ಸೋಮನಾಥ್ ನಗರದ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ : ಕೆ.ಡಿ.ಎಸ್.ಎಸ್ ಆಗ್ರಹ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಸ್ಕಿ

ಪುರಸಭೆ ವ್ಯಾಪ್ತಿಗೆ ಒಳಪಡುವ ಸೋಮನಾಥ್ ನಗರದಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮುಸ್ಲಿಂ ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರು ಸುಮಾರು 400ರಿಂದ 500 ನಿರ್ಗತಿಕ ಕುಟುಂಬಗಳು ಟಿಬಿಪಿ ಸರ್ಕಾರಿ ಸರ್ವೆ ನಂಬರ್ 223 224 ರಲ್ಲಿ ಸುಮಾರು 25 ರಿಂದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಸದರಿ ಭೂಮಿಯು ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಹಕ್ಕು ಪತ್ರ ವಿತರಿಸಬೇಕು. ಯಾಕೆಂದರೆ ಮಸ್ಕಿಯ ನೀರಾವರಿ ಇಲಾಖೆ ವ್ಯಾಪ್ತಿಯ ಸುಮಾರು ನೂರಾರು ಎಕರೆಗಳಷ್ಟು ನಿರುಪಯೋಗಿ ಭೂಮಿಯಿದ್ದು, ಸದ್ಯ ಮಸ್ಕಿಯ ಸೋಮನಾಥ ನಗರವನ್ನು ವಾರ್ಡ್ ನಂಬರ್ 2 ಮತ್ತು 12 ಎಂದು ವಿಂಗಡಿಸಿದ್ದಾರೆ. ಇದರಲ್ಲಿ ಒಟ್ಟು ಸಾವಿರ ದಿಂದ ಸಾವಿರದ ಎರಡು ನೂರು ಮತದಾರರಿದ್ದಾರೆ. ಆದರೆ ಇವರಿಗೆ ಇಲ್ಲಿಯವರೆಗೂ ತಮ್ಮ ಮನೆ ಹಕ್ಕು ಅವರಿಗೆ ರದ್ದಾಗಿದೆ ಆದರೆ ಪ್ರತಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ನಮ್ಮನ್ನು ಗೆಲ್ಲಿಸಿ ಹಕ್ಕುಪತ್ರ ನೀಡುತ್ತೇವೆ ಎಂದು ಸುಳ್ಳು ಭರವಸೆಯನ್ನು ನೀಡುವ ಚುನಾಯಿತ ಜನಪ್ರತಿನಿಧಿಗಳ ಭರವಸೆಯನ್ನು ನಂಬಿದ ಈ ಜನರಿಗೆ ಇಲ್ಲಿಯವರೆಗೂ ಹಕ್ಕುಪತ್ರ ನೀಡಲಾಗಿಲ್ಲ ಆದರೆ ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಅಂದರೆ ಕನ್ನಡ ಶಾಲೆ , ಉರ್ದು ಶಾಲೆ, ಅಂಗನವಾಡಿ ಕೇಂದ್ರ, ಕುಡಿಯುವ ನೀರು, ವಿದ್ಯುತ್, ಸಿಸಿ ರಸ್ತೆ, ಚರಂಡಿ ನಿರ್ಮಾಣ ಪುರಸಭೆ ಗಿಂತ ಮೊದಲು ಗ್ರಾಮ ಪಂಚಾಯತ ವ್ಯವಸ್ಥೆ ಇದ್ದಾಗ ಇಲ್ಲಿನ ನಿವಾಸಿಗಳಿಗೆ ಸರ್ಕಾರದಿಂದ ಬರುವ ವಸತಿ ಸೌಲಭ್ಯ (ಮನೆ ಗಳನ್ನು) ವನ್ನೂ ನೀಡಿದೆ. ಆದರೆ ಈಗ ಪುರಸಭೆ ಯಾದ ನಂತರ ಇಲ್ಲಿನ ನಿವಾಸಿಗಳಿಗೆ ಮನೆಗಳನ್ನು ನೀಡುತ್ತಿಲ್ಲ. ಯಾಕೆಂದರೆ ಸರಕಾರ ನೀಡುವ ಸೌಲಭ್ಯಗಳಿಗೆ ಆರ್ಥಿಕವಾಗಿ ಹಿಂದುಳಿದವರು, ನಿವೇಶ ರಹಿತರು, ವಸತಿರಹಿತರಿಗಾಗಿ ನೀಡುವ ಸೌಲಭ್ಯಗಳಿಂದ ಈಗ ಈ ನಗರದ ಜನತೆ ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ಒಂದು ಕಡೆ ಸರ್ಕಾರ ನಿವೇಶನ ರೈತ ವಸತಿರಹಿತ ನಿರ್ಗತಿಕರಿಗೆ ಅಕ್ರಮ-ಸಕ್ರಮ ಯೋಜನೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು ಕೂಡ ಅರ್ಜಿಯನ್ನು ಸ್ವೀಕರಿಸುತ್ತಿಲ್ಲ. ಅಂದರೆ ಇಲ್ಲಿನ ನಿವಾಸಿಗಳ ಸಮಸ್ಯೆಗೆ ಪರಿಹಾರವೇನು? ತಾವುಗಳು ತಕ್ಷಣ ಇದರ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ತಕ್ಷಣಕ್ಕೆ ಈಗಿನ ಬಡವರಿಗೆ ಕನಿಷ್ಠ ಸರ್ಕಾರ ನೀಡುವ ವಸತಿ ಯೋಜನೆಯಲ್ಲಿ ಮನೆಗಳನ್ನು ಮಂಜೂರು ಮಾಡುವುದರ ಜೊತೆಗೆ ಮನೆ ಕಟ್ಟಿಕೊಳ್ಳಲು ಪುರಸಭೆಯಲ್ಲಿ ನಿರ್ಣಯ ಕೈಗೊಂಡು ಅನುಕೂಲ ಕಲ್ಪಿಸುವ ಜೊತೆಗೆ ಸೋಮನಾಥ ನಗರ ಸಮಸ್ಯೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಸಮಸ್ತ ಜನರ ಪರವಾಗಿ ಪ್ರೊಫೆಸರ್.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂರಕ್ಷ ಸಮಿತಿಯು ಶಾಸಕರ ಆಪ್ತ ಸಹಾಯಕರಾದಂತಹ ಶರಣೆಗೌಡ ಹಂದ್ರಾಳ ಇವರಿಗೆ ಮತ್ತು ತಾಲೂಕ ದಂಡಾಧಿಕಾರಿಗಳಾದಂತಹ ಕವಿತಾ . ಆರ್ ಇವರಿಗೆ ಮನವಿ ಪತ್ರವನ್ನು ನೀಡಿದರು.

