ಜಿಲ್ಲಾ ಸುದ್ದಿಗಳು
ಮಸ್ಕಿ
ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನರೇಗಾ ಕೆಲಸಕ್ಕೆ ಬೇಡಿಕೆ ಬರಲಿದ್ದು, ಜಾಬ್ ಕಾರ್ಡ್‌ಗಳ ವಿತರಣೆ, ಪರಿಶೀಲನೆ ಸಮರ್ಪಕವಾಗಿ ಜರುಗಬೇಕು ಎಂದು ಮಸ್ಕಿ ತಾಪಂ ಸಹಾಯಕ ನಿರ್ದೇಶಕ (ನರೇಗಾ) ಶಿವಾನಂದರೆಡ್ಡಿ ಸಲಹೆ ನೀಡಿದರು.ಮಸ್ಕಿ ತಾಪಂ ಸಭಾಂಗಣದಲ್ಲಿ ಗುರುವಾರ ಬಿಎಫ್‌ಟಿ, ಗ್ರಾಮೀಣ ಕಾಯಕ ಮಿತ್ರರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಸ್ಥಳೀಯ ಕೂಲಿಕಾರ್ಮಿಕರ ಬೇಡಿಕೆ ಅನುಸಾರ ಕೂಲಿ ಕೆಲಸ ಒದಗಿಸಬೇಕು. ಕಾರ್ಮಿಕರ ಹಾಜರಾತಿಯನ್ನು ಕಡ್ಡಾಯವಾಗಿ ಎಂಎನ್‌ಎನ್‌ಎಸ್ ತಂತ್ರಾಂಶದಲ್ಲಿ ನಮೂದಿಸಬೇಕು. ಈ ಕಾರ್ಯಕ್ಕೆ ವಿದ್ಯಾವಂತ ನಿರುದ್ಯೋಗ ಯುವಕರನ್ನು ನೇಮಿಸಬೇಕು. ಅವರಿಗೆ ಗ್ರಾಪಂ ಮೂಲಕ ಗೌರವಧನ ಪಾವತಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ಮುಖ್ಯವಾಗಿ ಅಂಗವಿಕಲರು, ಮಂಗಳಮುಖಿಯರನ್ನು ಗುರುತಿಸಿ, ಜಾಬ್‌ಕಾರ್ಡ್ ವಿತರಿಸುವುದರ ಜತೆಗೆ ವೈಯಕ್ತಿಕ ಕಾಮಗಾರಿಗಳನ್ನು ಅವರಿಗೆ ಮಂಜೂರು ಮಾಡಬೇಕು. ಆಧಾರ್ ಕಾರ್ಡ್‌ಗಳನ್ನು ಜಾಬ್ ಕಾರ್ಡ್‌ಗಳಿಗೆ ಜೋಡಿಸಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ತಂಡಗಳು ತಾಲೂಕಿಗೆ ಭೇಟಿ ನೀಡಿ, ನರೇಗಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಿದೆ. ಕಡತಗಳಲ್ಲಿ ಕಾಮಗಾರಿಗಳ ಫೋಟೋ ಜತೆಗೆ ಕಾಮಗಾರಿಗಳ ಸಂಕೇತ, (ವರ್ಕ್‌ಕೋಡ್) ಖರ್ಚು ವೆಚ್ಚಗಳ ವಿವರ ನಮೂದಿಸಬೇಕು. ಸ್ಮಾರ್ಟ್ ಪೋನ್ ಬಳಕೆ ಗೊತ್ತಿರುವವರನ್ನು ಮೇಟಿಗಳಾಗಿ ನೇಮಿಸಬೇಕು. ಆಗ ಬಿಎಫ್‌ಟಿಗಳಿಗೆ ಒತ್ತಡ ಕಡಿಮೆಯಾಗಲಿದೆ ನರೇಗಾ ಸಿಬ್ಬಂದಿಗೆ ಕಿಟ್, ಡೈರಿ, ಗುರುತಿನ ಚೀಟಿ ವಿತರಣೆಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. ಟಿಎಂಐಎಸ್ ಅನುಮೋಲ್ ಸಿಂಗ್ ಠಾಕೋರ್, ಐಇಸಿ ಸಂಯೋಜಕ ಜಿ. ಸತೀಶ್ ಇದ್ದರು.
Be the first to comment