ಸ್ನೇಹ-ಸೌಹರ್ದ-ಸಾಮರಸ್ಯ ಬೆಸೆಯುವ ಮುಸಲ್ಮಾನರ ಪವಿತ್ರ ರಂಜಾನ್ಈದ್ಗಾ ಮೈಧಾನದಲ್ಲಿ ಸಾಮೂಹಿಕ ಪ್ರಾರ್ಥನೆ | ಮುಸ್ಲಿಂ ಮಹಿಳೆಯರ ಭಾಗಿ.

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಇಡೀ ವಿಶ್ವದಾದ್ಯಂತ ಸ್ನೇಹ, ಸೌಹರ್ದ ಮತ್ತು ಸಾಮರಸ್ಯವನ್ನು ಬೆಸೆಯುವ ಪವಿತ್ರ ರಂಜಾನ್ ಹಬ್ಬದ ಆಚರಣೆಯನ್ನು ಎಲ್ಲರೂ ಒಗ್ಗೂಡಿ ಆಚರಿಸಲಾಗುತ್ತಿದೆ ಎಂದು ಜಾಮೀಯ ಮಸೀದಿಯ ಅಧ್ಯಕ್ಷ ಅಬ್ದುಲ್ ಖುದ್ದೂಸ್‌ಪಾಷ ತಿಳಿಸಿದರು.ದೇವನಹಳ್ಳಿ ತಾಲೂಕಿನ ಬೊಮ್ಮವಾರ ರಸ್ತೆಯಲ್ಲಿರುವ ಈದ್ಗಾ ಮೈಧಾನದಲ್ಲಿ ರಂಜಾನ್ ಹಬ್ಬ ಈದ್-ಉಲ್-ಫಿತ್ರ್ ಪ್ರಯುಕ್ತ ಸೋಮವಾರ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಇಸ್ಲಾಂ ಧರ್ಮದ ನಾಲ್ಕನೇ ಕಡ್ಡಾಯ ಕರ್ಮ ರಂಜಾನ್ ತಿಂಗಳ ಸಂಪೂರ್ಣ ವ್ರತಾಚರಣೆಯಾಗಿದೆ. ಇದರ ಗೌರವಾರ್ಥವಾಗಿ ಪ್ರತಿ ವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯಗೊಳಿಸಲಾಗಿದೆ. ಕೊನೆಯ ಅಂತಿಮ ರಂಜಾನ್ ತಿಂಗಳಲ್ಲಿ ಪವಿತ್ರ ರಾತ್ರಿಯ ಹುಡುಕಾಟದಲ್ಲಿ ೧೦ ದಿನಗಳು ರಾತ್ರಿವಿಡೀ ಅಲ್ಲಾಹುವಿನ ಪ್ರಾರ್ಥನೆ ಮಾಡಲಾಯಿತು.

CHETAN KENDULI


ಈ ತಿಂಗಳ ಅಮಾವಸ್ಯೆ ನಂತರದ ಚಂದ್ರನ ದರ್ಶನ ಪಡೆದು ಮಸೀದಿಗಳಲ್ಲಿ ಬೆಳಗಿನ ಪ್ರಾರ್ಥನೆ ಸಲ್ಲಿಸಿ, ಸಾಮೂಹಿಕವಾಗಿ ಈದ್ಗಾ ಮೈದಾನಕ್ಕೆ ಎಲ್ಲಾ ಮುಸಲ್ಮಾನರು ತೆರಳಿ ಹಬ್ಬದ ವಿಶೇಷ ನಮಾಜ್ (ಪ್ರಾರ್ಥನೆ)ಯನ್ನು ಸಲ್ಲಿಸಲಾಗಿದೆ. ಸರಕಾರವೂ ಸಹ ರಜೆಯನ್ನು ಘೋಷಿಸಿದೆ. ಅದರಂತೆ ಹಬ್ಬವನ್ನು ಆಚರಿಸಲಾಗಿದೆ. ಎಲ್ಲಾ ಸಮುದಾಯದ ಸ್ನೇಹಿತರೊಂದಿಗೆ ಜೊತೆಗೂಡಿ ಸಹೋದರಂತೆ ಒಂದಾಗಿ ಹಬ್ಬವನ್ನು ಆಚರಣೆ ಮಾಡುತ್ತಿರುವುದು ಸಂತೋಷವನ್ನು ತಂದುಕೊಟ್ಟಿದೆ. ನಾವೆಲ್ಲರೂ ಭಾರತೀಯರು, ಭಾರತ ಮಣ್ಣಿನಲ್ಲಿ ಹುಟ್ಟಿದ್ದೇವೆ. ಇಲ್ಲಿ ಯಾವುದೇ ಜಾತಿ-ಭೇದವಿಲ್ಲದೆ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದೇವೆ ಎಂದು ಹೇಳಿದರು.ಬೆಂಗಳೂರು ವಿಲ್ಸನ್‌ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ದಿಲ್‌ಷಾದ್‌ಬಿಬಿ ಮಾತನಾಡಿ, ದೇವನಹಳ್ಳಿ ಹುಟ್ಟಿ ಬೆಳೆದು, ಸಾಕಷ್ಟು ಕಷ್ಟ-ನೋವುಗಳನ್ನು ಸಹಿಸಿಕೊಂಡು ಎಲ್ಲರ ಸಹಕಾರದೊಂದಿಗೆ ಉನ್ನತ ಹುದ್ದೆಯಲ್ಲಿದ್ದೇನೆ. ರಂಜಾನ್ ಹಬ್ಬವನ್ನು ವಿಜೃಭಣೆಯಿಂದ ದೇವನಹಳ್ಳಿಯಲ್ಲಿ ಆಚರಿಸಲಾಗಿದೆ.


