಮಲ್ಲು ತಳವಾರ,ದೇವರಾಜ ಹಂಗರಗಿ,ಬಲಭೀಮ ನಾಯಕಮಕ್ಕಳ, ಶಿವು ಶಿವಪುರ, ಗದ್ದೆಪ್ಪ ಹುಲ್ಲಳ್ಳಿ,ಸಿದ್ದರಾಮ,ಸಿದ್ದು ತಲ್ಲಳ್ಳಿ,ಪ್ರಕಾಶ ಸರೂರ ಮುಂತಾದವರು ಉಪಸ್ಥಿತರಿದ್ದರು.
Be the first to comment