CHETAN KENDULI

ಇದೇ ಸಂದರ್ಭದಲ್ಲಿಹನುಮಂತಪ್ಪ ವೆಂಕಟಾಪುರ ಜಿಲ್ಲಾ ಸಂಘಟನಾ ಸಂಚಾಲಕರು ದಲಿತ ಸಂರಕ್ಷ ಸಮಿತಿ ಮಸ್ಕಿ, ಮಲ್ಲಯ್ಯ ಬಳ್ಳ ಗೌರವಾಧ್ಯಕ್ಷರು ಎಮ್ ಆರ್ ಎಚ್ ಎಸ್ ಮಸ್ಕಿ, ಸುರೇಶ್ ಅಂತರಗಂಗಿ ಜಿಲ್ಲಾ ಕಾರ್ಯದರ್ಶಿ ಎಮ್ ಆರ್ ಎಚ್ ಎಸ್ ಮಸ್ಕಿ, ಜಯಪ್ಪ ಮೆದಿಕಿನಾಳ ದಲಿತ ಸಂರಕ್ಷ ಸಮಿತಿ ಮಸ್ಕಿ,ಮೌನೇಶ್ ಸುಲ್ತಾನಪುರ ತಾಲೂಕ ಸಂಚಾಲಕರು ಮಸ್ಕಿ, ಶೇಖರಪ್ಪ ಅಮೀನಗಡ ಸಂಚಾಲಕರು ಮಸ್ಕಿ, ಸಂಪತ್ ನಂಜಲದಿನ್ನಿ ಸಂಚಾಲಕರು ಮಸ್ಕಿ, ನಾಗರಾಜ ಕುಣಿಕೆಲ್ಲೂರ್ ಸಂಚಾಲಕರು ಮಸ್ಕಿ, ದಾನಪ್ಪ ಮೆದಿಕಿನಾಳ ತಾಲೂಕ ಖಜಾಂಚಿ ಮಸ್ಕಿ, ಮರಿಸ್ವಾಮಿ ಪಾಮನಕಲ್ಲೂರು, ಹನುಮಂತ ಮೆದಿಕಿನಾಳ ಎಮ್ ಆರ್ ಎಚ್ ಎಸ್ ಮಸ್ಕಿ, ಹನುಮಂತ ಹಂಪನಾಳ,ಸೋಮನಾಥ ನಗರ ನಿವಾಸಿಗಳಾದ ತಿಮ್ಮಣ್ಣ ನಾಗರಬೆಂಚಿ, ಹನುಮಂತ ಬೈಲಗುಡ್ಡ, ಅಮರೇಶ್ ಏಮ್, ಹನುಮಂತ ಮೆದಿಕಿನಾಳ, ರಮೇಶ್ ಗುಡಸಲಿ, ಅಲ್ತಾಫ್ ಮೇಸ್ತ್ರಿ, ಮೌಲಾಸಾಬ್, ತಿಮ್ಮಣ್ಣ ನಾಗರಬೆಂಚಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*