ಸುಳ್ಳು ಪ್ರಕರಣ ದಾಖಲಿಸಿರುವ ನಕಲಿ ಖಾತೆ ಸೃಷ್ಠಿಕೋರರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಪಿವಿಸಿ ಒತ್ತಾಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಮತ್ತು ಸಿಇಒಗೆ ಪಿವಿಸಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮನವಿ 

ವರದಿ ಹೈದರ್ ಸಾಬ್ ಕುಂದಾಣ

ದೇವನಹಳ್ಳಿ

CHETAN KENDULI

ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಚಿಕ್ಕೋಬದೇನಹಳ್ಳಿ ಗ್ರಾಮದಲ್ಲಿನ ಗ್ರಾಮಠಾಣಾ ಜಮೀನಿಗೆ ಸಂಬಂಧಿಸಿದಂತೆ ಈ ಹಿಂದೆ ಜಿಪಂ ಅಧ್ಯಕ್ಷರು, ಗ್ರಾಪಂ ಅಧ್ಯಕ್ಷರು ಮತ್ತು ಬಿಲ್‌ಕಲೆಕ್ಟರ್ ಒಟ್ಟು ಸೇರಿ ಭೂಕಬಳಿಕೆ ಮಾಡಿಕೊಂಡು ೧೦೦ಕ್ಕೆ ೧೦೦ ಒಬ್ಬೊಬ್ಬರು ಮೂರ್‍ನಾಲ್ಕು ಸೈಟುಗಳನ್ನು ಮಾಡಿಕೊಂಡು ಬೆಲೆ ಬಾಳುವ ಸರಕಾರದ ಆಸ್ತಿಯನ್ನು ಮತ್ತು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಪ್ರಜಾವಿಮೋಚನಾ ಬಹುಜನ ಸಮಿತಿ ಪಿವಿಸಿ ಸ್ವಾಭಿಮಾನ ರಾಜ್ಯಾಧ್ಯಕ್ಷ ಮುನಿಆಂಜನಪ್ಪ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಎದುರು ಚಿಕ್ಕೋಬದೇನಹಳ್ಳಿ ಗ್ರಾಮಠಾಣ ಜಮೀನಿಗೆ ಸಂಬಂಧಿಸಿದಂತೆ, ಗ್ರಾಮಸ್ಥರದಾ ರಾಮಾಂಜಿನಪ್ಪ ಮತ್ತು ಇತರೆ ಏಳು ಜನರ ಮೇಲೆ ಆ.೬ರ ಸಂಖ್ಯೆ:ಜಿಪಿಎ೦೭/೨೦-೨೧ರಂದು ಸುಳ್ಳು ಪ್ರಕರಣವನ್ನು ದಾಖಲಿಸಿರುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು. ಸರಕಾರಕ್ಕೆ ನಷ್ಟ ಮಾಡಿರುವ ೧೫ಕೋಟಿ ರೂ. ಬೆಳೆಬಾಳುವ ಸರಕಾರಿ ಆಸ್ತಿ ಸರಕಾರಕ್ಕೆ ತೆಗೆದುಕೊಳ್ಳುವಂತೆ ಈ ಹಿಂದೆ ಮಾರ್ಚ್ ತಿಂಗಳಲ್ಲಿ ಹೋರಾಟ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮನವಿ ಸಹ ನೀಡಲಾಗಿತ್ತು. ಮನವಿಗೆ ಸ್ಪಂಧಿಸಿ ಸರಕಾರದ ಹಂತದಲ್ಲಿ ನಕಲಿ ದಾಖಲೆಗಳ ಸೃಷ್ಠಿಸಿರುವ ದಾಖಲೆಗಳನ್ನು ರದ್ದುಗೊಳಿಸಲಾಗಿತ್ತು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಮೂಲ ನಿವಾಸಿಗಳಾದ ಸುಮಾರು ೭-೮ಜನರ ಮೇಲೆ ಸುಳ್ಳು ಪ್ರಕರಣವನ್ನು ಮಾಡಿರುವುದು ಗಮನಕ್ಕೆ ಬಂದಿದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳ ಮತ್ತು ಜಿಪಂ ಮುಖ್ಯಕಾರ್ಯನಿರ್ವಹಾಧಿಕಾರಿಗಳ ಗಮನಕ್ಕೆ ನಮ್ಮ ಪಿವಿಸಿ ವತಿಯಿಂದ ಹೋರಾಟ ಮಾಡಲಾಗುತ್ತಿದೆ. ಎಂಎಲ್‌ಸಿ ಚುನಾವಣೆ ಇರುವ ಹಿನ್ನಲೆಯಲ್ಲಿ ಘೋಷಿಸಿರುವ ನೀತಿಸಂಹಿತೆಯಿಂದಾಗಿ ಮೂರ್‍ನಾಲ್ಕು ಜನರು ಮಾತ್ರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಡಿಸೆಂಬರ್ ೧೦ರ ನಂತರ ಇದೇ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಉಗ್ರ ಹೋರಾಟ ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಹೇಳಿದರು.

