ಜಿಲ್ಲಾ ಸುದ್ದಿಗಳು
ಶಿರಸಿ
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರ್ಕಾರ ಕೃಷಿ ವಿರೋಧಿ ನೀತಿ , ಕೈ ಬಿಟ್ಟು ರೈತರ ಪರವಾಗಿ ನಿಲ್ಲಲಿ ಎಂದು ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಹೆಗಡೆ ಹೇಳಿದರು. ಕಳೆದ ಎರಡು ವರ್ಷದಿಂದ ರೈತರಿಗೆ, ಅಡಕೆ ಬೆಳೆಗೆ ಕೊಳೆ ರೋಗ ಎಲ್ಲೆಡೆ ಆವರಿಸಿದ್ದರೂ ಸರ್ಕಾರದಿಂದ ಮೈಲು ತುತ್ತಕ್ಕೆ ನೀಡಲಾಗುವ ಸಹಾಯಧನ ರೈತರಿಗೆ ವಿತರಣೆಯಾಗಿಲ್ಲ ಎಂದು ತಿಳಿಸಿದರು.ಬಿಜೆಪಿ ಶಾಸಕರು, ಸಚಿವರು ಈ ಪ್ರದೇಶದಲ್ಲಿ ಇದ್ದರೂ, ಅಡಕೆ ಬೆಳೆಗಾರರ ಪರವಾಗಿ ಧ್ವನಿ ಎತ್ತುತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತವಿದೆ ಅದಲ್ಲದೆ ಶೋಭಾ ಕರಂದ್ಲಾಜೆಯವರೂ ಅಡಕೆ ಬೆಳೆಯುವ ಕ್ಷೇತ್ರದವರಾದರೂ ಸಹ ಸಚಿವರಾಗಿದ್ದರೂ ಕೂಡ ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಯುತ್ತಿದೆ ಎಂದರು.
*ಕಾಂಗ್ರೆಸ್ ಸರ್ಕಾರ ಇದ್ದಾಗ ಅಡಕೆ ಬೆಳೆಗಾರರಿಗೆ ತೀವ್ರ ಸಮಸ್ಯೆ ಆಗಿರುವ ಆಸಾಮಿ ಖಾತೆ ಸಾಲ ಮನ್ನಾ ಮಾಡುವ ಕುರಿತು ಯತ್ನ ನಡೆಸಿದಿದ್ದವು. ಆದರೆ, ಚುನಾವಣೆ ಬಂದ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ಸಾಲ ಮನ್ನಾ ಆಗಿರಲಿಲ್ಲ. ಅದರ ನಂತರ ಬಂದ ಬಿಜೆಪಿ ಸರ್ಕಾರ ಈ ವಿಷಯವನ್ನು ಸಂಪೂರ್ಣವಾಗಿ ಕಡೆಗಣಿಸಿ ಬಿಟ್ಟಿದೆ.
* ಅರಣ್ಯ ಹಕ್ಕು ಕಾಯ್ದೆಯಲ್ಲಿ ಅತಿಕ್ರಮಣ ಪಟ್ಟಾ ನೀಡುವ ವಿಷಯಕ್ಕೂ ಹಿನ್ನಡೆ ಆಗಿದೆ .
* ಶೆ.25 ಸರ್ಕಾರಕ್ಕೆ ಮತ್ತು ಶೆ. 75 ರೈತರಿಗೆ ಬೆಟ್ಟ ಪ್ರದೇಶದಲ್ಲಿ ಬೆಳೆದ ಬೆಳೆಯಲ್ಲಿ ಎಂಬ ಕಾನುನು ಜಾರಿ ಗೊಳಿಸಿದೆ. ಇದು ರೈತರಿಗೆ ವರಮಾನ ವಾಹಕವ. ಈಗಿನ ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಸೊಪ್ಪಿನ ಬೆಟ್ಟದ ಭುಮಿಯ ಹಕ್ಕನ್ನು ರೈತರಿಗೆ ನೀಡಬೇಕು.
* 10 ಸಾವಿರ ನೀಡುವ ಕೃಷಿ ಸಿಂಚಾಯಿ ಯೋಜನೆಯ ಹಣವನ್ನು ಇನ್ನೂ ಹೆಚ್ಚಿಸಬೇಕು.
*ತೋಟಗಾರಿಕೆ ಇಲಾಖೆಯ ಹಾರ್ಟಿಕ್ಲಿನಿಕ್ ಗೂ ಅನುದಾನ ನೀಡುವಿಕೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದ್ದು, ಇದರಿಂದಾಗಿ ರೈತರಿಗೆ ಸೂಕ್ತ ಸಮಯದಲ್ಲಿ ಮಾಹಿತಿ ಸಿಗದಂತಾಗಿದೆ.
*ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಕೃಷಿ ಹೊಂಡ ನಿರ್ಮಾಣಕ್ಕೂ ಹಣ ಮಂಜೂರು ಮಾಡಿಲ್ಲ .
*ಸೊಪ್ಪಿನ ಬೆಟ್ಟ ಬಳಕೆಯ ಕುರಿತು ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಹಲವು ಸೌಲಭ್ಯವನ್ನು ರೈತರಿಗೆ ನೀಡಿದೆ.
*ಈಗಿನ ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಸೊಪ್ಪಿನ ಬೆಟ್ಟದ ಭೂಮಿಯ ಹಕ್ಕನ್ನು ರೈತರಿಗೆ ನೀಡಬೇಕು.
ಈ ಸಂದರ್ಭದಲ್ಲಿ ದೀಪಕ ದೊಡ್ಡೂರು, ಜಗದೀಶ ಗೌಡ ಇತರರು ಉಪಸ್ತಿತರಿದ್ದರು.
Be the first to comment