ಜಿಲ್ಲಾ ಸುದ್ದಿಗಳು
ಶಿರಸಿ
ಮಲೆನಾಡಿನ ಜನಜೀವನದಲ್ಲಿ ಅರಣ್ಯವಾಸಿಗಳಪ್ರದೇಶವನ್ನು ವಾಸ್ತವ್ಯ ಮತ್ತು ಸಾಗುವವಳಿಗಾಗಿ ಒತ್ತುವರಿ ಮಾಡಿಕೊಂಡಿರುವ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆಯಡಿ ಮಂಜೂರಿಗೆ ಸಂಬಂಧಿಸಿ, ಕಾನೂನಾತ್ಮಕ ಬೆಂಬಲ ಮತ್ತು ಅರಣ್ಯವಾಸಿಗಳ ಪರ ಸರಕಾರದ ಮೇಲೆ ಸಾಂಘಿಕ ಹೋರಾಟಗಳ ಮೂಲಕ ಒತ್ತಡ ತರಲು ಭೂ ಹಕ್ಕು ಹೋರಾಟದ ಪ್ರಮುಖರು ತೀರ್ಮಾನಿಸಿದ್ದಾರೆ.
ಸೆ.೧೮ರ ಸಂಜೆ ಸಾಗರದ ಹಿರಿಯ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪರ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿಜರುಗಿದ ಚರ್ಚೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಯಿತು.ಸುಪ್ರಿಂ ಕೋರ್ಟ ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಬಂದಿರುವ ಅರ್ಜಿಗಳನ್ನು ಮರುಪರಿಶೀಲನೆ ಮಾಡಲು ನಿರ್ದೆಶನ ನೀಡಿದ ಹಿನ್ನೆಲೆಯಲ್ಲಿ , ರಾಜ್ಯ ಸರಕಾರವು ೧೮ತಿಂಗಳಲ್ಲಿ ಅರ್ಜಿ ಪುನರ ಪರಿಶೀಲಿಸಲಾಗುವದೆಂದು ಸುಪ್ರಿಂ ಕೋರ್ಟಿನಲ್ಲಿ ಪ್ರಮಾಣಪತ್ರ ಸಲ್ಲಿಸಿದ ಅವಧಿ ಪ್ರಸಕ್ತ ವರುಷ ಜನವರಿಯಲ್ಲಿ ಮುಗಿದರೂ ಭೂಮಿಹಕ್ಕು ಮಂಜೂರಿ ಮಂದಗತಿಯಲ್ಲಿ ಜರುಗಿರುವದಕ್ಕೆ ಚರ್ಚೆ ಸಂದರ್ಭದಲ್ಲಿ ಪ್ರಮುಖರು ಖೇದ ವ್ಯಕ್ತಪಡಿಸಿದರು. ಪುನರ ಪರಿಶೀಲನಾ ಸಂದರ್ಭದಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿವಿಧಾನ ಅನುಸರಿಸದೇ ಹಾಗೂಕೇಂದ್ರ ಸರಕಾರದ ಅದೇಶ ಉಲ್ಲಂಘಿಸಿ ಅರ್ಜಿ ವಿಲೇವಾರಿ ಮಾಡುತ್ತಿರುವದಕ್ಕೆ ಸುಪ್ರಿಮ ಮತ್ತು ಹೈಕೋರ್ಟನಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಲಯ ಚರ್ಚೆ ಸಂದರ್ಭದಲ್ಲಿ ನಿರ್ಧರಿಸಲಾಯಿತು.
ರಾಜ್ಯದಾದ್ಯಂತ ಮುಂದಿನ ದಿನಗಳಲ್ಲಿ ತೀವ್ರತರ ಕಾನೂನು ಮತ್ತು ಅರಣ್ಯವಾಸಿಗಳ ಪರ ಮಲೆನಾಡು ಜಿಲ್ಲೆಗಳಲ್ಲಿ ಸಂಘಟಿಸಲು ನಿರ್ಧರಿಸಲಾಯಿತು. ಈ ಸಭೆಯಲ್ಲಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವಿ ನಾಯ್ಕ, ತೀ.ನ.ಶ್ರೀನಿವಾಸ,ಬಿ.ಆರ್.ಜಯಂತ, ಹಿರಿಯ ನ್ಯಾಯವಾದಿ ಧರ್ಮರಾಜ, ಡಾ.ರಾಜನಂದಿನಿ ಕಾಗೋಡ ಇದ್ದರು.
ರಾಜ್ಯದಲ್ಲಿ ಶೇ.೬೨.೪೯ ಅರ್ಜಿ ತಿರಸ್ಕೃತ:
ರಾಜ್ಯದಲ್ಲಿ ಅರಣ್ಯ ಹಕ್ಕುಕಾಯಿದೆಯಡಿ ೨೯೫೦೧೮ ಅರ್ಜಿ ಬಂದಿದ್ದು, ೧೮೪೩೫೮ ಅರ್ಜಿಗಳು ತಿರಸ್ಕಾರವಾಗಿ, ತಿರಸ್ಕೃತಗೊಂಡಿರುವ ಅರ್ಜಿಗಳ ಶೇಕಡಾವಾರು ಪ್ರಮಾಣ ೬೨.೪೯ ಆಗಿದೆ. ರಾಜ್ಯದಲ್ಲಿ ಇಂದಿನವರೆಗೆ ಕೇವಲ ೧೫೭೯೮ ಹಕ್ಜುಪತ್ರ ವಿತರಿಸಲಾಗಿದ್ದು ಅವುಗಳಲ್ಲಿ ಬುಡಕಟ್ಟು ಜನಾಂಗ ೧೨೪೮೧ , ಇತರ ಪಾರಂಪಾರಿಕ ಅರಣ್ಯವಾಸಿಗಳು ೧೯೭೬. ಅಗಿದ್ದು, ಸಮೂಹ ಹಕ್ಕುಗಳು ೧೩೪೧ ಆಗಿದೆ. ಒಟ್ಟು ಮಂಜೂರಿ ಆಗಿರುವದು ಶೇ.೫.೩೫ ಮಾತ್ರ. ಎಂದು ಸಭೆಯಲ್ಲಿರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ ಶಿರಸಿ ಮಾಹಿತಿ ನೀಡಿದರು.
Be the first to comment