ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಜಾಲಿಗೆ ಗ್ರಾಪಂಯಲ್ಲಿ ಹಾಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಷಾ ಅವರ ವಿರುದ್ಧ ಸರ್ವ ಸದಸ್ಯರು ಒಗ್ಗೂಡಿ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟಿಸಿದ್ದ ಫಲವಾಗಿ ಇದೀಗ ಪಿಡಿಒ ಬದಲಾವಣೆಯಾಗಿದ್ದು, ಪಿಡಿಒ ಗಂಗರಾಜು ಅಧಿಕಾರ ಸ್ವೀಕರಿಸುತ್ತಿರುವುದಿಂದ ಜಾಲಿಗೆ ಗ್ರಾಪಂ ಸರ್ವ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ.
ಜಾಲಿಗೆ ಗ್ರಾಪಂ ಅಧ್ಯಕ್ಷೆ ದೀಪ್ತಿ ವಿಜಯ್ಕುಮಾರ್ ಮಾತನಾಡಿ, ರಜೆಯ ನಿಮಿತ್ತ ಪಿಡಿಒ ಬದಲಾವಣೆಯನ್ನು ಸದ್ಯಕ್ಕೆ ಮೇಲಾಧಿಕಾರಿಗಳು ಮಾಡಿದ್ದಾರೆ. ಸದ್ಯದ ಮಟ್ಟಕ್ಕೆ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ಹೆಚ್ಚುವರಿ ಪಿಡಿಒ ನೇಮಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ, ಈ ಹಿಂದಿನ ಪಿಡಿಒ ಉಷಾ ಅವರು ಮತ್ತೇ ಗ್ರಾಪಂಗೆ ನೇಮಕವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಸರ್ವ ಸದಸ್ಯರಿಗೆ ಸ್ಪಂಧಿಸಿ, ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕ ಜಾಲಿಗೆ ಗ್ರಾಪಂಗೆ ಅನಿವಾರ್ಯತೆ ಇದೆ. ಈಗ ನೇಮಿಸಿರುವ ಪಿಡಿಒ ಆಗಲೀ, ಅಥವಾ ಬೇರೆ ಹೊಸ ಪಿಡಿಒ ಆಗಲೀ ನೇಮಿಸಿ ಶಾಶ್ವತ ಪರಿಹಾರವನ್ನು ಮೇಲಾಧಿಕಾರಿಗಳು ಮಾಡಬೇಕು ಎಂದು ಆಗ್ರಹಿಸಿದರು.
Be the first to comment