ರಾಜ್ಯ ಸುದ್ದಿಗಳು
ದೇವನಹಳ್ಳಿ
ಕೋವಿಡ್ ಲಸಿಕೆ ಮೊದಲ ಡೋಸ್ ಶೇ.೯೦ ಭಾಗ ಪೂರ್ಣಗೊಂಡಿದ್ದು, ಎರಡನೇ ಡೋಸ್ ಪಡೆಯುವಲ್ಲಿ ಮೀಸಗಾನಹಳ್ಳಿ ಗ್ರಾಮಸ್ಥರು ವಿಳಂಬ ವಹಿಸುತ್ತಿದ್ದಾರೆ ಎಂದು ಕಾರಹಳ್ಳಿ ಆರೋಗ್ಯ ಸಹಾಯಕಿ ಮಮತಾ ತಿಳಿಸಿದರು. ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ಮೀಸಗಾನಹಳ್ಳಿ ಗ್ರಾಮದಲ್ಲಿ ಕೋವಿಡ್ ಎರಡನೇ ಡೋಸ್ ಲಸಿಕೆ ಹಾಕುವುದರ ಮೂಲಕ ಅವರು ಮಾತನಾಡಿದರು. ಈ ಗ್ರಾಮದಲ್ಲಿ ಪ್ರಸ್ತುತ ೧೫೩ ಕುಟುಂಬಗಳು ಇದ್ದು, ಸುಮಾರು ೭೫೦ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಈಗಾಗಲೇ ಶೇ.೯೫ರಷ್ಟು ಕೋವಿಡ್ ಮೊದಲ ಲಸಿಕೆ ಪಡೆದಿರುತ್ತಾರೆ. ಶೇ.೫ರಷ್ಟು ಜನರು ಲಸಿಕೆ ಪಡೆಯಲು ಮುಂದಾಗುತ್ತಿಲ್ಲ. ಎರಡನೇ ಡೋಸ್ ಕಾಲಾವಧಿ ಮುಗಿದಿದ್ದರೂ ಸಹ ಕೋವಿಡ್ ಎರಡನೇ ಡೋಸ್ ಪಡೆದುಕೊಳ್ಳಲು ಗ್ರಾಮಸ್ಥರು ಮುಂದಾಗಬೇಕಾಗಿದೆ ಎಂದು ಮಾಹಿತಿ ನೀಡಿದರು.
ಕಾರಹಳ್ಳಿ ಗ್ರಾಪಂ ಸದಸ್ಯ ಮೀಸಗಾನಹಳ್ಳಿ ಎನ್.ಚಂದ್ರಶೇಖರ್ ಮಾತನಾಡಿ, ಗ್ರಾಮದಲ್ಲಿ ಕೋವಿಡ್ ಮೊದಲ ಲಸಿಕೆಯನ್ನು ಒಂದೇ ಬಾರಿಗೆ ಎನ್‌ಜಿಒ ಸಹಕಾರದಲ್ಲಿ ಹಾಕಿಸಲಾಗಿದೆ. ಎರಡನೇ ಡೋಸ್ ಪಡೆದುಕೊಳ್ಳಲು ಇದೀಗ ದಿನಾಂಕ ಬಂದಿರುತ್ತದೆ. ಲಸಿಕೆ ಪಡೆದುಕೊಳ್ಳಲು ಯಾರು ನಿರ್ಲಕ್ಷ್ಯ ತೋರಬಾರದೆಂದು ಈಗಾಗಲೇ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗಿದೆ. ಆರೋಗ್ಯಕರ ವಾತಾವರಣ ಸೃಷ್ಠಿಯಾಗಬೇಕಾದರೆ, ಕೊರೊನಾ ಹೆಮ್ಮಾರಿಯನ್ನು ಬುಡಸಮೇತ ಕಿತ್ತೊಗೆಯಲು ಎಲ್ಲರಿಗೂ ಎರಡನೇ ಡೋಸ್ ಸಹ ನಿಗಧಿತ ಸಮಯದಲ್ಲಿ ಪಡೆದುಕೊಳ್ಳಲು ಪ್ರೇರೆಪಿಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಚಂದ್ರಮ್ಮ, ಗ್ರಾಮಸ್ಥರಾದ ಗಜೇಶ್, ತಿಮ್ಮಯ್ಯ, ಗ್ರಾಮಸ್ಥರು ಇದ್ದರು.
Be the first to comment