ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮೊದಲಿಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ತ ಧ್ವಜಾರೋಹಣವನ್ನು ಮಾಡಿ. ಮಾಜಿ ಶಾಸಕರಾದ ಪ್ರತಾಪ ಗೌಡ ಪಾಟೀಲ್ ಇವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ 71ನೇ ಜನ್ಮದಿನ ಪ್ರಯುಕ್ತ ಕೇಕ್ ಕಟ್ ಮಾಡಿ,71 ಪೋಸ್ಟಲ್ ಕಾರ್ಡ್ ಗಳಲ್ಲಿ ಶುಭಾಶಯಗಳನ್ನು ಕೋರಿ ಪ್ರದರ್ಶನ ಮಾಡಿ ಮತ್ತು ಹಲವಾರು ಕಾರ್ಯಕರ್ತರಿಗೆ ವ್ಯಾಕ್ಸಿನ್ ಅನ್ನು ಹಾಕಿಸುವುದರ ಮುಖಾಂತರ ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಬಿಜೆಪಿ ಪಕ್ಷದ ಕಾರ್ಯಕರ್ತರು ಸೇರಿ ವಿವಿಧ ಮುಖಂಡರು ನರೇಂದ್ರ ಮೋದಿ ಯವರ ಜನ್ಮದಿನ ಆಚರಣೆ ಮಾಡುತ್ತಾ ದೇವರು ಅವರಿಗೆ ಆಯೂರ ಆರೋಗ್ಯ, ಆಯುಷ್ಯ, ನೀಡಲೆಂದು ಆರೈಸಿದರು.
ಇದೇ ಸಂದರ್ಭದಲ್ಲಿಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು, ಡಾ.ಶಿವಶರಣಪ್ಪ ಇತ್ಲಿ, ಅಂದಾನಪ್ಪ ಗುಂಡಳ್ಳಿ ಮಸ್ಕಿ, ಶಿವಪುತ್ರಪ್ಪ ಹರಳಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷರು ಮಸ್ಕಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಾಣೇಶ್ ದೇಶಪಾಂಡೆ, ಶೇಖರ ಗೌಡ ಪಾಟೀಲ್ ಕಾಟಿಗಲ್, ಮೌನೇಶ್ ಮುರಾರಿ ಮಸ್ಕಿ, ಪ್ರಮೀಳಾ ಮಸ್ಕಿ, ದುರುಗಮ್ಮ ಮಸ್ಕಿ, ಪಂಪನ ಗೌಡ ಪಾಟೀಲ್, ಬಿಜೆಪಿ ಪಕ್ಷದ ಎಲ್ಲಾ ಪದಾಧಿಕಾರಿಗಳು ಸೇರಿದಂತೆ ಮುಖಂಡರುಗಳು ಉಪಸ್ಥಿತರಿದ್ದರು.
Be the first to comment