ಭಟ್ಕಳದ ಗ್ರಾಮಾಂತಾರ ಪ್ರದೇಶಗಳಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ ? ಗೊತ್ತಿದು ಕಣ್ಣು ಮುಚ್ಚಿ ಕುಳಿತಿರುವ ಅಧಿಕಾರಿಗಳು:

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಭಟ್ಕಳ

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಗೆ ಹೊಂದಿಕೊಂಡಿರುವ 4-5 ಕಿ.ಮಿ ಸಮೀಪವಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮವಾಗಿ ಅನೇಕ ಕಲ್ಲು ಕ್ವಾರಿ, ಬೆಟ್ಟಗಳ ಮಣ್ಣಿನ ಸಾಗಾಟ, ಸಮುದ್ರದ ಮರಳು ಸಾಗಾಟದಂತಹ ಅಕ್ರಮ ಚಟುವಟಿಕೆ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ನಿರಾತಂಕವಾಗಿ ಸಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕೆಲವು ದಿನಗಳಿಂದ ಮುಟ್ಟಳ್ಳಿ ಗ್ರಾಮಪಂಚಾಯತ್‌ ವ್ಯಾಪ್ತಿಯಮುಟ್ಟಳ್ಳಿಯಿಂದ ಬೆಹಳ್ಳಿಗೆ ಸಾಗುವ ಮಾರ್ಗದಲ್ಲಿರುವ ಬೆಟ್ಟವನ್ನು ಜೆಸಿಬಿಗಳ ಸಹಾಯದಿಂದ ನೆಲಸಮಗೊಳಿಸಿ ಅಲ್ಲಿಂದ ಲಾರಿ ಗಟ್ಟಲೆ ಮಣ್ಣನ್ನು ಸಾಗಿಸಿ ಮಾರಾಟ ಮಾಡಿ ಹಣ ಸಂಪಾದನೆಯನ್ನು  ಕೆಲ ಉಧ್ಯಮಿಗಳು ಮಾಡುತ್ತಿರುವುದು ಕಂಡುಬರುತ್ತಿದೆ.ಅಷ್ಟೆ ಅಲ್ಲದೆ ಅಲ್ಲಿನ ಸ್ಥಳಿಯಾಡಳಿತವಾದ ಮುಟ್ಟಳ್ಳಿ

CHETAN KENDULI

ಗ್ರಾಮ ಪಂಚಾಯತ್‌ ಕೂಡ ಈ ಬಗ್ಗೆ ಜಾಣಕುರುಡುತನ ಪ್ರದರ್ಶಿಸುತ್ತಿದೆ ಎಂಬ ಮಾತು ಸಾರ್ವಜನಿಕವಾಗಿಕೇಳಿಬರುತ್ತಿದೆ. ಬೆಟ್ಟದ ತಪ್ಪಲು ಪದ್ರೇಶದಲ್ಲಿ ವಾಸಿಸುವ ಜನರು ಆತಂಕಕ್ಕೊಳಗಾಗಿದ್ದಾರೆ, ಕಾರಣ ಮಳೆಗಾಲದಲ್ಲಿ ಬೆಟ್ಟ ಕುಸಿತ ಗೊಂಡು ಮನೆ ಮಠಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದು ಕೇವಲ  ಮಟ್ಟಳ್ಳಿ ಗ್ರಾಮವಲ್ಲದೆ ಯಲ್ವಡಿ ಕವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಾಸ್ಮೂಡಿ ಹನೂಮಮತ ದೇವಸ್ಥಾನದ ಸಮೀಪವಿರುವ ಬೆಟ್ಟವು ಸಹ ಕಳೆದ ಕೆಲವು ತಿಂಗಳುಗಳ ಹಿಂದೆ ಜೆಸಿಬೆಯ ಸಹಾಯದಿಂದ ಸಂಪೂರ್ಣ ನೆಲಸಮವಾಗಿರುವು ಕಂಡುಬರುತ್ತಿದೆ. ಈ ಬಗ್ಗೆ ತಾಲೂಕಾಡಳಿತವಾಗಲಿ, ಸ್ಥಳಿಯ ಗ್ರಾಮ ಪಂಚಾಯತಗಳಾಗಲಿ ತಲೆ ಕೆಡಿಸಿ ಕೊಂಡಿಲ್ಲ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನುವಂತೆ ಬೆಟ್ಟಗುಡ್ಡಗಳನ್ನು ನೆಲಸಮಗೊಳಿಸಿ ಆ ಮಣ್ಣನ್ನು ಮಾರಿ ತಮ್ಮ ಖಜಾನೆಗಳನ್ನು ತುಂಬಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂತವರಿಗೆ ರಾಜಕೀಯ ಮುಖಂಡರ ಕೃಪಾಕಟಾಕ್ಷವೂ ಇದೆ ಎಂಬುದು

ಸಾರ್ವಜನಿಕವಾಗಿ ಜನ ಆಡಿಕೊಳ್ಳುತಿದ್ದಾರೆ. ಇಂತಹ ವಿಷಯಗಳು ಪರಿಸರವಾದಿಗಳಿಗೆ ತಿಳಿದರು ತಿಳಿಯದಿರುವಂತೆ ಇರುವುದು ವಿಪರ್ಯಾಸವೇ ಸರಿ ತಾಲೂಕಾಡಳಿತ ಇನ್ನಾದರು ಇಂತಹ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ ನೈಸರ್ಗಿಕ ದತ್ತವಾದ ಈ ಬೆಟ್ಟ ಗುಡ್ಡಗಳನ್ನು ಸಂರಕ್ಷಿಸುವ ಬಗ್ಗೆ ಕ್ರಮ ಕೈಗೊಳ್ಳಲಿ ಎಂಬುದು ವರದಿಯ ಆಶಯ.

Be the first to comment

Leave a Reply

Your email address will not be published.


*