ಜಿಲ್ಲಾ ಸುದ್ದಿಗಳು
ಶಿರಸಿ
ಜುಲೈನಲ್ಲಿ ನಡೆದ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ತಾಲೂಕಿ ಹುಲೇಕಲ್ ಶ್ರೀದೇವಿ ಪ್ರೌಢಶಾಲೆಯ ಒಟ್ಟೂ 52 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 29 ವಿದ್ಯಾರ್ಥಿಗಳು ಪ್ರಥಮ ದರ್ಜೆ, 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಸವಿ ಮಹಾಬಲೇಶ್ವರ ಹೆಗಡೆ ಇವಳು ಗಣಿತ ಮತ್ತು ಇಂಗ್ಲೀಷ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದು ಒಟ್ಟೂ 610 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಲಾವಣ್ಯ ಶ್ರೀಕಾಂತ ಹೆಗಡೆ (ತೃತೀಯ ಭಾಷೆ ಕನ್ನಡ 100ಅಂಕ) ಒಟ್ಟೂ 590 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾಳೆ. ಸಂಜನಾ ದಿನೇಶ ನೇತ್ರೇಕರ(ತೃತೀಯ ಭಾಷೆ ಕನ್ನಡ 100 ಅಂಕ) ಹಾಗೂ ಕುಮಾರ ಜಯಂತ ಜನಾರ್ಧನ ನಾಯ್ಕ 576 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ.
ಭಾಗ್ಯಲಕ್ಷ್ಮಿ ರಾಘವ ಹೆಗಡೆ ಇವಳು ಪ್ರಥಮ ಭಾಷೆ ಸಂಸ್ಕøತ ವಿಷಯದಲ್ಲಿ 125ಕ್ಕೆ 125 ಅಂಕ ಹಾಗೂ ರಾಧಿಕಾ ಸುಬ್ರಾಯ ಜೋಶಿ ಸಂಜನಾ ದಿನೇಶ ನೇತ್ರೇಕರ ಮತ್ತು ಮಹಾಲಕ್ಷ್ಮಿ ಓಮು ಮರಾಠಿ ಇವರಿಬ್ಬರು ತೃತೀಯ ಭಾಷೆ ಕನ್ನಡ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದು ಸಾಧನೆ ಮಾಡಿದ್ದಾರೆ.ವಿದ್ಯಾಲಯ ಸತತವಾಗಿ ಉತ್ತಮ ಫಲಿತಾಂಶ ನೀಡುತ್ತಾ ಬಂದಿರುವ ಬಗ್ಗೆ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಮಹಾಪೋಷಕರೂ ಆದ ಶ್ರೀ ಶ್ರೀಮತ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಸ್ವರ್ಣವಲ್ಲೀ ಮಹಾಸಂಸ್ಥಾನ, ಕಾರ್ಯಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಪೂರ್ವವಿದ್ಯಾರ್ಥಿ ಸಂಘ, ಪ್ರಾಚಾರ್ಯರು, ಉಪನ್ಯಾಸಕರು, ಹಾಗೂ ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿರುತ್ತಾರೆ ಎಂದು ಮುಖ್ಯ ಶಿಕ್ಷಕ ಗಣೇಶ ಆನಂದ ಬಂಟ ತಿಳಿಸಿದ್ದಾರೆ.
Be the first to comment