ಜಿಲ್ಲಾ ಸುದ್ದಿಗಳು
ಮಸ್ಕಿ
ಮೆದಿಕಿನಾಳ ವಲಯ ಮಟ್ಟದ ಪೋಷಣಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಮೆದಿಕಿನಾಳ ಪ್ರೌಢಶಾಲಾ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೆದಿಕಿನಾಳ ವೃತ್ತದ ಮೇಲ್ವಿಚಾರಕಿ ಶ್ರೀಮತಿ ಡಿ.ಆರ್ ಲಲಿತಾ ರವರು ಪೋಷಣೆ ಮಾಸಾಚರಣೆ ಒಂದು ತಿಂಗಳಿಗೆಮಾತ್ರಸೀಮಿತವಾಗಿರಬಾರದು.ಪ್ರತಿಯೊಬ್ಬರು ಸ್ವಚ್ಛತೆ ಕಡೆ ಗಮನಹರಿಸಿದರೆ ರೋಗದಿಂದ ಮುಕ್ತಿ ಪಡೆಯಬಹುದು.
ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಸೇವನೆ ಅತ್ಯಗತ್ಯ ಮತ್ತು ಗ್ರಾಮಗಳಲ್ಲಿ ಪ್ರತಿಯೊಬ್ಬರು ಶೌಚಾಲಯ ಬಳಕೆ ಮಾಡುವಂತೆ ತಾಯಂದಿರಿಗೆ ಸಲಹೆ ನೀಡಿದರು.ಸೀಮಂತ ಕಾರ್ಯಕ್ರಮ ಚೊಚ್ಚಲ ಗರ್ಭಿಣಿಗೆ ಶುಭ ಹಾರೈಕೆಯ ಕ್ಷಣವಾಗಿದ್ದು, ಪ್ರತಿಯೊಬ್ಬ ಗರ್ಭಿಣಿಯು ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದರು. ತಾಯಿ-ಮಗುವಿನ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಅತ್ಯವಶ್ಯಕ ಎಂದರು.ನಂತರ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಎಲ್ಲರೂ ಸ್ವ – ಇಚ್ಛೆಯಿಂದ ಸ್ವಚ್ಛತೆ ಮತ್ತು ಪೌಷ್ಠಿಕತೆ ಕಡೆ ಗಮನಹರಿಸಿ ಮಹಿಳೆಯರಿಗೆ ಸ್ಥಾನಮಾನ ಜೊತೆಗೆ ಉತ್ತಮ ಆರೋಗ್ಯವು ಬೇಕು ಎಂದರು. ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಮಾತನಾಡಿ ಇಲಾಖೆಯ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಕಾರ್ಯಕ್ರಮದ ಉದ್ದೇಶದ ಕುರಿತು ಕಾರ್ಯಕ್ರಮದಲ್ಲಿ ನೆರೆದಿರುವ ಜನತೆಗೆ ಮನವರಿಕೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಮಲ್ಲಮ್ಮ , ಆರೋಗ್ಯ ಸಹಾಯಕರು, ಪ್ರೌಢಶಾಲಾ ಶಿಕ್ಷಕಿಯರು, ಪ್ರಾಥಮಿಕ ಶಾಲಾ ಶಿಕ್ಷಕ ವೃಂದದವರು, ಅಂಗನವಾಡಿ ಶಾಲೆಯ ಶಿಕ್ಷಕಿಯರು ಸೇರಿದಂತೆ ಸಾರ್ವಜನಿಕರು ಭಾಗಿಯಾಗಿದ್ದರು.
Be the first to comment