ರೈತ ಮುಖಂಡ ಚಿಕ್ಕೋಬದೇನಹಳ್ಳಿ ರಾಮಾಂಜಿನಪ್ಪ ಮಾತನಾಡಿ, ಗ್ರಾಮ ಠಾಣ ಸ್ವತ್ತಿಗೆ ಸಂಬಂಧಿಸಿದಂತೆ ಅಕ್ರಮ ದಾಖಲೆಗಳ ಸೃಷ್ಠಿಯನ್ನು ಮನಗೊಂಡು ಸರಕಾರದ ಹಂತದಲ್ಲಿ ವಜಾಗೊಳಿಸಿ, ನಾಮಫಲಕವನ್ನು ಸಹ ಹಾಕಲಾಗಿತ್ತು. ಹೋರಾಟಕ್ಕೆ ಬೆಂಬಲ ನೀಡಿದ್ದ ಗ್ರಾಮದ ಕುಟುಂಬಗಳ ಮೇಲೆ ಅಕ್ರಮದಾರರು ಪ್ರಕರಣ ದಾಖಲಿಸಿರುತ್ತಾರೆ. ಹಾಗಾಗೀ ಉಚ್ಛ ನ್ಯಾಯಾಲಯದಲ್ಲಿ ಜಮೀನಿಗೆ ಸಂಬಂಧಿಸಿದಂತೆ ಹೂಡಿರುವ ಮೊಕದ್ದಮ್ಮೆಯನ್ನು ಶೀಘ್ರ ವಿಚಾರಣೆ ನಡೆಸಿ, ಅಕ್ರಮದಾರರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಲಾಗಿದೆ. 

ಇದೇ ಸಂದರ್ಭದಲ್ಲಿ ಎಂಎಲ್‌ಸಿ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಪ್ರತಿಭಟನೆ ನಡೆಸದೆ, ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಚೇರಿಗೆ ಮೂರು ಜನ ಮುಖಂಡರು ತೆರಳಿ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮನವಿ ಸ್ವೀಕರಿಸಿ, ಕ್ರಮಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯ, ಕಚೇರಿ ಸಿಬಂಧಿ ಗಂಗಾಧರ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಹನುಮಣ್ಣಗೂಳ್ಯ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಪುನೀತ್, ಮಹಿಳಾಘಟಕದ ಅಧ್ಯಕ್ಷೆ ರತ್ನಮ್ಮ, ಕಾರ್ಮಿಕ ಘಟಕದ ಅಧ್ಯಕ್ಷ ಅಶೋಕ್, ಪ್ರಜಾ ವಿಮೋಚನಾ ಚಳವಳಿಯ ರೈತ ಮುಖಂಡರು, ಪದಾಧಿಕಾರಿಗಳು, ವಿಶ್ವನಾಥಪುರ ಪೊಲೀಸರು ಇದ್ದರು.

Be the first to comment

Leave a Reply

Your email address will not be published.


*