ರಾಜ್ಯ ಸುದ್ದಿಗಳು
ಕಾರವಾರ
ಜಲಜೀವನ್ ಮಷಿನ್ ಏನಿದು??ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂಬ ಸದುದ್ದೇಶದಿಂದ ಜಾರಿಗೆ ತಂದಿರುವುದೇ ಜನಜೀವನ್ ಮಿಷನ್..!! ಇದರ ಉದ್ದೇಶ ಪ್ರತೀ ಪ್ರಜೆಗೂ ಶುದ್ದ ಕುಡಿಯುವ ನೀರಿನ ಪೂರೈಕೆಯಾಗಬೇಕು ಎನ್ನುವುದಾಗಿದೆ..!!ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ತಲಾ 37.5% ಅನುದಾನ ನೀಡುತ್ತಿದೆ. ಉಳಿದ ಶೇಕಡಾ 25 ರಷ್ಟು ಅನುದಾನದಲ್ಲಿ ಶೇಕಡಾ 15 ರಷ್ಟು ಅನುದಾನವನ್ನು ಗ್ರಾಮ ಪಂಚಾಯತ್ಗಳು 15 ನೇ ಹಣಕಾಸು ಆಯೋಗದ ಅನುದಾನದಡಿ ಪಾವತಿಸಬೇಕು. ಉಳಿದ ಶೇಕಡಾ 10 ರಷ್ಟು ಖರ್ಚಿನ ಬಾಬ್ತನ್ನು, ಜಲಜೀವನ್ ಮಿಷನ್ ಅನುಷ್ಠಾನಗೊಳಿಸುತ್ತಿರುವ ಗ್ರಾಮದ ಫಲಾನುಭವಿಗಳು, ಸಾರ್ವಜನಿಕರು ತಮ್ಮ ಕಿಸೆಯಿಂದ ತೆರಬೇಕಾಗುತ್ತದೆ ಇದೇ ಜಲಜೀವನ್ ಮಿಷನ್..
ಜಲಜೀವನ್ ಮಿಷನ್ ಯೋಗ್ಯವೋ?? ಅಯೋಗ್ಯವೋ??
* ಮನೆಯ ಮುಂದೆ ಹರಿದು ಬರುವ ಪ್ರತೀ ನೀರಿನ ಹನಿಗೂ ಲೆಕ್ಕ.
* ಕಾಲ ಕಾಲಕ್ಕೆ ಗ್ರಾಮ ಪಂಚಾಯತ್ ಗೆ ಹಣ ಸಂದಾಯ ಮಾಡಬೇಕು.
* ಭಾವನಾತ್ಮಕ ಸಂಬಂಧ ಹೊಂದಿರುವ ಹಳ್ಳಿಗಳಲ್ಲಿಯೂ ಸಹ, ನಗರದಲ್ಲಿ ಇರುವಂತಹ ವ್ವವಹಾರಿಕ ಮನಃಸ್ಥಿತಿ ನಿರ್ಮಾಣ.
* ಇಂತಿಷ್ಷು ದರ, ಇಂತಿಷ್ಷು ನೀರಿಗೆ ಎನ್ನುವ ಮಾನದಂಡ ಇನ್ನೂ ನಿಗದಿಯಾಗಿಲ್ಲ.
* ಪೆಟ್ರೋಲ್, ಡೀಸೆಲ್ ದರಗಳಂತೆ ದಿನಕ್ಕೊಂದು ದರ ನಿಗದಿಯಾಗಲೂಬಹುದು.
* ನೂರಾರು ತೆರಿಗೆಗಳಿಂದ ಬಳಲುತ್ತಿದ್ದವರಿಗೆ ಇದೂ ಒಂದು ತೆರಿಗೆಯ ರೂಪದಲ್ಲಿ ಪಾವತಿ ಮಾಡಬೇಕು.