ಇತ್ತಿಚೆಗಿನ ದಿನಗಳಲ್ಲಿ ಮಹಿಳೆಯರು ಬಹಳ ಜಾಗೃತರಿಂದ ಇರಬೇಕು. ಯೂಟ್ಯೂಬ್, ವಾಟ್ಸ್‌ಆಪ್, ಟ್ವಿಟ್ಟರ್‌ಗಳಲ್ಲಿ ಬರುವ ಸಂದೇಶಗಳನ್ನು ನೋಡಿ, ಟಿಕ್‌ಟಾಕ್, ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ, ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ಸೂಚನೆ ನೀಡಿದರು.ಚಿಕ್ಕಬಳ್ಳಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರೋ.ಡಾ.ಶಫಿಅಹಮದ್ ಮಾತನಾಡಿ, ಸರಳ ಮತ್ತು ಸಡಗರದಿಂದ ಹಬ್ಬವನ್ನು ಆಚರಿಸಲಾಗುತ್ತಿದ್ದು, ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಂಡು, ಹಿಂದು-ಮುಸ್ಲಿಂ ಎಲ್ಲರೂ ಕೂಡ ಅನ್ಯೂನ್ಯತೆಯಿಂದ ಬಾಳಬೇಕೆಂಬ ಉದ್ದೇಶದಿಂದ ಹಬ್ಬದ ಕೊನೆಯಲ್ಲಿ ಕಾರ್‍ಯಕ್ರಮವನ್ನು ಮಾಡಲಾಗುತ್ತಿದೆ ಎಂದರು.ಈದ್ಗಾ ಮೈದಾನಕ್ಕೆ ಆಗಮಿಸಿದ್ದ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ಎಸ್‌ಐ ಡಾ.ಟಿ.ರಾಜಣ್ಣ, ಎಎಸ್‌ಐ ವೆಂಕಟೇಶ್, ವಕೀಲ ರಾಮಚಂದ್ರಪ್ಪ, ಸರಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಮುಬೀನಾಬೀ ಅವರನ್ನು ಜಾಮೀಯ ಮಸೀದಿ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಪುರಸಭಾ ಮಾಜಿ ಸದಸ್ಯ ಸದ್ರುಹುಸೇನ್, ಜಾಮೀಯ ಮಸೀದಿ ಇಮಾಮ್‌ಗಳಾದ ಅಬ್ದುಲ್‌ಜಬ್ಬಾರ್, ನಾಸೀರ್, ಕಾರ್ಯದರ್ಶಿ ಎ.ಎಸ್.ಇಬ್ರಾಹಿಂ, ಸದಸ್ಯರಾದ ಹೈದರ್, ಷಂಶೀರ್(ತನು), ಮುಖಂಡರಾದ ಜಾವೀದ್, ವಾಜೀದ್, ಪಾಚಲ್‌ಸಾಬ್, ಬಿದರಹಳ್ಳಿ ಮೊಹಮ್ಮದ್ ಅಲಿ, ವಿಜಯಪುರ ಅಲಿ, ಅಕ್ಬರ್, ಶಬ್ಬೀರ್, ಅಝರ್, ಮೌಲ, ಸಿ.ಎಂ.ಕುಮಾರ್, ಅರಣ್ಯ ಇಲಾಖೆ ಸಿಬ್ಬಂದಿ ವೀರಭದ್ರಯ್ಯ, ಪೊಲೀಸ್ ಇಲಾಖೆ ಸಿಬ್ಬಂದಿ, ಮುಸ್ಲಿಂ ಸಮುದಾಯದ ಮುಖಂಡರು, ಮಹಿಳೆಯರು, ಮಕ್ಕಳು ಇದ್ದರು. ದೇವನಹಳ್ಳಿ ತಾಲೂಕಿನ ಬೊಮ್ಮವಾರ ರಸ್ತೆಯಲ್ಲಿರುವ ಈದ್ಗಾ ಮೈಧಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಜಾಮೀಯ ಮಸೀದಿಯ ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ದೇವನಹಳ್ಳಿ ತಾಲೂಕಿನ ಬೊಮ್ಮವಾರ ರಸ್ತೆಯಲ್ಲಿರುವ ಈದ್ಗಾ ಮೈಧಾನದಲ್ಲಿ ರಂಜಾನ್ ಹಬ್ಬದಪ್ರಯುಕ್ತಗಣ್ಯರನ್ನುಅಭಿನಂದಿಸಲಾಯಿತು.ದೇವನಹಳ್ಳಿ ತಾಲೂಕಿನ ಬೊಮ್ಮವಾರ ರಸ್ತೆಯಲ್ಲಿರುವ ಈದ್ಗಾ ಮೈಧಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಮಹಿಳೆಯರು ಸಾಮೂಹಿಕ ಪ್ರಾರ್ಥನೆಗೆ ಪಾಲ್ಗೋಂಡಿರುವುದು.

Be the first to comment

Leave a Reply

Your email address will not be published.


*