ಜರೂರಾಗಿ ತಾಲೂಕಿನಾದ್ಯಂತ ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆಗೆಯುವಂತೆ ಹಸಿರುಸೇನೆ ಮನವಿ ಮನವಿ ಪತ್ರ ಸ್ವೀಕರಿಸಲು ಮೀನಾಮೇಷ ಮಾಡಿದ ಅಧಿಕಾರಿಗಳೂ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು

ಮಸ್ಕಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಮಸ್ಕಿ ತಾಲೂಕಿನಲ್ಲಿ ಬರ್ತಾ ಮತ್ತು ತೊಗರಿ ಕಟಾವು ಮುಗಿಯುತ್ತಿದ್ದು, ಕೇಂದ್ರ ಸರ್ಕಾರ ಎಂ.ಎಸ್.ಪಿ ಬೆಲೆ ಘೋಷಣೆ ಮಾಡಿರುತ್ತದೆ. ಆದರೆ ರಾಜ್ಯ ಸರಕಾರ ಈ ಆದೇಶವನ್ನು ಪತ್ರಿಕೆಗಳಿಗೆ ಮಾತ್ರ ಸೀಮಿತ ಮಾಡಿ ಇದುವರೆಗೆ ಯಾವುದೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿರುವುದಿಲ್ಲ. ರೈತರು ತಾವು ಬೆಳೆದ ಬೆಳೆಯನ್ನು ರಸ್ತೆಗಳಲ್ಲಿ ದಾಸ್ತಾನು ಮಾಡಿಕೊಂಡು ಕಾಯುತ್ತಿದ್ದಾರೆ. ಸರ್ಕಾರ ಕೂಡಲೇ ಪಂಚಾಯತಿಗೆ ಒಂದರಂತೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ರೈತರು ಬೆಳೆದ ಭತ್ತ ಮತ್ತು ತೊಗರಿ ಎಂ.ಎಸ್.ಪಿ ಬೆಲೆಯಲ್ಲಿ ಖರೀದಿ ಮಾಡಬೇಕು.

CHETAN KENDULI

ಈಗ ಮಳೆಯ ಅಭಾವದಿಂದ ಬೆಳೆದು ನಿಂತಿರುವ ತೊಗರಿ ಬೆಳೆಯುವ ಒಣಗುತ್ತಿದೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ. ಕೂಡಲೇ ಸರ್ಕಾರ ಸುಮಾರು ವರ್ಷಗಳಿಂದ ರೈತರಿಗೆ ಬೆಳೆ ಪರಿಹಾರ ನೀಡಿರುವುದಿಲ್ಲ ಹಾಗೂ ರೈತ ಸಂಘಟನೆಗಳು ಮನವಿಯನ್ನು ಮಾಡಿದರೂ ಅದಕ್ಕೆ ಸರಕಾರವು ಯಾವುದೇ ರೀತಿಯ ಪರಿಹಾರವನ್ನು ನೀಡಿರುವುದಿಲ್ಲ. ಈ ಬಾರಿಯಾದರೂ ರೈತರ ಬೆಳೆ ನಷ್ಟಕ್ಕೆ ಸರಿಸಮಾನಾಗಿ ನಷ್ಟ ಪರಿಹಾರ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ.ಮಸ್ಕಿ ರೈತ ಸಂಪರ್ಕ ಕೇಂದ್ರ ನಗರದ ಹೊರ ಪ್ರದೇಶದಲ್ಲಿ ಇರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಅನೇಕ ಬಾರಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸೇರಬೇಕಾದ ವಸ್ತುಗಳು ಅರಳಿದ ಸಂಪರ್ಕ ಕೇಂದ್ರದಿಂದ ನಾಪತ್ತೆಯಾಗಿ ರುತ್ತವೆ ಆದ್ದರಿಂದ ಸರ್ಕಾರ ಕೂಡಲೇ ಮಸ್ಕಿಯ ರೈತ ಸಂಪರ್ಕ ಕೇಂದ್ರವನ್ನು ಜನಸಂಪರ್ಕ ಇರುವ ಪ್ರದೇಶಕ್ಕೆ ಸ್ಥಳಾಂತರಿಸಬೇಕು.