ನಿಜವಾಗಿ ಸರ್ಕಾರ ಮಾಡಬೇಕಾಗಿರುವುದೇನು??ಹಳ್ಳಿಗಳಲ್ಲಿ ಈ ಹಿಂದೆ ಮದುವೆ, ಮುಂಜಿ, ನಾಮಕರಣ, ಮುಂತಾದ ಕಾರ್ಯಕ್ರಮಗಳಿಗೆ ನೀರು ಬೇಕೆಂದರೆ ನೆರೆ-ಹೊರೆಯ ಮನೆಗಳಿಂದ ತಂದು ಬಳಸುತ್ತಿದ್ದರು. ಜಲಜೀವನ್ ಮಿಷನ್ ಇಂದ ಹಳ್ಳಿಗಳಲ್ಲೂ, ನಗರ ಪ್ರದೇಶದ ಜನರಂತೆಯೇ ಭಾವನಾತ್ಮಕ ಸಂಬಂಧಗಳಿಗಿಂತ, ಹೆಚ್ಚು ವ್ಯವಹಾರಿಕ ಪರಿಸ್ಥಿತಿಗೆ ಹೊಂದಿಕೊಳ್ಳುವ ಮನಃಸ್ಥಿತಿ ಉಂಟಾಗುತ್ತದೆ. ಇಷ್ಟು ನೀರಿಗೇ ಇಷ್ಟೇ ದರ ಎನ್ನುವ ಮಾನದಂಡ ಕೂಡ ಇನ್ನೂ ನಿಗದಿಯಾಗಿಲ್ಲ. ಇದಲ್ಲದೇ ಭವಿಷ್ಯದಲ್ಲಿ ಪೆಟ್ರೋಲ್ ಡೀಸೆಲ್ ದರಗಳಂತೆ ಜನಸಾಮಾನ್ಯರಿಗೆ ದುಬಾರಿ ಆಗಲೂಬಹುದು. ಆಗುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತ್ರಿ ಸರ್ಕಾರಗಳಾಗಲೀ, ಗ್ರಾಮ ಪಂಚಾಯತ್ ಳಾಗಲೀ ಇಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಇದು ಏನೂ ಅನಿಸದೇ ಇರಬಹುದು ಆದರೇ ಹಳ್ಳಿ ಜನರಿಗೆ ಇದು ಒಂದು ಹೊರೆಯಾಗಿ ಪರಿಣಮಿಸುತ್ತದೆ. ಕುಡಿಯುವ ನೀರಿನಿಂದ ಹಿಡಿದು, ದನಕರುಗಳಿಗೆ ಅವುಗಳ ಸ್ವಚ್ಛತೆಗೆ, ಕೃಷಿ ಬೇಸಾಯ ಚಟುವಟಿಕೆಗಳಿಗೆ, ಮುಂತಾದ ಹಲವಾರು ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ತೊಡಗಿಕೊಳ್ಳುವ ಹಳ್ಳಿಗರಿಗೆ, ದಿನನಿತ್ಯ ದನ ಕರುಗಳನ್ನು , ಕೊಟ್ಟಿಗೆಗಳನ್ನು ತೊಳೆಯುವ ನೀರಿಗೂ ಸಾವಿರಾರು ರೂಪಾಯಿ ಕೊಡುವುದಾದರೆ,,, ಗ್ರಾಮೀಣ ಭಾಗದವರು ಬದುಕುವುದಾದರೂ ಹೇಗೆ??? ಆದಾಯದ ಮೂಲಗಳನ್ನು ಕಳದುಕೊಳ್ಳು ಅನಿವಾರ್ಯವಾರ್ಯತೆ ಉಂಟಾಗುವ ಸಾಧ್ಯತೆ ಬಹಳಷ್ಟಿದೆ.
ಇದರಲ್ಲಿಯೂ ಈಗಿನ ಗ್ರಾಮ ಪಂಚಾಯತ್ ಸದಸ್ಯರು, ಬೃಷ್ಟ ಅಧಿಕಾರಿಗಳು, ಈ ಗ್ರಾಮ ಪಂಚಾಯತ್ ಗಳು ಮಾರಕವಾಗುವ ಯೋಜನೆಗಳನ್ನೇ, ನಮ್ಮ ಬಹುದೊಡ್ಡ ಅಭಿವೃದ್ಧಿ ಯೋಜನೆಗಳು ಎನ್ನುವಂತೆ ಬಿಂಬಿಸುವುದು ನಮ್ಮ ದುರಾದೃಷ್ಟವೇ ಸರಿ. ಸರ್ಕಾರವಾಗಲೀ, ಜನಪ್ರತಿನಿಧಿಗಳಾಗಲೀ ಅವರ ಕಮೀಷನ್ ಬಂದರೆ ಆಯ್ತು,, ಜನಸಾಮಾನ್ಯರಿಗೆ ಎಷ್ಟೇ ತೊಂದರೆ ಆದರೂ ಇಂತಹ ಯೋಜನೆಗಳನ್ನು ಜಾರಿಗೆ ತಂದೇ ತರುತ್ತಾರೆ. ಹಾಗಾದರೆ ಜನರ ಗೋಳು ಕೇಳುವವರ್ಯಾರು?? ಇಂತಹ ಯೋಜನೆಗಳನ್ನು ಜಾರಿಗೆ ತರುವ ಪೂರ್ವಾಪರಗಳು, ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಚರ್ಚಿಸಬೇಕೆಂಬ ಕನಿಷ್ಠ ಮಟ್ಟದ ಅರಿವಾದರು ಬೇಕಲ್ಲವೇ?? ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರಿಗೆ ಮಾರಕವಾಗುವಂತಹ ಇಂತಹ ಯೋಜನೆ ತಂದು, ಅವನ್ನೇ ಬಹುದೊಡ್ಡ ಅಭಿವೃದ್ಧಿ ಯೋಜನೆ ಎಂದು ಬಹುಫರಾಕ್ ಕೂಗುತ್ತಿರುವುದು ಒಂದು ಎಡವಟ್ಟು ಯೋಜನೆ ಎನ್ನುವುದಕ್ಕೆ ದೊಡ್ಡ ಉದಾಹರಣೆಯಾಗಿದೆ.ಇಂತಹ ಯೋಜನೆಗಳು ಜನರನ್ನು ಸುಲಿಗೆ ಮಾಡಲು ಜಾರಿಗೆ ತಂದಿರುವ ಯೋಜನೆಗಳಾಗಿವೆ. ಇವು ಗ್ರಾಮೀಣ ಭಾಗದವರಿಗೆ ಮಾರಕವೇ ಹೊರತು ಲಾಭದಾಯಕವಲ್ಲದ ಯೋಜನೆ ಇದಾಗಿದೆ. ಕರೋನಾದಿಂದ ಸ್ವಲ್ಪವೇ ಎಚ್ಚೆತ್ತುಕೊಳ್ಳುತ್ತಿರುವ, ಜನರನ್ನು ಇನ್ನೂ ಸಂಕಷ್ಟಕ್ಕೆ ದೂಡುವಂತಹ ಯೋಜನೆಯಾಗಿದೆ.
ನಿಜವಾಗಲೂ ಆಗಬೇಕಾಗಿರುವುದು ..!! ಇವೇ…
ಜಲಮೂಲಗಳನ್ನೇ ಅವಲಂಭಿಸಿದ ಹಳ್ಳಿಗಳಿಗೆ ಮಾರಕವಾದರೂ, ಕುಡಿಯುವ ನೀರಿಗೂ ಕೆಲವೊಂದು ಕಡೆ ಗುಡ್ಡಗಾಡು ಪ್ರದೇಶ, ಬರಗಾಲ ಪೀಡಿತ ಪ್ರದೇಶಗಳಲ್ಲಿ ಇಂತಹ ಯೋಜನೆ ಅವಶ್ಯಕತೆ ಇರುತ್ತದೆ. ಆದರೆ ಹಳ್ಳಿ ಜನರ ಆದಾಯದ ಮೂಲಗಳಿಗೂ ಕನ್ನ ಹಾಕುವ ಯೋಜನೆಯೂ ಆಗಿದೆ. ಕುಡಿಯುವ ನೀರಿನ ವ್ಯವಸ್ಥೆ ಒಂದೇ ಆದರೆ, ಉಳಿದ ಕೃಷಿ, ಹೈನುಗಾರಿಕೆ , ದನಕರುಗಳ ಉಪಯೋಗಕ್ಕೆ ಮುಂತಾದ ಪರ್ಯಾಯ ವ್ಯವಸ್ಥೆ ಮಾಡಬೇಕು. ನಿಗದಿತ ಆದಾಯವನ್ನೇ ಹೊಂದಿರದ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿಗೂ ದರ ಕೊಡುವ ಸ್ಥಿತಿ ನಿರ್ಮಾಣವಾದರೆ ಇನ್ನೂ ಪರಿಸ್ಥಿತಿ ಹದಗೆಟ್ಟು, ಯಾವ ಪರಿಸ್ಥಿತಿ ಬೇಕಾದರೂ ತಲುಪುವ ಬಹಳಷ್ಟು ಸಾಧ್ಯತೆ ಇದೆ. ಇದರ ಬದಲು ಗ್ರಾಮೀಣ ಭಾಗದ ಜನರಿಗೆ ಉಚಿತ ಕುಡಿಯುವ ನೀರಿನ ಪೂರೈಕೆಯಾಗಬೇಕು. ಇಲ್ಲವಾದರೆ ಮುಂದೊಂದು ದಿನ ರಾಜಕೀಯ ಕಚ್ಚಾಟಕ್ಕೆ ಜಲಜೀವನ್ ಮಿಷನ್ ಯೋಜನೆಯ ನಲ್ಲಿಯ ನೀರು ಬಹುಮುಖ್ಯ ಕಾರಣವಾಗಬಹುದು.
Be the first to comment