ಪ್ರೌಢ ಶಿಕ್ಷಣ ಸಚಿವ  .ಬಿ. ಸಿ ನಾಗೇಶ್.ಗೋಕರ್ಣಕ್ಕೆ ದಿಢೀರ್.ಭೇಟಿ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

 ಗೋಕರ್ಣ

ಇಂದು ಗೋಕರ್ಣಕ್ಕೆ ಬಂದು ಶ್ರೀ ಮಹಾಗಣಪತಿ, ಶ್ರೀ ಮಹಾಬಲೇಶ್ವರ, ಶ್ರೀ ಪಾರ್ವತಿ ದೇವರುಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು, ಗೋಕರ್ಣ ಮಹಾಬಲೇಶ್ವರ ದೇವಾಲಯದ ಪ್ರಧಾನ ಅರ್ಚಕ ಮನೆತನದ ರಾಜಗೋಪಾಲ್ ಅಡಿ ಪೂಜಾ ಕೈಂಕರ್ಯ ನೆರವೇರಿಸಿಕೊಟ್ಟರು, ಈ ಸಂದರ್ಭದಲ್ಲಿ ಅರ್ಚಕ ಮನೆತನದ ಗುರು ಹಿರೇ,ಮಹಾಬಲೇಶ್ವರ ದೇವಾಲಯದ ಟ್ರಸ್ಟಿ ಮಹಾಬಲ ಉಪಾಧ್ಯಾಯ ಆನುವಂಶೀಯ ಉಪಾಧಿವಂತ ಮಂಡಳದ ಸಂಚಾಲಕ ಪ್ರಸನ್ನ ಜೋಗಭಟ್, ನರಸಿಂಹ ಶಾಸ್ತ್ರೀ, ತ್ರಯಂಬಕ ಗುರ್ಲ್ಲಿಂಗ, ರವಿ ಜೋಗಭಟ್,ಮುಂತಾದವರು ಉಪಸ್ಥಿತರಿದ್ದರು ಅಲ್ಲಿಂದ ರಾಜಗೋಪಾಲ ಅಡಿ ಗುರೂಜಿ ಅವರ ‘ಪುಣ್ಯಾಶ್ರಮಕ್ಕೆ ‘ಆಗಮಿಸಿ ಅಲ್ಪೋಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಸಚಿವ ಬಿ.ಸಿ.ನಾಗೇಶ್ ಅವರನ್ನು ರಾಜಗೋಪಾಲ್ ಅಡಿ ಗುರೂಜಿಯವರು ಸನ್ಮಾನಿಸಿ ದೇವರ ಪ್ರಸಾದ ವಿತರಿಸಿದರು. ಇದೆ ಸಂದರ್ಭದಲ್ಲಿ
ಸಂಸ್ಕೃತ್ ಸಾಹಿತ್ಯ ಶಿಕ್ಷಣವನ್ನು ಪದವಿ ಪೂರ್ವ ಶಿಕ್ಷಣಕ್ಕೆ ಸಮನಾಗಿ ಪರಿಗಣಿಸಿಕೊಡುವ ಕುರಿತು ರಾಜಗೋಪಾಲ್ ಅಡಿಯವರು ಮನವಿ ಸಲ್ಲಿಸಿದರು, ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಕುತೂಹಲ ಕೆರಳಿಸಿದ ಭೇಟಿ :ಜಿಲ್ಲೆಯ ಯಾವುದೇ ಶಾಸಕರುಗಳಿಗೆ ತಿಳಿಸದೆ ಖಾಸಗಿಯಾಗಿ ಗೋಕರ್ಣಕ್ಕೆ ಭೇಟಿನೀಡಿದ್ದು ಸಾರ್ವಜನಿಕವಾಗಿ ಕುತೂಹಲ ಕೆರಳಿಸಿದೆ ಇಲ್ಲಿಂದ ಅವರು ನಡುಮಸ್ಕೇರಿಯ ಪ್ರೌಢಶಾಲೆಗೆ ತೆರಳಿ ಮುಂದಕ್ಕೆ ಪ್ರಯಾಣ ಬೆಳೆಸಿದರು

Be the first to comment

Leave a Reply

Your email address will not be published.


*