ಜಿಲ್ಲಾ ಸುದ್ದಿಗಳು
ಲಿಂಗಸೂಗೂರು
ತಾಲೂಕಿನ ಹಟ್ಟಿ ಚಿನ್ನದ ಗಣಿ ಭಾರತದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ, ಎಲ್ಲಾ ಹಬ್ಬಂದಂತೆ ನವರಾತ್ರಿಯೂ ಸಹ ವಿಶೇಷವನ್ನು ಹೊಂದಿದ್ದು, ಈ ಹಬ್ಬವನ್ನು ಮಹಾಶಕ್ತಿಯ ಆರಾಧನೆಯ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಗೊಂಬೆಗಳ ಹಬ್ಬ ಎಂದೂ ಕರೆಯುತ್ತಾರೆ.
ನವರಾತ್ರಿಯಲ್ಲಿ ಮಾತೆ ದುರ್ಗೆಯ ಪೂಜೆ ಮಹತ್ವವಾಗಿದೆ. ಹಬ್ಬದಲ್ಲಿ ದೇವಿ ದುರ್ಗೆಯನ್ನು ಒಂಬತ್ತು ರೂಪಗಳಲ್ಲಿ ಪೂಜೆ ಮಾಡುವುದುಂಟು. ಶೈಲಪುತ್ರಿ, ಬ್ರಹ್ಮಚಾರಿಣಿ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಹೆಸರಿನಲ್ಲಿ ದುರ್ಗೆಯನ್ನು ಪೂಜೆ ಮಾಡುತ್ತಾರೆ.ದುರ್ಗಾಪೂಜೆಯನ್ನು 9 ದಿನಗಳ ಕಾಲ ಭಾರತದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು. 9 ದಿನಗಳಲ್ಲಿಯೂ ಪ್ರತಿಯೊಂದು ದಿನಕ್ಕೂ ಒಂದೊಂದು ವಿಶೇಷತೆ ಇದೆ.1ನೇ ದಿನವನ್ನು ಪಾಡ್ಯದ ದಿನವೆಂದು ಅಂದರೆ ಯೋಗನಿದ್ರಾ ದುರ್ಗಾ ಪೂಜೆಯಂದು ಪೂಜಿಸುತ್ತಾರೆ.2ನೇ ದಿನವನ್ನು ಬಿದಿಗೆ ದಿನ ಅಂದರೆ ದೇವಜಾತ ದುರ್ಗಾ ಪೂಜೆಯಂದು ಪೂಜಿಸುತ್ತಾರೆ.3ನೇ ದಿನವನ್ನು ತದಿಗೆ ದಿನ ಅಂದರೆ ಮಹಿಷಾಸುರ ಮರ್ಧಿನಿ ದುರ್ಗಾ ಪೂಜಾದಿನವೆಂದು ಪೂಜಿಸುತ್ತಾರೆ.
4ನೇ ದಿನವನ್ನು ಚತುರ್ದಶಿ ದಿನ ಅಂದರೆ ಶೈಲ ಜಾತಾ ದುರ್ಗಾ ಪೂಜಾದಿನವೆಂದು ಪೂಜಿಸುತ್ತಾರೆ.5ನೇ ದಿನವನ್ನು ಪಂಚಮಿ ದಿನ ಅಂದರೆ ದೂಮೃಹಾ ದುರ್ಗಾ ಪೂಜಾ ದಿನವೆಂದು ಪೂಜಿಸುತ್ತಾರೆ.6ನೇ ದಿನವನ್ನು ಶಷ್ಠಿ ದಿನ ಅಂದರೆ ಚಂಡ-ಮುಂಡಹಾ ದುರ್ಗಾ ಪೂಜಾ ದಿನವೆಂದು ಪೂಜಿಸುತ್ತಾರೆ.7ನೇ ದಿನವನ್ನು ಸಪ್ತಮಿ ಅಂದರೆ ರಕ್ತಬೀಜ ದುರ್ಗಾಪೂಜಾದಿನವೆಂದು ಪೂಜಿಸುತ್ತಾರೆ.8ನೇ ದಿನವನ್ನು ಅಷ್ಟಮಿ ದಿನ ಅಂದರೆ ದುರ್ಗಾಷ್ಠಮಿ ಎಂದು ಪೂಜಿಸುತ್ತಾರೆ.9ನೇ ದಿನದ ಕಡೆ ನವರಾತ್ರಿ ಮಹಾನವಮಿ ದಿನ ಅಂದರೆ ಶುಂಭಹಾ ದುರ್ಗಾ ಪೂಜೆಯೆಂದು ಪೂಜಿಸುತ್ತಾರೆ..ಹೀಗೆ ಶಕ್ತಿದೇವತೆಯ ಆರಾಧನೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ ಮುಖ್ಯವಾಗಿ ಮಹಿಳೆಯರು ಅತ್ಯಂತ ಶ್ರದ್ದಾ ಪೂರಕವಾಗಿ ನವರಾತ್ರಿಯನ್ನು ಆಚರಿಸುವರು.ಈ ಸಂಧರ್ಭದಲ್ಲಿ ಅಧಿಕಾರಿಗಳ ಮಹಿಳಾ ಸಂಘದ ಅಧ್ಯಕ್ಷರು ಶ್ರೀ ಮತಿ ಮಂಜುಳಾ ನೀರಮಾನವಿ,ಉಪಾಧ್ಯಕ್ಷರು ನಾಗರತ್ನ , ಕವಿತಾ, ಮೇಘನಾ, ಅಂಬಿಕಾ, ರಾಣಿ, ಪುಟಾಣಿ ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment