ಬೈಂದೂರಿನ ಶಿರೂರಿನಲ್ಲಿ ಟ್ಯಾಂಕರ್‌ಗಳಿಂದ ಡೀಸೆಲ್ ಕದಿಯುತ್ತಿದ್ದ ಐವರು ಖದೀಮರ ಬಂಧನ..!

ವರದಿ: ಇಬ್ರಾಹಿಂ ಕೋಟ, ಕುಂದಾಪುರ

ಜಿಲ್ಲಾ ಸುದ್ದಿಗಳು 

ಕುಂದಾಪುರ:

CHETAN KENDULI

ಬೈಂದೂರು ತಾಲೂಕಿನ ಶಿರೂರು ಸಂಕದಗುಂಡಿ ಎಂಬಲ್ಲಿ ಡಿ.10ರಂದು ಟ್ಯಾಂಕರ್‌ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿಯ ಮಾರ್ದಾಳ ನಿವಾಸಿ ಕಿರಣ್(32), ಪುತ್ತೂರಿನ ಮಹಮ್ಮದ್ ಮುಸ್ತಾಫ್(34), ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯವಾರಾದ ಅಶೋಕ್(30), ರೂಪೇಶ್ ಪೂಜಾರಿ(27) ಹಾಗೂ ಶಿರೂರು ಅಳ್ವೆಗದ್ದೆಯ ಮೋಹನ ಪೂಜಾರಿ(42) ಬಂಧಿತ ಆರೋಪಿಗಳಾಗಿದ್ದಾರೆ.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ತಂಡದ ಕಾರ್ಯಾಚರಣೆಯಲ್ಲಿ ಡೀಸೆಲ್ ಸಾಗಾಟದ ಟ್ಯಾಂಕರ್‌ನಿಂದ ಡಿಸೇಲ್ ಕಳವು ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ‌ ಆರೋಪಿಗಳನ್ನು ಬಂಧಿಸಿದೆ.

ಆರೋಪಿಗಳು ಪ್ರತಿ ಲಾರಿಯ ಡಿಸೇಲ್ ಟ್ಯಾಂಕಿನಿಂದ 15 ರಿಂದ 20 ಲೀಟರ್ ಡಿಸೇಲ್ ಕಳವು ಮಾಡಿ ಶಿರೂರಿನ ಮೋಹನ ಪೂಜಾರಿಯವರಿಗೆ ನೀಡುತ್ತಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

ನಾಲ್ಕು ಡೀಸೆಲ್ ಸಾಗಾಟದ ಟ್ಯಾಂಕರ್‌ನಿಂದ ಡಿಸೇಲ್ ಕಳವು ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ತಂಡ ಶಿರೂರು ಮೇಲ್ಪೆಟೆಯಿಂದ ಸಮೀಪದದಲ್ಲಿರುವ ಸಂಕದಗುಂಡಿ ಎಂಬಲ್ಲಿಗೆ ತೆರಳಿ ಮರೆಯಲ್ಲಿ‌ ನಿಂತು ಚಲನವಲನ ಗಮನಿಸಿದ್ದು ಈ ವೇಳೆ ರಾಷ್ಟ್ರೀಯ ಹೆದ್ದಾರಿ-66 ರ ಪಶ್ಚಿಮಕ್ಕೆ ಇರುವ ಖಾಲಿ ಜಾಗದಲ್ಲಿ ಇಂಧನ ಸಾಗಿಸುವ 4 ಟ್ಯಾಂಕರುಗಳ ಬಳಿಯಿದ್ದ ಆರೋಪಿಗಳು ಟ್ಯಾಂಕರ್ ಕೆಳಗೆ ಇರುವ ವಾಹನದ ಇಂಧನ ಟ್ಯಾಂಕಿನಿಂದ ಪೈಪ್ ಬಳಸಿ ಡೀಸೆಲ್ ಕಳವು ಮಾಡುತ್ತಿರುವುದು ಖಚಿತಪಡಿಸಿಕೊಂಡು ಆ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಸುತ್ತುವರಿದು ಬಂಧಿಸಿದ್ದಾರೆ.

ಆರೋಪಿಗಳಿಂದ ಒಟ್ಟು 4 ಕ್ಯಾನ್ ಗಳಲ್ಲಿನ 6500ರೂ. ಮೌಲ್ಯದ ಸುಮಾರು 73 ಲೀಟರ್ ಡೀಸೆಲ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*