ಈ ಮನವಿಯಲ್ಲಿ ತಿಳಿಸಲಾದ ವಿಷಯಗಳ ಬಗ್ಗೆ ಕೂಡಲೇ ಸರ್ಕಾರ ಗಮನ ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸುತ್ತದೆ. ಒಂದು ವೇಳೆ ತಪ್ಪಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಉಪ ತಹಶೀಲ್ದಾರ್ ನಾಗಲಿಂಗ ಪತ್ತಾರ ಇವರಲ್ಲಿ ಮನವಿ ಮಾಡಿ ಎಚ್ಚರಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ಮಾನ್ಯ ತಹಶೀಲ್ದಾರ್ ಕಛೇರಿಗೆ ಮನವಿ ಪತ್ರ ಸಲ್ಲಿಸಲು ತೆರಳಿದಾಗ ಗ್ರೇಡ್ 1 ತಹಶೀಲ್ದಾರರು ರಜೆಯಲ್ಲಿರುವ ಕಾರಣ ಗೊಂದಲಕ್ಕೀಡಾದ ಗ್ರೇಡ್ 2 ತಹಶೀಲ್ದಾರರು. ಗ್ರೇಡ್ 1 ಅಧಿಕಾರಿ ಇಲ್ಲದ ಸಮಯದಲ್ಲಿ ನಂತರದ ಸ್ಥಾನವನ್ನು ನಿರ್ವಹಿಸುವುದು ವಾಡಿಕೆಯಲ್ಲವೇ.? ಎಂದು ಕ.ರಾ. ರೈ.ಸಂಘ ಹಾಗೂ ಹಸಿರು ಸೇನೆಯೂ ಮನವಿ ಸ್ವೀಕರಿಸಲು ನಿರಾಕರಿಸಿದ ಅಧಿಕಾರಿಗಳ ವಿರುದ್ಧ ಘೋಷಣೆಕೂಗಿದರು.ಆದರೆ ಗ್ರೇಡ್ 2 ಅಧಿಕಾರಿಯಾದ ನಾಗಲಿಂಗ ಪತ್ತಾರ್ ರವರು ಮನವಿ ಪತ್ರವನ್ನು ಸ್ವೀಕರಿಸಲು ಗೊಂದಲಕ್ಕೀಡಾಗಿ ನಿರಾಕರಿಸಿದ ಘಟನೆ ಇಂದು ಜರುಗಿತು.ನಂತರ ನನ್ನ ಕಡೆಯಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಸಹ ಕ್ಷಮೆ ಯಾಚಿಸಿ ಕೆಲವು ಸಮಯಗಳ ಕಾಲ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮನವಿ ಪತ್ರ ಸ್ವೀಕರಿಸಿದರು. 

ಈ ವೇಳೆಯಲ್ಲಿ ವಿಜಯ ಬಡಿಗೇರ ತಾಲೂಕ ಅಧ್ಯಕ್ಷರು, ಶಾಮಣ್ಣ ತಾಲೂಕ ಗೌರವಾಧ್ಯಕ್ಷರು, ಶೆಟಪ್ಪ- ಯಲ್ಲಪ್ಪ ಅಗಸ್ತ್ಯ ಉಪಾಧ್ಯಕ್ಷರು, ಅಮೀನ್ ಪಾಶ ದಿದ್ದಿಗಿ ರಾಜ್ಯ ಮುಖಂಡರು,ನಾಗರಾಜ ಸುಂಕನೂರ ಪ್ರಧಾನ ಕಾರ್ಯದರ್ಶಿ, ಕೆ.ದುರ್ಗಪ್ಪ ಸಲಹೆಗಾರರು, ರಾಜಶೇಖರ್ ಹಳ್ಳಿ ಸರ್ವ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*