ರಾಜ್ಯ ಸುದ್ದಿಗಳು
ಮಸ್ಕಿ
ಪಟ್ಟಣದ ಹೊರ ವಯದಲ್ಲಿರುವ ಹಳೆ ಕ್ಯಾತ್ನಟ್ಟಿ ಮುಖ್ಯರಸ್ತೆ ಮಾರ್ಗ ಪಕ್ಕದಲ್ಲಿರುವ ಸರ್ವೆ ನಂಬರ್ 374 ಹತ್ತು ಎಕರೆ, ಸರ್ವೆ ನಂಬರ್ 373 39 ಗುಂಟೆ ಕಬ್ಬಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು ಎರಡುನೂರು ಟನ್ ಗಿಂತಲೂ ಹೆಚ್ಚು ಅಪಾರ ಪ್ರಮಾಣದ ಕಬ್ಬಿನ ಬೆಳೆ ಸುಟ್ಟು ಬಸ್ಮವಾಗಿದೆ. ಸಾಲ ಮಾಡಿ ಕಷ್ಟಪಟ್ಟು ಬೆಳೆದ ರೈತನ ಕಬ್ಬಿನ ಫಸಲು ಕಟಾವಿಗೆ ಬಂದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿ ಸುಟ್ಟು ಕರಕಲಾಗಿ ಹೋಗಿದ್ದ ಕಬ್ಬಿನ ಬೆಳೆ ನಷ್ಟದಿಂದ ರೈತ ಕಂಗಾಲಾಗಿದ್ದಾನೆ.
ಸಂಬಂಧಪಟ್ಟ ಸರ್ಕಾರ ಜನಪ್ರತಿನಿಧಿಗಳು ಶಾಸಕರು ಈ ಬಡರೈತನನ್ನು ಸ್ಪಂದಿಸಿ ನಷ್ಟಕ್ಕೊಳಗಾದ ರೈತನ ಬೆಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಮಸ್ಕಿ ತಾಲೂಕು ಘಟಕದ ಅಧ್ಯಕ್ಷರಾದ ತಾಯಪ್ಪ ರವರು ಮನವಿ ಮಾಡಿಕೊಂಡಿದ್ದಾರೆ. ತಾಲೂಕಾ ಆಡಳಿತ ಈ ಬಡ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ,ಪರಿಹಾರ ನೀಡುತ್ತಾ ಎಂದು ಕಾದು ನೋಡಬೇಕಾಗಿದೆ.
Be the first to comment