ಜಿಲ್ಲಾ ಸುದ್ದಿಗಳು
ಉಡುಪಿ:
ಕೋವಿಡ್ ಲಸಿಕೆ ನೀಡುವಿಕೆಯಲ್ಲಿ ಶತ ಪ್ರತಿಶತ ಗುರಿಯನ್ನು ಮುಟ್ಟಲು ಶ್ರಮಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ಶತಾಯುಷಿಯೊಬ್ಬರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ.
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ 101 ವರ್ಷದ ರತಿ ಪೂಜಾರ್ತಿ ಎಂಬವರೇ ಈ ಧೈರ್ಯಶಾಲಿ ಅಜ್ಜಿ. ಮನೆ ಮನೆ ಭೇಟಿ ನೀಡಿ ಲಸಿಕೆ ನೀಡುವ ಅಭಿಯಾನದ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತೆಯರು ಇವರ ಮನೆಗೂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಜ್ಜಿ ಧೈರ್ಯವಾಗಿ ಕೋವಿಡ್ ಲಸಿಕೆ ಪಡೆದು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಕೊರೊನಾ ವಾರಿಯರ್ಸ್ ಗಳಾಗಿರುವ ಕುಮುದಾವತಿ ಮತ್ತು ಅನಿತಾ ಅವರು ಈ ಶತಾಯುಷಿ ಅಜ್ಜಿಗೆ ವ್ಯಾಕ್ಸಿನ್ ನೀಡಿದ್ರು. ಅಜ್ಜಿಯ ಈ ಧೈರ್ಯವನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಶ್ಲಾಘಿಸಿದ್ದು ಈ ಕುರಿತಾಗಿ ಅವರು ಟ್ವೀಟ್ ಮಾಡಿ ಅಜ್ಜಿಗೆ ಸೆಲ್ಯೂಟ್ ಹೇಳಿದರು.
Be the first to comment