ಮಾನಸಿಕ ಕಿರುಕುಳ ತಾಳದೆ ಗೃಹಿಣಿ ಆತ್ಮಹತ್ಯೆ

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಶಿರಸಿ

ಬನವಾಸಿಯಲ್ಲಿ ಮಾನಸಿಕ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪತಿ ನೀಡುತ್ತಿದ್ದ ಮಾನಸಿಕ ಹಿಂಸೆಯಿಂದ ಮನನೊಂದ ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿ ತಾಲೂಕಿನ ಬನವಾಸಿಯ ಸಂಕೊಳ್ಳಿಯಲ್ಲಿ ನಡೆದಿದೆ.ಮೂಲತಃ ಸಿದ್ಧಾಪುರ ತಾಲೂಕಿನ ಮವತ್ತಿಯ ಶಿಲ್ಪಾ ವಿಜಯೇಂದ್ರ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ. ಈಕೆಯ ಪತಿ ವಿಜಯೇಂದ್ರ ರಾಜಶೇಖರ್ ಪಾಟೀಲ್ ಆರೋಪಿಯಾಗಿದ್ದಾನೆ.

CHETAN KENDULI

ಇವರು 2 ವರ್ಷಗಳ ಹಿಂದೆ ಮದುವೆಯಾಗಿದ್ದು ಮೊದಲು ಅನ್ಯೋನ್ಯವಾಗಿದ್ದು ಇತ್ತೀಚೆಗೆ ಮನಃಸ್ತಾಪ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಸಪ್ಟೆಂಬರ್ 11 ರಂದು ಮಳವತ್ತಿಯಿಂದ ಆರೋಪಿಯು ಪತ್ನಿಯನ್ನು ಸಂಕೊಳ್ಳಿಯಲ್ಲಿರುವ ತವರು ಮನೆಗೆ ತಂದು ಬಿಟ್ಟಿದ್ದ ನಂತರ ಸಪ್ಟೆಂಬರ್ 18 ರಂದು ಶಿಲ್ಪಾರ ತವರು ಮನೆಗೆ ಬಂದು ಜಗಳ ಮಾಡಿ, ನಡತೆ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿ, ಅವಾಚ್ಯ ಶಬ್ದಗಳಿಂದ ಬೈದು , ಹೊಡಿಬಡಿ ಮಾಡಿ ನೀನು ನನ್ನ ಮನೆಗೆ ಬಂದರೂ ಅಷ್ಟೇ, ಬಿಟ್ಟರೂ ಅಷ್ಟೇ , ಇದ್ದರೂ ಅಷ್ಟೇ ಸತ್ತರೂ ಅಷ್ಟೇ, ಎಂದು ಹೇಳಿ ಹೋಗಿದ್ದ. ಇದರಿಂದ ಮಾನಸಿಕವಾಗಿ ನೊಂದ ಗೃಹಿಣಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು , ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಪತಿಯ ವಿರುದ್ಧ ಮೃತಳ ತಂದೆ ದೂರು ದಾಖಲಿಸಿದ್ದಾರೆ. ಬನವಾಸಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಮೃತಳು ಸಾವನ್ನಪ್ಪಿದ ಸ್ಥಳಕ್ಕೆ ತಹಶೀಲ್ದಾರ್ ಸಮೇತ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.

Be the first to comment

Leave a Reply

Your email address will not be published.


*